23.3 C
Hubli
ಮೇ 8, 2024
eNews Land
ಸುದ್ದಿ

ಚನ್ನಪಟ್ಟಣದ ಜೀಪು ಖರೀದಿಸಿದ ಸಿಎಂ ಬೊಮ್ಮಾಯಿ

ಎನ್ಎಲ್ ಬೆಳಗಾವಿ: ಉತ್ತಮ ಮಾರುಕಟ್ಟೆ ಅವಕಾಶಗಳನ್ನು ಒದಗಿಸುವ ಮೂಲಕ ಗುಡಿ ಹಾಗೂ ಗೃಹ ಕೈಗಾರಿಕೆಗಳ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಬೆಳಗಾವಿಯಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಸೃಜನಶೀಲ ಸೃಷ್ಟಿಗೆ ಅವಕಾಶವಿರುವ ವಸ್ತುಪ್ರದರ್ಶನದಿಂದ ಸ್ವಸಹಾಯ ಸಂಘಗಳ ಉತ್ಪನ್ನಗಳ ಮೂಲಕ ಸ್ತ್ರೀ ಶಕ್ತಿಯ ಪರಿಚಯ ನನಗಾಯಿತು. ಇಂತಹ ಪ್ರಯತ್ನ ನಮ್ಮ ರಾಜ್ಯದಲ್ಲಾಗಿದ್ದು ಹೆಮ್ಮೆಯ ವಿಷಯ. ಪ್ರತಿಯೊಬ್ಬ ಕನ್ನಡಿಗರೂ ಗೌರವಯುತವಾಗಿ ದುಡಿಯಬೇಕೆಂಬುದು ಸರ್ಕಾರದ ಉದ್ದೇಶ. ಕಾಯಕಕ್ಕೆ ಇಚ್ಛಾಶಕ್ತಿಯ ಜೊತೆಗೆ ಅವಕಾಶಗಳು ಬೇಕು. ದುಡಿಯುವವರಿಗೆ ಅವಕಾಶವನ್ನು ಒದಗಿಸುವುದು ಸರ್ಕಾರದ ಹಾಗೂ ಸಮಾಜದ ಕರ್ತವ್ಯ. ರಾಜ್ಯದ ಪ್ರಗತಿಗಾಗಿ, ಪ್ರತಿಯೊಂದು ಕುಟುಂಬವೂ ಕೂಡ ಸ್ವಾಭಿಮಾನ ಹಾಗೂ ಸಂತೋಷದ ಬದುಕನ್ನು ನಡೆಸುವ ಸಲುವಾಗಿ ಇಂತಹ ಕಾರ್ಯಕ್ರಮಗಳ ಮೂಲಕ ಸರ್ಕಾರ ಸಹಕಾರ ನೀಡಲಿದೆ ಎಂದರು.

ಇಡೀ ದೇಶದಲ್ಲಿ ತಲಾವಾರು ಆದಾಯದಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ. ಕೇವಲ 30 % ಜನ ತಲಾವಾರು ಆದಾಯದ ಹೆಚ್ಚಳಕ್ಕೆ ಕಾರಣರಾಗಿದ್ದಾರೆ. ಉಳಿದ 70% ಜನ ಬದುಕಿನ ನಿರಂತರತೆಗೆ ಕೆಲಸ ಮಾಡುತ್ತಿದ್ದಾರೆ. ಈ 70% ಜನ ಆರ್ಥಿಕ ಸ್ಥಿತಿ ಉತ್ತಮಗೊಳಿಸಲು ಸರ್ಕಾರ ಸಹಕಾರ ನೀಡಲಿದೆ. ಈ ಕುಶಲಕರ್ಮಿಗಳ ಆರ್ಥಿಕ ಸಬಲೀಕರಣದ ಮೂಲಕ ರಾಜ್ಯದ ಜಿಡಿಪಿಗೆ ಸಹಾಯವಾಗುತ್ತದೆ. ರಾಜ್ಯವನ್ನು ಕಟ್ಟಲು ಪ್ರತಿಯೊಬ್ಬರಿಗೂ ದುಡಿಯುವ ಅವಕಾಶ ನೀಡಬೇಕು. ದುಡಿಯುವವರ ಆದಾಯ ಹೆಚ್ಚಳವಾದಾಗ, ವ್ಯಾಪಾರ ಹೆಚ್ಚಾಗಿ ಬೇರೆ ರೂಪದಲ್ಲಿ ತೆರಿಗೆ ಬರುತ್ತದೆ. ರಾಜ್ಯದ ಒಟ್ಟು ತಲಾವಾರು ಆದಾಯವೂ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು, ಮಳಿಗೆಯೊಂದರಲ್ಲಿ 600 ರೂ. ಮೊತ್ತದ ಚನ್ನಪಟ್ಟಣ ಗೊಂಬೆಗಳ ಆಟಿಕೆಗಳನ್ನು ಖರೀದಿಸಿರು.

Related posts

ಆಸ್ಪತ್ರೆಗೆ ಮಗು ತೋರಿಸಲು ಬಂದ ದಂಪತಿ ಅಪಘಾತದಲ್ಲಿ ಸಾವು, ಮಗು ಸ್ಥಿತಿ ಹೇಗಿದೆ?

eNewsLand Team

ಕೊಚುವೇಲಿ-ಬೆಂಗಳೂರು ನಡುವೆ ವಿಶೇಷ ರೈಲು ಆರಂಭ

eNEWS LAND Team

ಮಾಡುವಂತಿರಬೇಕು ಮಾಡದಂತಿರಬೇಕು, ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು.

eNEWS LAND Team