34 C
Hubli
ಮಾರ್ಚ್ 23, 2023
eNews Land
ಸುದ್ದಿ

ಹಾವೇರಿ: ಜಾನುವಾರುಗಳಿಗೆ ಒಂದು ತಿಂಗಳ ಲಸಿಕಾ ಕಾರ್ಯಕ್ರಮ

Listen to this article

ಇಎನ್ಎಲ್ ಹಾವೇರಿ

ರಾಷ್ಟ್ರೀಯ ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಾನುವಾರುಗಳಿಗೆ ಎರಡನೇ ಸುತ್ತಿನ ಕಾಲುಬಾಯಿ ಬೇನೆ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ಜಿಲ್ಲೆಯಲ್ಲಿ ಡಿಸೆಂಬರ್ 16 ರಿಂದ ಒಂದು ತಿಂಗಳ ಕಾಲ ಜರುಗಲಿದ್ದು, ಲಸಿಕೆಯಿಂದ ಯಾವುದೇ ಜಾನುವಾರು ಹೊರಗುಳಿಯದಂತೆ ಹಾಗೂ ಯಾವುದೇ ಲೋಪವಾಗದಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಲಸಿಕಾ ಕಾರ್ಯಕ್ರಮದ ಪೂರ್ವಸಿದ್ಧತೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಸಿಕಾ ಕಾರ್ಯಕ್ರಮಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಂಡು ವ್ಯಾಪಕ ಪ್ರಚಾರ ನೀಡಿ ಹಾಗೂ ಲಸಿಕಾ ಕಾರ್ಯಕ್ರಮಕ್ಕೆ ನಿಯೋಜಿಸಿದ ಸಿಬ್ಬಂದಿಗಳು ನಿಗಧಿತ ಅವಧಿಯಲ್ಲಿ ಲಸಿಕೆ ನೀಡಲು ಹಾಗೂ ಆನ್‍ಲೈನ್ ಅಪ್‍ಲೋಡ್‍ಗೆ ಕ್ರಮವಹಿಸಬೇಕು. ಕರ್ತವ್ಯ ಲೋಪವ್ಯಸಗಿದರೆ ಸೂಕ್ತ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಜಾನುವಾರುಗಳ ಐತನ ಆಸ್ತಿ, ಅವುಗಳ ರಕ್ಷಣೆಗೆ ಸರ್ಕಾರ ಕಾಲಕಾಲಕ್ಕೆ ಲಸಿಕೆ ಹಾಕುವ ಮೂಲಕ ಮತ್ತು ರೋಗ ಪೀಡಿತ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ಮೂಲಕ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಎಲ್ಲ ಕ್ರಮಗಳನ್ನು ಪಶುಪಾಲನಾ ಇಲಾಖೆಯಿಂದ ಕೈಗೊಳ್ಳಲಾಗುತ್ತಿದೆ. ಜಾನುವಾರುಗಳಿಗೆ ಲಸಿಕೆ ಹಾಕಲು ಮನೆಗೆ ಬರುವ ಸಿಬ್ಬಂದಿಗಳಿಗೆ ಜಾನುವಾರು ಮಾಲಿಕರು ಅಗತ್ಯ ಸಹಕಾರ ನೀಡುವ ಮೂಲಕ ಲಸಿಕಾ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್ ಅವರು ಮಾತನಾಡಿ, ಕಾಲುಬಾಯಿ ಬೇನೆ ರೋಗವು ಜಾನುವಾರುಗಳಿಗೆ ಮಾರಕವಾಗಿದ್ದು, ಪ್ರತಿಯೊಬ್ಬ ಜಾನುವಾರು ಮಾಲಿಕರು ಯಾವುದೇ ಹಿಂಜರಿಕೆ ಇಲ್ಲದೆ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ಜಾನುವಾರುಗಳನ್ನು ರೋಗದಿಂದ ರಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಲಸಿಕಾ ಕಾರ್ಯಕ್ರಮದ ಕುರಿತು ಪೋಸ್ಟರ್, ಬ್ಯಾನರ್ ಮೂಲಕ ಜಾಗೃತಿ ಮೂಡಿಸಿ. ಗ್ರಾಮ ಪಂಚಾಯತಿಗಳಿಗೆ ಡಂಗುರ ಸಾರುವ ಮೂಲಕ ಪ್ರಚಾರ ನೀಡಲು ಸೂಚನೆ ನೀಡಲಾಗುವುದು. ಲಸಿಕಾ ಸಂದರ್ಭದಲ್ಲಿ ತುರ್ತು ಔಷಧಿಗಳನ್ನು ಸಂಗ್ರಹಿಸಿಟ್ಟುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಶು ಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ರಾಜೀವ ಕೂಲೇರ ಅವರು ಮಾತನಾಡಿ, ಮನೆ ಮನೆಗೆ ತೆರಳಿ ಲಸಿಕೆ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಹಸು, ಎಮ್ಮೆ, ಎತ್ತು ಹಾಗೂ ಹಂದಿ ಸೇರಿದಂತೆ 3,46,561 ಜಾನುವಾರುಗಳನ್ನು ಗುರುತಿಸಲಾಗಿದೆ. ಈ ಪೈಕಿ ಗರ್ಭಧರಿಸಿದ, ಅನಾರೋಗ್ಯದ ಹಾಗೂ ಮರಣಹೊಂದಿದ ಜಾನುವಾರುಗಳನ್ನು ಹೊರತುಪಡಿಸಿ 3.20 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿಹಾಕಿಕೊಳ್ಳಲಾಗಿದೆ. 2961 ಬ್ಲಾಕ್‍ಗಳನ್ನು ರಚಿಸಲಾಗಿದೆ ಹಾಗೂ 261 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 3,46,550 ಡೋಸ್ ಲಸಿಕೆ ಹಾಗೂ 3.50 ಲಕ್ಷ ಸಿರಿಂಜ್‍ಗಳ ಸರಬರಾಗಿರುತ್ತದೆ. ಎಲ್ಲ ತಾಲೂಕುಗಳಿಗೆ ಹಂಚಿಕೆ ಮಾಡಲಾಗಿದೆ. ಲಸಿಕೆಯಿಂದ ಹೊರಗುಳಿದ ಜಾನುವಾರಿಗಳಿಗೆ ಲಸಿಕೆ ನೀಡಲು ಮತ್ತೆ 15 ದಿನ ಹೆಚ್ಚುವರಿ ಅವಧಿ ನೀಡಲಾಗಿದೆ. ಜಾನುವಾರುಗಳಿಗೆ ಈಗಾಗಲೇ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗಿದೆ. ಲಸಿಕೆ ನೀಡುವ ಸಿಬ್ಬಂದಿ ಆನ್‍ಲೈನ್ ಮೂಲಕ ಲಸಿಕೆ ನೀಡಿರುವ ಬಗ್ಗೆ ಮಾಹಿತಿ ಅಲ್‍ಪೋಡ್ ಮಾಡಬೇಕಾಗುತ್ತದೆ. ಇದಕ್ಕಾಗಿ ಅವರಿಗೆ ಪ್ರತ್ಯೇಕ ಯೂಸರ್ ಐಡಿ, ಪಾಸ್‍ವರ್ಡ್ ನೀಡಲಾಗಿದೆ. ಆನ್‍ಲೈನ್ ಅಪ್‍ಲೋಡ್‍ನಿಂದ್ ಸುಲಭವಾಗಿ ಲಸಿಕಾ ಮಾಹಿತಿ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಕೆ.ಎಂ.ಎಫ್. ಅಧಿಕಾರಿ ಹೆಗಡೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ತಾಲೂಕಾ ಪಶು ಸಂಗೋಪನಾ ಇಲಾಖೆ ಪಶು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಹುಬ್ಬಳ್ಳಿಗೆ ಮಂಕಿ ಕ್ಯಾಪ್ ಹಾಕೊಂಡು ರಾಬರಿಗೆ ಬಂದವ್ ಅಂದರ್!!! ಪಿನ್ ಟು ಪಿನ್ ಡಿಟೈಲ್ ಇಲ್ಲಿದೆ

eNewsLand Team

ಕಡಲೆ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ಅಮರಣ ಉಪವಾಸ ಸತ್ಯಾಗ್ರಹ

eNEWS LAND Team

ಮೋದಿ ಮೋದಿಯೇ ನೆಹರು ನೆಹರುನೇ‌ ಎಂದು ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟಾಂಗ್

eNEWS LAND Team