31 C
Hubli
ನವೆಂಬರ್ 6, 2024
eNews Land
ಆಧ್ಯಾತ್ಮಿಕ ಸುದ್ದಿ

ಮಾಡುವಂತಿರಬೇಕು ಮಾಡದಂತಿರಬೇಕು, ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು.

ಸುದ್ದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೊಳ್ಳಿ ನಮಗೆ ಬೆಂಬಲಿಸಿ. ದಯವಿಟ್ಟು ಲೈಕ್ & ಶೇರ್

ಸುದ್ದಿ, ಜಾಹೀರಾತು, ಬ್ಯುಸಿನೆಸ್ ಪ್ರಮೋಷನ್ ಹಾಗೂ ಮಾಧ್ಯಮ ಸಲಹೆಗಾಗಿ ಸಂಪರ್ಕಿಸಿರಿ.
(ವರದಿಗಾರರು ಬೇಕಾಗಿದ್ದಾರೆ)
ಮೊಬೈಲ್ :+91 9141651260
ಇಮೇಲ್ : enewsland@gmail.com
________________________________________________

ಇಎನ್ಎಲ್‌ ಅಣ್ಣಿಗೇರಿ: ಶರಣರು ಶಿವನ ಅನುಭವಿಸಿ ಮಾಡಿದ ಕೆಲಸ ಕಾಯಕ, ನೀಡಿದ್ದೆಲ್ಲ ದಾಸೋಹ, ನಿತ್ಯ ಅರ್ಚನ, ಅರ್ಪಣ, ಅನುಭಾವ ಕಾರ್ಯಕ್ಕೆ ತಮ್ಮಿಷ್ಟದ ಕಾಯಕ ಕೈಗೊಂಡು ಸತ್ಯಶುದ್ಧ ಮನಸ್ಸಿನಿಂದ ಮಾಡುತ್ತಿದ್ದರೂ ವಿನಹಃ ಉಪಜೀವನದ ಹೊಟ್ಟೆ ಪಾಡಿಗಲ್ಲ. ಶಿವನಿಗಾಗಿ, ಶಿವಾನುಭವದಿಂದ ಅವರ ದುಡಿಮೆ ಆರಾಧನೆಗಳು ನಡೆಯುತ್ತಿದ್ದವು ಎಂದು ನಿಡಸೋಸಿ ದುರದುಂಡೇಶ್ವರ ಸಿದ್ಧಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಶ್ರೀ ಆರ್ಶೀವಚನದಲ್ಲಿ ನುಡಿದರು. ಮಣಕವಾಡ ಅನ್ನದಾನೇಶ್ವರ ಮಠದ ಲಿಂ.ಮೃತ್ಯುಂಜಯ ಶ್ರೀಗಳ ನಾಲ್ಕನೇ ದಿನದ ಶಿವಾನುಭವ ಹಾಗೂ ಸನ್ಮಾನ ಸಮಾರಂಭದಲ್ಲಿ ಸಾನಿಧ್ಯವಹಿಸಿ ಮಾತನಾಡಿದರು.“ಮಾಡುವಂತಿರಬೇಕು ಮಾಡದಂತಿರಬೇಕು. ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು” ಕಲ್ಯಾಣದ ಶರಣರು ಕಾರ್ಯ ವ್ಯಷ್ಟಿಮಟ್ಟದಲ್ಲಿ ಉಳಿಯದೆ ಸಮಷ್ಟಿ ರೂಪತಾಳಿತು. ಅನುಭವ ಮಂಟಪದಲ್ಲಿ ಶಿವಾನುಭವಗೋಷ್ಠಿ, ಚಿಂತನ-ಮoಥನ ಬಾಳಿನ ಮಾರ್ಗದಲ್ಲಿ ಅನೇಕ ಸಮಸ್ಯೆ ಪರಿಹರಿಸಿಕೊಳ್ಳುತಿದ್ದರು. ಶರಣರೆಲ್ಲರೂ ಕೂಡಿ ದುಡಿದರು. ಕೂಡಿ ಉಂಡರು, ಕೂಡಿ ಬಾಳಿದರು.ಕೂಡಿ ಬದುಕಿದರು.

ಇನ್ನೊಬ್ಬರ ಹಂಗಿಲ್ಲದೆ ಮತ್ತೊಬ್ಬರಿಗೆ ಹೊರೆಯಾಗದೆ ಜೀವನ ಹಸನಮಾಡಿಕೊಳ್ಳುವ ಮಾರ್ಗ ತೋರಿದರು. ಆ ನಿಟ್ಟಿನಲ್ಲಿ ಭಿನ್ನ-ವರ್ಗ, ಮತ, ವೃತ್ತಿಗೆ ಸೇರಿದ ಅಸಂಖ್ಯಾತ ಭಕ್ತಸಮೂಹ “ಕರು ತಾಯಿಯ ಹಂಬಲಿಸಿ ಬರುವಂತೆ” ಮಣಕವಾಡದ ಲಿಂ.ಮೃತ್ಯುoಜಯ ಶ್ರೀಗಳ ಅಜ್ಜನ ಸಂಭ್ರಮಕ್ಕೆ ಭಕ್ತನು ಭಕ್ತನಕಾಂಬುದು ಸದಾಚಾರವೆಂಬoತೆ ಧಾವಿಸಿ ಬಂದು ಶಿವಾನುಭವ ಕಾರ್ಯಕ್ರಮದಲ್ಲಿ ತೊಡಗಿರುವದು ಶ್ಲಾಘನೀಯವೆಂದು ನುಡಿದರು. ಹಾಲಕೇರಿ ಅನ್ನದಾನೇಶ್ವರಮಠದ ಮುಪ್ಪಿನ ಬಸವಲಿಂಗ ಶ್ರೀ ಆರ್ಶೀವಚನದಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ, ನೈತಿಕ -ಸಾಂಸ್ಕೃತಿಕ ಸುಂದರ ಬದುಕು ಸಮಾಜ ರೂಪಿಸಿಕೊಳ್ಳುವ ಮೂಲಕ ಇಂದಿನ ಜಾಗತಿಕ ಸಮಸ್ಯೆ-ಸವಾಲುಗಳಿಗೆ ಎದೆಗೊಟ್ಟು ನಿಲ್ಲಬೇಕು. ಬಸವಾದಿ ಶರಣರ ಬಸವತತ್ವವೊಂದೇ ಇಂದಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂಬುದನ್ನು ಕಂಡುಕೊಳ್ಳಬೇಕು. ಇತರರಿಗೂ ಮನಗಾಣಿಸಬೇಕು. ಜಗತ್ತಿಗೂ ಎತ್ತಿ ತೋರಿಸಿಕೊಡಬೇಕು. ಅಂದಾಗ ಮಾತ್ರ ಬಸವಣ್ಣನವರ ಹಾಗೂ ಶರಣರ ಆತ್ಮಗಳಿಗೆ ತೃಪ್ತಿ. ಅದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ. ತತ್ವಾನುಷ್ಠಾನವಿಲ್ಲದ ಕೇವಲ ತೋರಿಕೆಯ ಆಚರಣೆಯಿಂದ ಪ್ರಯೋಜನವಿಲ್ಲ. ಅಜ್ಜನ ಸಂಭ್ರಮದಲ್ಲಿ ಪಾಲ್ಗೊಂಡಿರುವ ಸದ್ಭಕ್ತರಲ್ಲಿ ಅರಿದು ಆಚರಿಸುವ ಗುಣಲಕ್ಷಣಗಳು ಮೂಡಿದರೆ ಲಿಂ.ಮೃತ್ಯುoಜಯ ಶ್ರೀಗಳ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ಪುನಿತರಾಗುತ್ತೀರಿ ಎಂದು ನುಡಿದರು.

ಅಭಿವನ ಮೃತ್ಯುಂಜಯ ಶ್ರೀಗಳು ಆರ್ಶೀವಚನದಲ್ಲಿ ಮಾನವ ತಾನು-ತನ್ನದು-ಎಲ್ಲವೂ ತನಗೆ ಇರಬೇಕೆಂಬ ದುರಾಶೆಯಿಂದ ಸೈತಾನನ ಬೆನ್ನು ಹತ್ತಿ ಅಸಮಾನತೆಯ ಕಂದಕವನ್ನು ಕಡಿಯುತ್ತ ಸಾಗಿದ್ದಾನೆ. ಮನುಷ್ಯನ ದುರಾಶೆಯ ಕತ್ತಲೆಯನ್ನು ದೂರಿಕರಿಸಿ ಅರಿವಿನ ದೀಪಬೆಳಗಲು ಶರಣರು-ಸಂತರು ಕಾಲಕಾಲಕ್ಕೆ ಸದ್ಭೋಧೆಯ ಬೀಜವನ್ನು ಬಿತ್ತುತ್ತಲೇ ಬಂದಿದ್ದಾರೆ. ಆದರೂ ಜ್ಞಾನೋದಯದ ಸೂರ್ಯ ಇನ್ನೂ ಮೂಡದೆ ಕತ್ತಲೆಯ ಕಾಳದಲ್ಲಿಯೇ ಮುನ್ನಡೆಯುವ ಸ್ಥಿತಿ ಉಂಟಾಗಿರೋದು ವಿಷಾದನೀಯ.
ಮನುಷ್ಯನ ಆಶೆಗೆ ಮಿತಿಯಿಲ್ಲ. ಅತಿ ಸಂಗ್ರಹ ಪ್ರವೃತ್ತಿ ಮಾನವನ ಸ್ವಾರ್ಥದ ಮೂಲ ಬೇರು. ಇದು ಎಲ್ಲಾ ಕಾಲದಲ್ಲಿಯೂ ಇದೆ. ಅಗತ್ಯಕ್ಕಿಂತ ಹೆಚ್ಚಿನ ಸಂಗ್ರಹ ಇನ್ನೊಬ್ಬನ ಅನ್ನ ಕಸಿದುಕೊಂಡoತೆ.ಈ ಜಗತ್ತು ಪರಮಾತ್ಮನ ಪರಮಸೃಷ್ಟಿ. ಪ್ರತಿಯೊಂದು ವಸ್ತು ಅವನು ನೀಡಿದ ವರದಾನ. ಎಲ್ಲರೂ ಸಮಾನಾಗಿ ಹಂಚಿಕೊoಡು ಸಂತೃಪ್ತಿಯ ಜೀವನ ಸಾಗಿಸಲಿ ಎಂಬುದು ಅವನ ನೀತಿ.ಎಂದು ನುಡಿದರು.
ಈ ಸಂದರ್ಭದಲ್ಲಿ ಮುಖ್ಯಅತಿಥಿಗಳಾದ ಚೇತನ ಹಿರೇಕೆರೂರು, ಬೀರಪ್ಪ ಖಂಡೇಕಾರ, ರಾಜಣ್ಣ ಕೊರವಿ, ಅಶ್ವಿನಿ ಮೋಹನ ಅಸುಂಡಿ, ಉಷಾ ಮಹೇಶ ದಾಸರ, ಗೂಳಪ್ಪ ಮುಶಿಗೇರಿ, ಅನಿಲ ಅಬ್ಬಿಗೇರಿ, ಸನ್ಮಾನಿಸಿ ಗೌರವಿಸಿದರು.ಹುಬ್ಬಳ್ಳಿ ಸುಜಾತಾ ಭರತ ನಾಟ್ಯ ತಂಡದವರಿoದ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಿದವು. ತಾಲೂಕಿನ ಸುತ್ತಮುತ್ತಲಿನ ಸದ್ಭಕ್ತರು ಭಾಗವಹಿಸಿದ್ದರು. ವಿರೇಶ ಕುಬಸದ ನಿರೂಪಿಸಿದರು.

Related posts

ಧಾರವಾಡ ಆಧಾರ್ ಕೇಂದ್ರ ಸ್ಥಾಪನೆ, ಅಲ್ಲಿ ಇಲ್ಲಿ ಅಲೆಯೋ ಅಗತ್ಯವಿಲ್ಲ.. ಇಲ್ಲೇ ಬನ್ನಿ !!

eNEWS LAND Team

ಗ್ರಾಮೀಣ ಪತ್ರಕರ್ತರ ಆರೋಗ್ಯ ಕಾರ್ಡ್ ಬಸ್‌ಪಾಸ್ ಸೌಲಭ್ಯಕ್ಕೆ ಬಜೆಟ್‌ನಲ್ಲಿ ಆದ್ಯತೆ: ಸಿಎಂ

eNewsLand Team

ಲಿಂಗಾಯತ ಸಿಎಂಗಳಬಗ್ಗೆ ಸಿದ್ರಾಮಯ್ಯ ಹೇಳಿಕೆಗೆ ಜನ ಪಾಠ ಕಲಿಸುತ್ತಾರೆ: ಸಿಎಂ ಬೊಮ್ಮಾಯಿ‌

eNEWS LAND Team