35 C
Hubli
ಮಾರ್ಚ್ 28, 2023
eNews Land
ಸುದ್ದಿ

ಸೈನಿಕರಿಗೆ ಗುಡ್ ನ್ಯೂಸ್!! ಶೌರ್ಯ ಪ್ರಶಸ್ತಿ ವಿಜೇತರಿಗೆ ಇನ್ಮೇಲೆ ಭರ್ಜರಿ ನಗದು ಬಹುಮಾನ? ಎಷ್ಟು ನೋಡಿ

Listen to this article

ಇಎನ್ಎಲ್ ಇನ್ಫಾರ್ಮೇಶನ್ ಸೆಂಟರ್

ಶೌರ್ಯ ಪ್ರಶಸ್ತಿ ಪುರಸ್ಕೃತರಿಗೆ ರಾಜ್ಯ ಸರ್ಕಾರವು ನೀಡುತ್ತಿದ್ದ ನಗದು ಮೊತ್ತವನ್ನು ಪರಿಷ್ಕರಿಸಲಾಗಿದೆ.

ಪರಮವೀರ ಚಕ್ರ ಪುರಸ್ಕೃತರಿಗೆ ಈ ಮೊದಲು ₹ 25 ಲಕ್ಷ ನೀಡಲಾಗುತ್ತಿತ್ತು. ಇದೀಗ ಈ ಮೊತ್ತವನ್ನು ₹ 1.5 ಕೋಟಿಗೆ ಹೆಚ್ಚಿಸಲಾಗಿದೆ.

ಮಹಾವೀರ ಚಕ್ರ ಪುರಸ್ಕೃತರಿಗೆ ಈ ಮೊದಲು ₹ 12 ಲಕ್ಷ ನೀಡಲಾಗುತ್ತಿತ್ತು. ಈ ಮೊತ್ತವನ್ನು ₹ 1 ಕೋಟಿ‌ಗೆ ಹೆಚ್ಚಿಸಲಾಗಿದೆ.

ಅಶೋಕ ಚಕ್ರ ಪುರಸ್ಕೃತರಿಗೆ ₹ 25 ಲಕ್ಷದಿಂದ ₹ 1.5 ಕೋಟಿ,ಕೀರ್ತಿ ಚಕ್ರ ಪುರಸ್ಕೃತರಿಗೆ ಈ ಮೊದಲು ₹12 ಲಕ್ಷ ನೀಡಲಾಗುತ್ತಿತ್ತು. ಅದನ್ನು ಈಗ ₹ 1 ಕೋಟಿಗೆ ಹೆಚ್ಚಿಸಲಾಗಿದೆ.

ವೀರ ಚಕ್ರ ಪುರಸ್ಕೃತರಿಗೆ ಈ ಮೊದಲು ₹ 8 ಲಕ್ಷ ನೀಡಲಾಗುತ್ತಿತ್ತು. ಇದೀಗ ಈ ಮೊತ್ತವನ್ನು ₹ 50 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಶೌರ್ಯ ಚಕ್ರ ಪುರಸ್ಕೃತರಿಗೆ ನೀಡುತ್ತಿದ್ದ ಮೊತ್ತವನ್ನು ₹ 8 ಲಕ್ಷದಿಂದ ₹ 50 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಸೇನಾ ಮೆಡಲ್‌ ಪುರಸ್ಕೃತರಿಗೆ ಈ ಮೊದಲು ₹ 2 ಲಕ್ಷ ಪುರಸ್ಕಾರ ನೀಡಲಾಗುತ್ತಿತ್ತು. ಈ ಮೊತ್ತವನ್ನು ಈಗ ₹ 15 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಮೆನ್​ಷನ್​ ಎನ್​ ಡಿಸ್ಪ್ಯಾಚ್ ಪುರಸ್ಕೃತರಿಗೆ ಈ ಮೊದಲು ₹ 2 ಲಕ್ಷ ನೀಡಲಾಗುತ್ತಿತ್ತು. ಈ ಮೊತ್ತವನ್ನು ₹15 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Related posts

ವಿಧಾನ ಪರಿಷತ್ ಚುನಾವಣೆ; ಮಂದಗತಿಯ ಮತದಾನ

eNewsLand Team

ಕಿಮ್ಸ್‌ನಲ್ಲಿ ಪ್ರಥಮ ಬಾರಿಗೆ ಯಶಸ್ವಿ ತೆರೆದ ಹೃದಯ ಚಿಕಿತ್ಸೆ: ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂತರತಾನಿ

eNEWS LAND Team

ಅವನೂ ಗೆದ್ದಿಲ್ಲ, ಇವನೂ ಸೋತಿಲ್ಲ!! ಬೆಟ್ಟಿಂಗ್ ಮಾಡ್ತಿದ್ದೋರು ಮಾವನ ಮನೆಗೆ!!

eNewsLand Team