25 C
Hubli
ಮೇ 10, 2024
eNews Land
ಸಣ್ಣ ಸುದ್ದಿ

ನವಲಗುಂದ ಪಟ್ಟಣದ ವಿನಾಯಕ ಪೇಟೆಯಲ್ಲಿರುವ ಇತಿಹಾಸ ಪ್ರಸಿದ್ದ ಶ್ರೀ ಗಣಪತಿ ದೇವಸ್ಥಾನದ ಮಹಾರಥೋತ್ಸವ

ಇಎನ್ಎಲ್ ನವಲಗುಂದ : ಪಟ್ಟಣದ ವಿನಾಯಕ ಪೇಟೆಯಲ್ಲಿರುವ ಇತಿಹಾಸ ಪ್ರಸಿದ್ದ ಗಣಪತಿ ದೇವಸ್ಥಾನದ ಬುಧವಾರ ಶ್ರೀ ಗಣಪತಿಯ ಮಹಾರಥೋತ್ಸವ ಅತೀ ವಿಜೃಂಭಣೆಯಿಂದ ನಡೆಯಿತು. ಗಣೇಶ ಹಬ್ಬದಿಂದ ಶ್ರೀ ಗಣಪತಿಯ ದೇವಸ್ಥಾನದಲ್ಲಿ ಅಭಿಷೇಕ ವಿಶೇಷ ಪೂಜೆಯೊಂದಿಗೆ ಪ್ರತಿನಿತ್ಯ ಸಂಜೆ ಮೊದಲ ದಿನ ಸಿಂಹ ವಾಹನ, ಎರಡನೆ ದಿನ ಮಯೂರ, ಮೂರನೆ ದಿನ ಮೂಷಿಕ ವಾಹನ, ನಾಲ್ಕನೆ ದಿನ ನಂದಿ, ಐದನೆ ದಿನ ಗಂಡಭೇರುಂಡ, ಆರನೆ ದಿನ ಗರುಡ, ಏಳನೆ ದಿನ ಗಜವಾಹನ, ಎಂಟನೆ ದಿನ ಕಮಲಾಸನಾರೂಢನಾಗಿ ಕಂಗೊಳಿಸುತ್ತಾನೆ. ಎಂಟು ದಿನಗಳವರಿಗೂ ವಾಹನೋತ್ಸವ ಭಕ್ತರ ಗಮನ ಸೆಳೆಯಿತು. P ದಿನದಂದು 47 ಕೆ.ಜಿ ತೂಕದ ಪಂಚಲೋಹದ ಶ್ರೀ ಗಣಪತಿಯ ಮೂರ್ತಿ ವಿಶೇಷ ಅಭಿಷೇಕ ಹಾಗೂ ಪೂಜೆಯೊಂದಿಗೆ ಮಹಾರಥೋತ್ಸವ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಶ್ರೀ ಗಣಪತಿ ದೇವಸ್ಥಾನದಿಂದ ಪಟ್ಟಣದ ಪರ್ವತ ಮಲ್ಲಿಕಾರ್ಜುನ ದೇವಸ್ಥಾನದವರಿಗೆ ಮೆರವಣಿಗೆ ಮುಖಾಂತರ ಆಗಮಿಸಿ ಮರಳಿ ಗಣಪತಿ ದೇವಸ್ಥಾನಕ್ಕೆ ಬಂದು ರಥೋತ್ಸವ ಸಂಪನ್ನಗೊಂಡಿತು.

Related posts

ಕಲಘಟಗಿ: ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ

eNEWS LAND Team

ಡಿ.10 ರಂದು ಮದ್ಯ ಮಾರಾಟ ನಿಷೇಧ

eNEWS LAND Team

ಆಸ್ಪತ್ರೆಯಲ್ಲಿ ಬೆಂಕಿ ಅವಘಡ!!

eNEWS LAND Team