28 C
Hubli
ಸೆಪ್ಟೆಂಬರ್ 21, 2023
eNews Land
ಸಣ್ಣ ಸುದ್ದಿ

ಡಿ.10 ರಂದು ಮದ್ಯ ಮಾರಾಟ ನಿಷೇಧ

ಇಎನ್ಎಲ್ ಧಾರವಾಡ : ಕರ್ನಾಟಕ ವಿಧಾನ ಪರಿಷತ್ತಿನ ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಡಿಸೆಂಬರ್ 10 ರಂದು ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಅಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 11:59 ರವರೆಗೆ ಜಿಲ್ಲೆಯಾದ್ಯಂತ ಮದ್ಯದ ಅಂಗಡಿ, ಬಾರ್‍ಗಳನ್ನು ಬಂದ್ ಮಾಡಬೇಕು. ಎಲ್ಲ ರೀತಿಯ ಮದ್ಯ ತಯಾರಿಕಾ ಘಟಕಗಳು, ಮದ್ಯಸಾಗಾಣೆ, ಸಂಗ್ರಹಣೆ ನಿಷೇಧಿಸಲಾಗಿದೆ. ಹಾಗೂ ಮಾರಾಟ ಮಳಿಗೆಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ನಿತೇಶ ಕೆ. ಪಾಟೀಲ ಆದೇಶ ಹೊರಡಿಸಿದ್ದಾರೆ.

ಪ್ರಜಾಪ್ರತಿನಿಧಿ ಕಾಯ್ದೆ 1951 ಕಲಂ 135 (ಸಿ) ಅನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ, ಈ ಆದೇಶ ಹೊರಡಿಸಲಾಗಿದೆ. ಅಬಕಾರಿ ಉಪ ಆಯುಕ್ತರು, ಉಪ ಅಧೀಕ್ಷಕರು ಹಾಗೂ ವಿಚಕ್ಷಕದಳದ ಅಧಿಕಾರಿಗಳು ಈ ಆದೇಶ ಜಾರಿಗೊಳಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

Related posts

ಬಮ್ಮಿಗಟ್ಟಿಯಲ್ಲಿ ಅಂಕಲಗಿ ಅಡವಿ ಸಿದ್ದೇಶ್ವರ ಜಾತ್ರೆ

eNEWS LAND Team

ಶೇ.60 ಕ್ಕಿಂತ ಹೆಚ್ಚು ಅಂಕ ಪಡೆದ ಪ.ಜಾ ಮತ್ತು ಪ.ಪಂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ

eNEWS LAND Team

ಅಣ್ಣಿಗೇರಿ ತಾಲೂಕ ಹೂಗಾರ ಸಮಾಜ ಸೇವಾ ಘಟಕದಿಂದ ಶಿವಶರಣ ಮಾದಯ್ಯನವರ ಜಯಂತಿ

eNEWS LAND Team