ಇಎನ್ಎಲ್ ಶಿವಮೊಗ್ಗ :
ನಗರದ ಮೆಗ್ಗಾನ್ ಹಾಸ್ಪಿಟಲ್ ಮಹಿಳಾ ಪ್ರಸೂತಿ ವಿಭಾಗದ ಐಸಿಯುನಲ್ಲಿ ಭಾನುವಾರ ರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದ್ದು, ಯಾವುದೇ ಜೀವ ಹಾನಿ ಆಗಿಲ್ಲ.
ವಾರ್ಡ್ ಒಳಗಿನ ವಸ್ತುಗಳನ್ನು ಬೆಂಕಿಗೆ ಆಹುತಿಯಾಗಿದೆ. ಮಕ್ಕಳ ವಾರ್ಡ್ ನಲ್ಲಿರುವ ಒಬಿಜಿ ಐಸಿಯು ವಾರ್ಡ್ ನಲ್ಲಿ ವಿದ್ಯುತ್ ಶಾರ್ಟ್ ಸೆರ್ಕ್ಯೂಟ್ ನಿಂದಾಗಿ ಏಸಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತು. ನಂತರ ಇದು ವ್ಯಾಪಿಸಿತು.
ವಾರ್ಡ್ ನಲ್ಲಿ ಏಸಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಟ್ಟಡದ ಬಹುತೇಕ ವಾರ್ಡ್ ನ ವಿದ್ಯುತ್ ಕಡಿತವಾಗಿದೆ . ಒಬಿಜಿ ವಾರ್ಡ್ ನಲ್ಲಿದ್ದ ಇಬ್ಬರು ಮಹಿಳೆಯರು ಮತ್ತು ಮಕ್ಕಳನ್ನ ಬೇರೆಡೆ ಶಿಫ್ಟ್ ಮಾಡಲಾಗಿದೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸಿದ್ದಾರೆ.
ಡಿಹೆಚ್ಓ ರಾಜೇಶ್ ಸುರಗಿಹಳ್ಳಿ, ಮೆಗ್ಗಾನ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಶ್ರೀಧರ್ ಮತ್ತಿತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.