29 C
Hubli
ಮೇ 3, 2024
eNews Land
ಸಣ್ಣ ಸುದ್ದಿ

ಸಾಹಿತಿ ಅಮೃತೇಶ್ವರ ತಂಡರಗೆ ಮಕ್ಕಳ ಮಾಣಿಕ್ಯ ಪ್ರಶಸ್ತಿ

ಇಎನ್‌ಎಲ್‌ ಅಣ್ಣಿಗೇರಿ: ಹಿರಿಯಸಾಹಿತಿ ಅಮೃತೇಶ್ವರ ತಂಡರ 7 ಕವನ ಸಂಕಲನ ಲೇಖಕ, ಸಾಹಿತಿಗಳು, ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು. ಬದುಕಿನಲ್ಲಿ ಮಕ್ಕಳ ಭವಿಷ್ಯ ರೂಪಿಸಿದ ಶಿಕ್ಷಕರು ಸಾಹಿತಿ ಅಮೃತೇಶ್ವರ ತಂಡರ ಅವರಿಗೆ ಮಕ್ಕಳ ಮಾಣಿಕ್ಯ ಪ್ರಶಸ್ತಿ ಮಕ್ಕಳ ಸಾಹಿತ್ಯ ಪರಿಷತ್‌ನಿಂದ ನೀಡುತ್ತಿರೋದು ಶ್ಲಾಘನೀಯವೆಂದು ಸಾನಿಧ್ಯವಹಿಸಿದ ದಾಸೋಹಮಠದ ಶಿವಕುಮಾರ ಶ್ರೀಗಳು ನುಡಿದರು.

ಪಟ್ಟಣದ ಎಮ್.ವಿ.ಹೆಬಸೂರ ಕಟ್ಟಡದಲ್ಲಿ ತಾಲೂಕ ಮಕ್ಕಳ ಸಾಹಿತ್ಯ ಪರಿಷತ್ ಹಮ್ಮಿಕೊಂಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ತಾಲೂಕಿನ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತಿ ಅಮೃತೇಶ್ವರ ತಂಡರ ಅವರಿಗೆ ಮಕ್ಕಳ ಮಾಣಿಕ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಮಕ್ಕಳ ಮಾಣಿಕ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಅಮೃತೇಶ್ವರ ತಂಡರ ಮಾತನಾಡಿ, ಮಕ್ಕಳಲ್ಲಿರುವ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ, ಲಲಿತ ಕಲೆಗಳು, ಹಾಗೂ ಶೈಕ್ಷಣಿಕ ಸಾಧನೆಗೈದ ಮಕ್ಕಳ ಪ್ರತಿಭೆಗಳನ್ನು ಗುರ್ತಿಸಿ, ಪ್ರೋತ್ಸಾಹಿಸಿ ಸ್ಫೂರ್ತಿ ತುಂಬಲು ಮಕ್ಕಳ ಸಾಹಿತ್ಯ ಪರಿಷತ್ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ. ಮಕ್ಕಳ ಸಾಹಿತ್ಯ ಪರಿಷತ್ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ, ವೇದಿಕೆ ಕಲ್ಪಸಿ, ಪ್ರತಿಭೆಯನ್ನು ಗುರ್ತಿಸಿ, ಬೆಳಕು ಚೆಲ್ಲುವ, ಪರಿಣಾಮಕಾರಿ ಸೇವೆ ಸಲ್ಲಿಸುತಿದೆ. ರಾಷ್ಟ್ರದ ಉಜ್ವಲ ಭವಿಷ್ಯ ರೂಪಿಸುವ ಮಕ್ಕಳ ಸಾಹಿತ್ಯ ಪರಿಷತ್ ನೀಡಿದ ಪ್ರಶಸ್ತಿ ಸಂತಸ ತಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ ಧಾ.ಜಿ.ಮಸಾಪ ಅಧ್ಯಕ್ಷ ಸಂಜೀವ ಡುಮಕನಾಳ ಮಾತನಾಡಿ, ಮುಂದಿನ ಜಿಲ್ಲಾಮಟ್ಟದ ಮಕ್ಕಳ ಸಾಹಿತ್ಯ ಪರಿಷತ್ ಸಮ್ಮೇಳನ ಅಣ್ಣಿಗೇರಿಯಲ್ಲಿ ಮಾಡುವುದಾಗಿ ಹೇಳಿದರು.
ನಿಕಟಪೂರ್ವ ಕಸಾಪ ಅಧ್ಯಕ್ಷ ರವಿರಾಜ ವೇರ್ಣೆಕರ ಮಾತನಾಡಿ ತಾಲೂಕಿನ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿ ಸೇವೆ ಸಲ್ಲಿಸುತ್ತಿರುವ ಮಕ್ಕಳ ಸಾಹಿತ್ಯ ಪರಿಷತ್ ಕಾರ್ಯಚಟುವಟಿಕೆ ಶ್ಲಾಘನೀಯವಾಗಿದೆ ಎಂದರು.
ಮಕ್ಕಳ ಸಾಹಿತ್ಯ ಪರಿಷತ್‌ನಿಂದ, ಸಾಧನೆಗೈದ ಸಾಧಕರಾದ ಸ್ಕ್ಯಾಯ್ ರಾಷ್ಟ್ರ ಮಟ್ಟದ ಕ್ರೀಡಾಪಟು ಗಣೇಶ ಶಾನಭೋಗರ, ಕರಾಟೆ ರಾಜ್ಯಮಟ್ಟದ ಕ್ರೀಡಾಪಟು ಪ್ರಿಯಾಂಕ ಕೊಂಡಗೋಳಿ, ಚಿತ್ರಕಲೆ ಪ್ರತಿಭೆ ವಿರೇಶ ಕೊಂಡಿಕೊಪ್ಪ ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ಕಂದನ ಕಾವ್ಯ ವಾಚನ, ಮೋಜಿನ ಗಣಿತ ಪ್ರದರ್ಶನ, ನೃತ್ಯ, ಸಾಂಸ್ಕೃತಿಕ ಕಾರ್ಯಗಳು ಜರುಗಿದವು.
ಪ್ರಾಸ್ತವಿಕವಾಗಿ ಅಣ್ಣಿಗೇರಿ ತಾಲೂಕ ಕಸಾಪ ಆಧ್ಯಕ್ಷೆ ಡಾ.ಲಲಿತಾ ಸಾಲಿಮಠ ಮಾತನಾಡಿದರು. ವಿಜಯಗಂಗಾ ಹರ್ತಿಮಠ ಸಾಹಿತಿಗಳ ಕುರಿತು ನುಡಿನಮನ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಡಾ.ರಾಜೇಂದ್ರ ಗಡಾದ, ರಮಾನಂದ ಕಮತಗಿ, ರಜೀಯಾಬೇಗಂ ರೊಕ್ಕದಕಟ್ಟಿ, ಮಾಹಾಬಳೇಶ್ವರ ಹೆಬಸೂರ, ಆನಂದ ಕಲಾಲ, ಡಾ.ಪ್ರಕಾಶ ಹೂಗಾರ ಪಾಂಡುರoಗ ಓಸೇಕರ, ಡಾ.ಶಾಂತಾ ಲಕ್ಷೇಶ್ವರ, ಅಪಲಯ್ಯ ಮುಂಡರಗಿ, ವಿರುಪಾಕ್ಷಪ್ಪ ಉಳ್ಳೇಗಡ್ಡಿ, ರಂಜಿತಾ ಕಡಿಯವರ, ಈರಣ್ಣಾ ಅಕ್ಕಿ, ವಂದನಾ, ಶಂಭೂತಿ, ವಿದ್ಯಾ ವೀರಾಪುರಮಠ, ವಿಜಯಲಕ್ಷ್ಮೀ ಹಳ್ಳಿ, ಭರತ ಮಾಯಣ್ಣವರ, ಐಶ್ವರ್ಯ ಗುಡಗೇರಿ, ಯಶೋಧಾ ಮಿಸೀ, ಚಂದಾನ ಹಳ್ಳಿ, ರವಿರಾಜ ಕರ್ಲವಾಡ ಮಕ್ಕಳ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Related posts

ಅಣ್ಣಿಗೇರಿ: ಗಾಯಾಳು ರೈತ ಪರುಶರಾಮ ಅಣ್ಣಿಗೇರಿ: ಸಚಿವ ಮುನೇನಕೊಪ್ಪ ಸಾಂತ್ವಾನ

eNEWS LAND Team

ಉಚಿತ ಕೌಶಲ್ಯ ಆಧಾರಿತ ತರಬೇತಿಗೆ ಅರ್ಜಿ ಆಹ್ವಾನ

eNEWS LAND Team

ಸಂಶಿ ಬಸ್ ನಿಲ್ದಾಣದಲ್ಲಿ ದಿಢೀರ್ ಪ್ರತಿಭಟನೆ

eNEWS LAND Team