27 C
Hubli
ಏಪ್ರಿಲ್ 29, 2024
eNews Land
ಸುದ್ದಿ

ಜನಪದ ಕಲೆ ಆಧುನಿಕ ಕಲೆಗಳಿಗೆ ತಾಯಿಬೇರು: ವಿಜಯಶ್ರೀ ಹಿರೇಮಠ

ಇಎನ್‌ಎಲ್‌ ಅಣ್ಣಿಗೇರಿ: ಆಧುನಿಕ ಭರಾಟೆಯಲ್ಲಿ ಇಂದಿನ ಯುವ ಜನಾಂಗದವರು ಜಾನಪದವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಿಸಿಕೊಳ್ಳುವುದು ಸಂಪ್ರದಾಯವಾಗಿದೆ. ಯುವಕರು ಇಂದು ಜಾನಪದ ಕಲೆಗಳ ಬಗ್ಗೆ ಅರಿವು ಮೂಡಿಸುವ ಹಾಗೂ ಜನಪದ ಸಾಹಿತ್ಯದ ತಿಳುವಳಿಕೆಯನ್ನು ನೀಡುವಂತಹ ಕಾರ್ಯಕ್ರಮಗಳ ಅಗತ್ಯವಿದೆ ಎಂದು ಡಾ. ವಿಜಯಶ್ರೀ ಹಿರೇಮಠ ಹೇಳಿದರು.

ಪಟ್ಟಣದ  ಎಂ.ಬಿ.ಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದಿಂದ ಹಮ್ಮಿಕೊಂಡ ಜಾನಪದ ಹಾಗೂ ಜನಪದ ತೊಡಕು ಎನ್ನುವ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಂಶುಪಾಲ ಡಾ.ಮೋತಿಲಾಲ್ ರಾಠೋಡ್ ಮಾತನಾಡಿ, ಜನಪದ ಸಾಹಿತ್ಯ ಎಲ್ಲಾ ಮುದ ನೀಡುವಂತಹ ಸಾಹಿತ್ಯವಾಗಿದೆ. ಜನಸಾಮಾನ್ಯರಿಂದ ಸಾಮಾನ್ಯರಿಗಾಗಿ ರಚಿತವಾಗಿರುವ ಸಾಹಿತ್ಯದ ಪ್ರಕಾರವಾಗಿದೆ ಎಂದರು.
ಐಕ್ಯೂಎಸಿ.ಸಂಯೋಜಕಿ ಡಾ.ವಿದ್ಯಾ ಹಡಗಲಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರಹಾಕಲು ಇಂತಹ ವೇದಿಕೆ ಸದ್ಭಳಿಸಿಕೊಳ್ಳಬೇಕೆಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಅಣ್ಣಪ್ಪ ರೊಟ್ಟಗ್ವಾಡ ಪ್ರಾಸ್ತವಿಕವಾಗಿ ಮಾತನಾಡಿ ಜನಪಕ ಕಲೆಗಳು ಉಳಿಯಬೇಕಾದರೇ ಯುವಕರು ಹೆಚ್ಚು ಇಂತಹ ಜನಪದ ಸಾಹಿತ್ಯ ಮತ್ತು ಕ್ರೀಡೆಗಳಲ್ಲಿ ತೊಡಗಿಸಿಕೊಂಡರೇ ಜನಪದ ಉಳಿವು ಸಾಧ್ಯವೆಂದರು.
ಈ ಸಂದರ್ಭದಲ್ಲಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮುಖಸ್ಥರಾದ ಭಾರತಿ ಮಣ್ಣೂರ, ಕನ್ನಡ ವಿಭಾಗದ ಮುಖಸ್ಥ ಡಾ.ಕಿರಣಕುಮಾರ ರಾಯರ. ವಾಣಿಜ್ಯ (ಕಾಮರ್ಸ್) ವಿಭಾಗ ಮುಖಸ್ಥೆ ಶೋಭಾ ಎನ್. ಸಿಬ್ಬಂದಿ ವರ್ಗ, ಉಪಸ್ಥಿತರಿದ್ದರು. ವಿದ್ಯಾ ಹೊಸರು ಪ್ರಾರ್ಥಿಸಿದರು. ವಿಜಯಲಕ್ಷ್ಮೀ ಶಾನಭೋಗರ ಸ್ವಾಗತಿಸಿದರು. ಭುವನೇಶ್ವರಿ ಹೈಗರ್ ನಿರೂಪಿಸಿದರು. ನಿಂಗನಗೌಡ ಪಾಟೀಲ ವಂದಿಸಿದರು.

Related posts

ಕೋವಿಡ್‍ನಿಂದ ಬೇರೆ ಜಿಲ್ಲೆ ಆಸ್ಪತ್ರೆಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೂ ಪರಿಹಾರ: ಕೃಷಿ ಸಚಿವ ಬಿ.ಸಿ.ಪಾಟೀಲ

eNEWS LAND Team

2-3 ದಿನದಲ್ಲೇ ಕೋವಿಡ್ ಡಬಲ್: ಧಾರವಾಡ ಡಿಸಿ ಹೇಳಿದ್ದೇನು ಗೊತ್ತಾ?

eNewsLand Team

ಶಾಂತಿ ಸುವ್ಯವಸ್ಥೆ ಕಾಪಾಡಲು ಸಿಎಂ  ಬೊಮ್ಮಾಯಿ ಹೇಳಿದ್ಯಾಕೆ ಗೊತ್ತಾ?

eNewsLand Team