24 C
Hubli
ನವೆಂಬರ್ 30, 2022
eNews Land
ಸಣ್ಣ ಸುದ್ದಿ

ಉಚಿತ ಕೌಶಲ್ಯ ಆಧಾರಿತ ತರಬೇತಿಗೆ ಅರ್ಜಿ ಆಹ್ವಾನ

Listen to this article

ಇಎನ್ಎಲ್ ಧಾರವಾಡ

ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ 18 ರಿಂದ 45 ವಯಸ್ಸಿನ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗಾಗಿ 30 ದಿನಗಳ ಫೋಟೋಗ್ರಾಪಿ ಮತ್ತು ವಿಡಿಯೋಗ್ರಾಫಿ ಟ್ರೈನಿಂಗ್ ಉಚಿತ ತರಬೇತಿಗಳನ್ನು ಜನವರಿ ತಿಂಗಳಲ್ಲಿ ಪ್ರಾರಂಭಿಸಲಾಗುವುದು. ಅಭ್ಯರ್ಥಿಗಳು ಡಿ. 25 ರ ಒಳಗಾಗಿ ತಮ್ಮ ಹೆಸರು ವಿಳಾಸಗಳನ್ನು ನೊಂದಾಯಿಸಲು ಕೊನೆಯ ದಿನಾಂಕವಾಗಿರುತ್ತದೆ. ಈ ತರಬೇತಿಗಳು ಸ್ವ-ಉದ್ಯೋಗ ಪ್ರಾರಂಭಿಸಿ, ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಲಿದೆ. ತರಬೇತಿಯು ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ. ಮೊದಲು ಬಂದವರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ. ತರಬೇತಿಯಲ್ಲಿ ಕೌಶಲ್ಯ, ಸಾಫ್ಟ್ ಸ್ಕೀಲ್ಸ್, ಯೋಗ ತರಬೇತಿ ಹಾಗೂ ಬ್ಯಾಂಕಿಂಗ್, ಸರಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಬಗೆಗಿನ ಮಾಹಿತಿಯನ್ನು ಉಚಿತವಾಗಿ ನೀಡಲಾಗುವುದು.

ಆಸಕ್ತರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಲ್ಲೆ ದೂರವಾಣಿ ಸಂಖ್ಯೆ 9483485489, 9482188780, 9743321062, 08284-295307, 220807 ಸಂಪರ್ಕಿಸಬಹುದೆಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

Related posts

ತಹಶೀಲ್ದಾರ ಕಚೇರಿಗೆ ಬಂದಂತಹ ಸಾರ್ವಜನಿಕರಿಗೆ ಸಹಾಯ ಮಾಡಲು ಮುಂದಾದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ

eNEWS LAND Team

ಸೆ.17 ರಂದು ವಿಶ್ವಕರ್ಮ ಜಯಂತಿ ಆಚರಣೆ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ: ತಹಸೀಲ್ದಾರ ಪ್ರಕಾಶ ನಾಶಿ

eNEWS LAND Team

ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ; ಅರ್ಜಿ ಆಹ್ವಾನ

eNEWS LAND Team