25 C
Hubli
ಮೇ 25, 2024
eNews Land
ಸಣ್ಣ ಸುದ್ದಿ

ಹುಬ್ಬಳ್ಳಿ- ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ  ಬಿಜೆಪಿ ಅಭ್ಯರ್ಥಿ ಡಾ.ಕ್ರಾಂತಿಕಿರಣ ಪರ ಮತಯಾಚನೆ

ಇಎನ್ಎಲ್ ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನ ಸಭಾ ಮತಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಡಾ. ಕ್ರಾಂತಿಕಿರಣರವರು ದಿನಾಂಕ 01-05-23 ರ ಬೆಳಗ್ಗೆ ವಾರ್ಡ ನಂ-77 ರಲ್ಲಿ ಅಲ್ಪಸಂಖ್ಯಾತರ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಾಕರಿಯಾ ಹೊಸುರು ರವರ ನೇತೃತ್ವದಲ್ಲಿ ಮನೆ-ಮನೆಗೆ ತೆರಳಿ ಮತ ಯಾಚಿಸಲಾಯಿತು.

ಈ ಸಂದರ್ಭದಲ್ಲಿ ಜಾಕರಿಯಾ ಹೊಸುರು ಮಾತನಾಡಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಸಂಸದರಾದ ಪ್ರಲ್ಹಾದ ಜೋಶಿ ಅವರು 20 ಲಕ್ಷ ಅನುದಾನದಲ್ಲಿ ಕುರುಬರ ಓಣಿಯಲ್ಲಿ UGD ಲೈನ, ಗುಣಮಟ್ಟದ ಸಿಮೆಂಟ ಕಾಂಕ್ರೆಟ್ ರಸ್ತೆ, ಗಟಾರು ಹೀಗೆ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಆದಕಾರಣ ತಾವು ಬಿಜೆಪಿಯ ಅಭ್ಯರ್ಥಿ ಡಾ. ಕ್ರಾಂತಿಕಿರಣರವರಿಗೆ ಮತ ನೀಡಿ ಚುನಾಯಿಸಿದರೆ ಕ್ಷೇತ್ರದಲ್ಲಿ ಹಾಗೂ ವಾರ್ಡಿನಲ್ಲಿ ಇನ್ನೂ ಹೆಚ್ಚಿನ ಅಭಿವೃಧ್ದಿ ಕೆಲಸ ಕಾರ್ಯಗಳನ್ನು ಮಾಡಲು ಅನುಕೂಲವಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೂರುಸಾವಿರಪ್ಪ ಚನ್ನಿ, ರಂಗಾಬದ್ಧಿ, ಶಿವಾನಂದ ಮುತ್ತಣ್ಣನವರ, ಈ ಭಾಗದ ಹಿರಿಯರಾದ ಶಿವಾನಂದ ಹೊಸುರ, ಸುರೇಶ ಮುಟ್ಟೇನವರ, ತಾಜೋವುದ್ದಿನ ಮುನವಳ್ಳಿ, ಅಹ್ಮದ್ ಅಸ್ಲಮ್ ಐನಾಪುರ, ಎಮ್.ಎಮ್.ಕಪಟಳ, ವಿರಯ್ಯ ಸಾಲಿಮಠ್, ಮಾರುತಿ ಸೊನ್ನದ್, ವಿರೇಶ ಮುರಗೋಡ, ರಾಜು ಕೋರ್ಯಾನಮಠ, ಲಕ್ಷ್ಮೀಕಾಂತ ಘೋಡಕೆ ಇದ್ದರು.

Related posts

ಸಿಡಲಿಗೆ ಬಲಿಯಾದ ಅಣಬೂರು ಗ್ರಾಮದ ಇಬ್ಬರು ಯುವಕರು

eNEWS LAND Team

ಹುಬ್ಬಳ್ಳಿ ನಗರ ದಿನಪತ್ರಿಕೆ ವಿತರಕ ವಿನಾಯಕ ಚಿಲ್ಲಾಳ ನಿಧನ

eNEWS LAND Team

ಅಣ್ಣಿಗೇರಿ: ಪುರಸಭೆ ಬಜೆಟ್ ಪೂರ್ವಭಾವಿ ಸಭೆ ಫೆ.18ಕ್ಕೆ

eNEWS LAND Team