24.3 C
Hubli
ಮೇ 26, 2024
eNews Land
ಸಣ್ಣ ಸುದ್ದಿ

ಕಣವಿಹೊನ್ನಾಪೂರ: ಸದ್ಗುರು ಶ್ರೀ ಸಿದ್ಧಾರೂಢರ 186ನೇ ಜಯಂತಿ ಜಾತ್ರಾ ಮಹೋತ್ಸವ ಹಾಗೂ 16ನೇ ವಾರ್ಷಿಕೋತ್ಸವ ಸಮಾರಂಭ

ಇಎನ್ಎಲ್ ಧಾರವಾಡ: ತಾಲೂಕಿನ ಕಣವಿಹೊನ್ನಾಪೂರ ಗ್ರಾಮದ ಶ್ರೀ ಸಿದ್ದಾರೂಢರ ಜಯಂತೋತ್ಸವ ಸಮಿತಿ ಶ್ರೀ ಆರೂಢ ದರ್ಶನ ಜ್ಞಾನಪ್ರಕಾಶನ ಆಶ್ರಮ ಶ್ರೀ ಕ್ಷೇತ್ರ ಕಣವಿಹೊನ್ನಾಪೂರ ವತಿಯಿಂದ ಪ್ರತಿವರ್ಷದಂತೆ ಸಿದ್ಧಾರೂಢರ 186ನೇ ಜಯಂತಿ ಜಾತ್ರಾ ಮಹೋತ್ಸವ ಹಾಗೂ 16ನೇ ವಾರ್ಷಿಕೋತ್ಸವ ಸಮಾರಂಭ ಜೂ.12ರಂದು ಆಚರಿಸುವುದು ಎಂದು ಕಾರ್ಯಾಧ್ಯಕ್ಷ ಸಾತಪ್ಪ ಕುಂಕೂರ ಪ್ರಕಟನೆಗೆ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರತಿವರ್ಷದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಶ್ರೀ ಸಿದ್ಧಾರೂಢರ ಪ್ರಶಸ್ತಿಗಳನ್ನು ಧಾರವಾಡದ ರಾ.ಹ.ದೇಶಪಾಂಡೆ ಸಭಾಭವನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ  ಬೆಳಿಗ್ಗೆ 10ಘಂಟೆಗೆ ಕೊಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಸಮಾರಂಭದಲ್ಲಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಸಂಗೀತ ಕಾರ್ಯಕ್ರಮ ಜರಗುವವು ಬಡವಿದ್ಯಾರ್ಥಿಗಳಿಗೆ ನೋಟ್’ಬುಕ್ ಪೆನ್ ವಿತರಣೆ ಮಾಡಲಾಗುವುದು.

Related posts

ಪುರಸಭೆ ತಾ.ಪಂ ಕಛೇರಿಯಲ್ಲಿ ಗಾಂಧೀಜಿ ಶಾಸ್ತ್ರೀಜಿ ಜಯಂತಿ

eNEWS LAND Team

ಉಣಕಲ್ ಕೆರೆಯನ್ನು ಶ್ರೀ ಚನ್ನಬಸವ ಸಾಗರವೆಂದು ನಾಮಕರಣ ಮಾಡಿ

eNEWS LAND Team

ಡಾ.ಕ್ರಾಂತಿ ಕಿರಣ ಪರ ಮತಯಾಚಿಸಿದ ಹುಬ್ಬಳ್ಳಿ,-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು

eNEWS LAND Team