28.6 C
Hubli
ಏಪ್ರಿಲ್ 20, 2024
eNews Land
ರಾಜಕೀಯ

ವಿಪ ಚುನಾವಣೆ ಫಲಿತಾಂಶ ಪ್ರಕಟಣೆಗೆ ಬಂದೋಬಸ್ತ್: ಡಿಸಿ

ಇಎನ್ಎಲ್ ಧಾರವಾಡ

ಕಳೆದ ಡಿ. 10 ರಂದು ಧಾರವಾಡ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದಿಂದ 2 ಸ್ಥಾನಗಳಿಗೆ ಜರುಗಿದ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಏಣಿಕೆ ಕಾರ್ಯವು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿರುವ ಮತ ಏಣಿಕಾ ಕೇಂದ್ರದಲ್ಲಿ ನಾಳೆ (ಡಿ.14)ಬೆಳಿಗ್ಗೆ 8 ಗಂಟೆಯಿಂದ ನಡೆಯಲಿದೆ. ಇದಕ್ಕೆ ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಇಂದು ಸಂಜೆ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿರುವ ಮತ ಏಣಿಕಾ ಕೇಂದ್ರಕ್ಕೆ ಭೇಟಿ ನೀಡಿ, ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಅವರು ಮಾದ್ಯಮ ಕೇಂದ್ರದಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಧಾರವಾಡ ಸ್ಥಳೀಯ ಸಂಸ್ಥೆಗಳ ಮತ ಕ್ಷೇತ್ರವು ಧಾರವಾಡ, ಹಾವೇರಿ, ಗದಗ ಮೂರು ಜಿಲ್ಲೆಗಳನ್ನು ಒಳಗೊಂಡಿದ್ದು, ಒಟ್ಟು 7,476 ಮತದಾರರನ್ನು ಹೊಂದಲಾಗಿದೆ. ಡಿಸೆಂಬರ್ 10 ರಂದು ಜರುಗಿದ ಮತದಾನದಲ್ಲಿ ಒಟ್ಟು 7,452 ಜನ ಮತ ಚಲಾಯಿಸಿದ್ದಾರೆ. ಶೇ. 99.68 ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಧಾರವಾಡ ಜಿಲ್ಲೆಯಲ್ಲಿ 2160 ಒಟ್ಟು ಮತದಾರರಿದ್ದು, ಅದರಲ್ಲಿ ಪುರುಷರು 1049, ಮಹಿಳೆಯರು 1111 ಮತದಾರರಿದ್ದಾರೆ. ಅದರಲ್ಲಿ 1043 ಪುರುಷರು, 1102 ಮಹಿಳೆಯರು ಸೇರಿದಂತೆ ಒಟ್ಟು 2145 ಜನ ಮತದಾನ ಮಾಡಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ 99.31 ರಷ್ಟು ಮತದಾನವಾಗಿದೆ.

ಹಾವೇರಿ ಜಿಲ್ಲೆಯಲ್ಲಿ 3361 ಒಟ್ಟು ಮತದಾರರಿದ್ದು, ಅದರಲ್ಲಿ ಪುರುಷರು 1613, ಮಹಿಳೆಯರು 1748 ಮತದಾರರಿದ್ದಾರೆ. ಅದರಲ್ಲಿ 1611 ಪುರುಷರು, 1745 ಮಹಿಳೆಯರು ಸೇರಿದಂತೆ ಒಟ್ಟು 3356 ಜನ ಮತದಾನ ಮಾಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 99.85 ರಷ್ಟು ಮತದಾನವಾಗಿದೆ.

ಗದಗ ಜಿಲ್ಲೆಯಲ್ಲಿ 1955 ಒಟ್ಟು ಮತದಾರರಿದ್ದು, ಅದರಲ್ಲಿ ಪುರುಷರು 955, ಮಹಿಳೆಯರು 1000 ಮತದಾರರಿದ್ದಾರೆ. ಅದರಲ್ಲಿ 956 ಪುರುಷರು, 995 ಮಹಿಳೆಯರು ಸೇರಿದಂತೆ ಒಟ್ಟು 1951 ಜನ ಮತದಾನ ಮಾಡಿದ್ದಾರೆ. ಒಟ್ಟು ಗದಗ ಜಿಲ್ಲೆಯಲ್ಲಿ 99.80 ರಷ್ಟು ಮತದಾನವಾಗಿದೆ.

ಮತ ಏಣಿಕಾ ಕೇಂದ್ರ: ಧಾರವಾಡ ಕೃಷಿ ವಿಶ್ವವಿದ್ಯಾಲಯ ಮುಖ್ಯ ಕಟ್ಟಡದ ಹಿಂಭಾಗದ ಕಟ್ಟಡದಲ್ಲಿ ಮತ ಏಣಿಕಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಮತ ಏಣಿಕಾ ಕಾರ್ಯವು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದೆ. ಮತ ಏಣಿಕೆಗಾಗಿ 2 ಕೊಠಡಿಗಳಲ್ಲಿ 14 ಟೇಬಲ್‍ಗಳನ್ನು ಮಾಡಲಾಗಿದೆ. ಪ್ರತಿ ಟೇಬಲ್‍ಗೆ ಮೂರು ಜನ ಸೇರಿದಂತೆ ಮತ ಏಣಿಕಾ ಕಾರ್ಯಕ್ಕೆ ಒಟ್ಟು 77 ಜನ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಪೊಲೀಸ್ ಬಂದೋಬಸ್ತ್ : ಮತ ಪೆಟ್ಟಿಗೆಗಳನ್ನು ಭದ್ರ ಪಡಿಸಿರುವ ಸ್ಟ್ರಾಂಗ್ ರೂಂಗೆ ನಿರಂತರ ಪೊಲೀಸ್ ಕಾವಲು ಹಾಗೂ ಸಿಸಿ ಟಿವಿ ಅಳವಡಿಸಲಾಗಿದೆ. ಮತ ಏಣಿಕೆ ದಿನದಂದು ಭದ್ರತೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ವಿವಿಧ ಹಂತದ 230 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಬಂದೋಬಸ್ತ್‍ಗಾಗಿ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಲು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಗುರುತಿನ ಚೀಟಿ ಕಡ್ಡಾಯ : ಮತ ಏಣಿಕಾ ಕಾರ್ಯಕ್ಕೆ ಬರುವ ಪ್ರತಿಯೊಬ್ಬರಿಗೂ ಚುನಾವಣಾ ಅಧಿಕಾರಿಗಳು ಪ್ರತ್ಯೇಕವಾದ ಗುರುತು ಹೊಂದಿರುವ ಗುರುತಿನ ಚೀಟಿಗಳನ್ನು ವಿತರಿಸಿದ್ದಾರೆ. ಮತ ಏಣಿಕಾ ಕೇಂದ್ರದೊಳಗೆ ಬರಲು ಚುನಾವಣಾಧಿಕಾರಿಗಳು ನೀಡಿರುವ ಗುರುತಿನ ಚೀಟಿ ಹೊಂದಿರುವವರಿಗೆ ಮಾತ್ರ ಅವಕಾಶವಿರುತ್ತದೆ. ಚುನಾವಣಾ ಅಭ್ಯರ್ಥಿ, ಚುನಾವಣಾ ಏಜೆಂಟ್ ಹಾಗೂ ಏಣಿಕೆ ಏಜೆಂಟರ್ ತಮಗೆ ನೀಡಿದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಿರಬೇಕು.

ಮತ ಏಣಿಕಾ ಕೇಂದ್ರದೊಳಗೆ ಯಾವುದೇ ಆಯುಧ, ಚಾಕು, ಚೂರಿ, ಬ್ಲೇಡ್, ಕಡ್ಡಿಪೊಟ್ಟಣ, ಮೊಬೈಲ್, ತಂಬಾಕು, ಎಲೆ, ಅಡಿಕೆ, ಗುಟಖಾ ಮುಂತಾದವುಗಳನ್ನು ನಿಷೇಧಿಸಲಾಗಿದೆ. ಮತ ಏಣಿಕಾ ಕೇಂದ್ರಕ್ಕೆ ಆಗಮಿಸುವವರು ಭದ್ರತಾ ಪಡೆಯುವರು ತಪಾಸಣೆ ಮಾಡುವ ವೇಳೆ ಸಹಕರಿಸಬೇಕು. ಮತ್ತು ಪ್ರತಿಯೊಬ್ಬರು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿಯಾಗಿರುವ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾಧಿಕಾರಿಗಳ ಕಚೇರಿ ಚುನಾವಣಾ ತಹಶೀಲ್ದಾರ ಎಚ್.ಎನ್. ಬಡಿಗೇರ, ವರುಣ ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts

ಕೂಡಲಸಂಗಮ ಭೇಟಿ ನೀಡಿದ ರಾಹುಲ್ ಗಾಂಧಿ!

eNEWS LAND Team

ಮಹಾರಾಷ್ಟ್ರ ಕರ್ನಾಟಕದೊಳಗೆ ಬರಬಾರದು: ಮುಖ್ಯಮಂತ್ರಿ ಸಿದ್ದರಾಮಯ್ಯ

eNewsLand Team

ಡೆಲ್ಲಿಗೆ ಹಾರಿದ ಬೊಮ್ಮಾಯಿ‌: ಸಂಪುಟ ವಿಸ್ತರಣೆ, ಉಪಚುನಾವಣೆಯ ಸೋಲು ಗೆಲವು ಚರ್ಚೆ?

eNewsLand Team