24.3 C
Hubli
ಮೇ 26, 2024
eNews Land
ರಾಜಕೀಯ

ಮೊದಲ ಪಟ್ಟಿಯಲ್ಲೇ ಬಿಜೆಪಿಗೆ ಮ್ಯಾಜಿಕ್ ನಂಬರ್: ತೇಜಸ್ವಿ ಸೂರ್ಯ

ಇದನ್ನು ಓದಿ: ಚುನಾವಣಾ ಕರ್ತವ್ಯ ಲೋಪ;  ಹು.ಧಾ ಪೂರ್ವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿ ಮತಗಟ್ಟೆ ಅಧಿಕಾರಿ ನವೀನ ಸೂರ್ಯವಂಶಿರನ್ನು ಅಮಾನತ್ತುಗೊಳಿಸಿ ಡಿಸಿ ಆದೇಶ

ಇಎನ್ಎಲ್ ಬೆಂಗಳೂರು: ಬಿಜೆಪಿಗೆ ರಾಜ್ಯ ವಿಧಾನಸಭೆಯಲ್ಲಿ 189 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲೇ ಸರಳ ಬಹುಮತ ಸಿಗಲಿದೆ. ಮ್ಯಾಜಿಕ್ ನಂಬರ್ 112 ಸ್ಥಾನಗಳನ್ನು ಬಿಜೆಪಿ ಗಳಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು ವಿಶ್ವಾಸದಿಂದ ನುಡಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್- ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಹತಾಶೆ ಉಂಟಾಗಿದೆ. ಎರಡೂ ಪಕ್ಷಗಳ ಆತ್ಮಬಲ ಕುಸಿದಿದೆ ಎಂದು ಅವರು ವಿಶ್ಲೇಷಿಸಿದರು.
ಪಕ್ಷ ಮತ್ತು ಮತದಾರರು ಹೊಸ ಚೈತನ್ಯ, ಹುಮ್ಮಸ್ಸಿನಿಂದ ಅಭ್ಯರ್ಥಿಗಳ ಪಟ್ಟಿಯನ್ನು ಸ್ವಾಗತ ಮಾಡಿದ್ದಾರೆ. ಆಯ್ಕೆ ಪ್ರಕ್ರಿಯೆ ಮತ್ತು ಆಯ್ಕೆಯು ಬಿಜೆಪಿ ವಿಶೇಷತೆಯನ್ನು ಮತ್ತು ಬಿಜೆಪಿ ವಿಭಿನ್ನ ಪಕ್ಷ ಎಂಬುದನ್ನು ಸಾಬೀತು ಮಾಡಿದೆ ಎಂದರು. 52 ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗಿದೆ. ನರೇಂದ್ರ ಮೋದಿಯವರ ವಿಶೇಷ ಕಾಳಜಿ, ಪ್ರತಿ ಅಭ್ಯರ್ಥಿಗೆ ಮೋದಿಯವರ ಮುದ್ರೆ ಹಾಕಿ ಒಪ್ಪಿಗೆ ಸೂಚಿಸಿ ಆಶೀರ್ವಾದ ಮಾಡಿ ಕಣಕ್ಕೆ ಇಳಿಸಿದ್ದಾರೆ ಎಂದು ವಿವರಿಸಿದರು.
ಅನುಭವ, ಹೊಸತನ, ಯುವಕರಿಗೆ ಅವಕಾಶ, ಶಾಸಕರ ಉತ್ತಮ ಆಡಳಿತ, ಅನುಭವವನ್ನು ಪಾರ್ಟಿಗೆ ಬಳಸುವ ಕೆಲಸ ನಡೆದಿದೆ. ಕಾರ್ಯಕರ್ತರ ಬೆಳೆಸುವಿಕೆಯ ಮುಂದಿನ ತಲೆಮಾರಿನ ಸಮರ್ಥ ನಾಯಕರ ತಯಾರಿ ಕಡೆ ಪಕ್ಷ ಗಮನ ನೀಡಿದೆ ಎಂದು ತಿಳಿಸಿದರು.

ಇದನ್ನು ಓದಿ:ನೀರಿನಲ್ಲಿ ಮುಳುಗಿದ ರೈಲ್ವೇ ಬೋಗಿಗಳಿಂದ ಪಾರುಗಾಣಿಕಾ ಮತ್ತು ಮರುಪಡೆಯುವಿಕೆಗಾಗಿ ವಿಶೇಷ ತರಬೇತಿ
ಪಕ್ಷಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟ ನಾಯಕ ಯಡಿಯೂರಪ್ಪ
ಕರ್ನಾಟಕದ ಪಕ್ಷದ ಸರ್ವೋಚ್ಚ ನಾಯಕ ಯಡಿಯೂರಪ್ಪ ಅವರು ಮೇಲ್ಪಂಕ್ತಿ ಹಾಕಿ ಮುಂದಿನ ತಲೆಮಾರಿನ ನಾಯಕರಿಗೆ ಜಾಗ ನೀಡಿದ್ದಾರೆ. ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ.ಎಸ್.ಈಶ್ವರಪ್ಪ ಅವರು ಅದೇ ಮಾದರಿಯಲ್ಲಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿದು ನಮ್ಮದು ವಿಭಿನ್ನ ಪಕ್ಷ ಎಂದು ಸಾಬೀತು ಪಡಿಸಿದ್ದಾರೆ. ಸಾವಿರಾರು ಕಾರ್ಯಕರ್ತರಿಗೆ ಪ್ರೇರಣೆ ಕೊಡುವ ಪಕ್ಷ ನಮ್ಮದು. ಹೊಸ ನಾಯಕರು ಹಿರಿಯರ ಮಾರ್ಗದರ್ಶನದಲ್ಲೇ ಮುಂದುವರಿಯಲಿದ್ದಾರೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು.

ಇದನ್ನು ಓದಿ: ಅಮೂಲ್ ಜೊತೆ ನಂದಿನಿ ವಿಲೀನ ಪ್ರಸ್ತಾಪವೇ ಇಲ್ಲ: ಸಚಿವ ಎಸ್.ಟಿ.ಸೋಮಶೇಖರ್

ಸಾಕಷ್ಟು ಯುವಕರಿಗೆ ಅವಕಾಶ, ಸಂಘಟನೆಯಲ್ಲಿ ಕೆಲಸ ಮಾಡಿ ಬಂದ ಅನೇಕರಿಗೆ ಅವಕಾಶ ಕೊಡಲಾಗಿದೆ. ಬ್ಯಾಟರಾಯನಪುರದಿಂದ ಹಿಂದಿನ ಯುವ ಮೋರ್ಚಾ ತಂಡದ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ದೊಡ್ಡಬಳ್ಳಾಪುರದಲ್ಲಿ ಯುವ ಮೋರ್ಚಾ ಮುಖಂಡ ಧೀರಜ್ ಮುನಿರಾಜು ಅವರಿಗೂ ಅವಕಾಶ ಮಾಡಿಕೊಟ್ಟಿದೆ. ಬೆಂಗಳೂರಿನ ಗಾಂಧಿನಗರದಲ್ಲಿ ಯುವ ಮೋರ್ಚಾದ ಮುಖಂಡ ಸಪ್ತಗಿರಿ ಗೌಡರು ಚುನಾವಣೆ ಎದುರಿಸಲಿದ್ದಾರೆ. ಈ ಬಾರಿ ಹೊಸ ಧ್ವನಿಯಾಗಿ ಇವರೆಲ್ಲರೂ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸದಿಂದ ನುಡಿದರು.
ಕಲಬುರ್ಗಿ ಚಿತ್ತಾಪುರದಲ್ಲಿ ಎಐಸಿಸಿ ಅಧ್ಯಕ್ಷರ ಮಗ ಪ್ರಿಯಾಂಕ್ ಖರ್ಗೆ ವಿರುದ್ಧ ಸಾಮಾನ್ಯ ಕಾರ್ಯಕರ್ತ ಮಣಿಕಾಂತ್ ರಾಠೋಡ್‍ರನ್ನು ಸ್ಪರ್ಧೆಗೆ ಇಳಿಸಿದೆ. ಉಡುಪಿಯಲ್ಲಿ ಯುವ ಮೋರ್ಚಾ ಹಿಂದಿನ ಮುಖಂಡ, ರಾಷ್ಟ್ರೀಯ ಒಬಿಸಿ ಮೋರ್ಚಾದ ಪದಾಧಿಕಾರಿ ಯಶಪಾಲ್ ಸುವರ್ಣರಿಗೆ ಅವಕಾಶ ಮಾಡಿಕೊಟ್ಟಿದೆ. ಒಬಿಸಿ, ಲಂಬಾಣಿ ಸೇರಿ ಎಸ್‍ಸಿ ವಿವಿಧ ಸಮುದಾಯಕ್ಕೆ ಆದ್ಯತೆ ಕೊಡಲಾಗಿದೆ. ಪಾರ್ಟಿಗೆ ಹೊಸತನ, ಹೊಸ ಚೈತನ್ಯ ತರಲು, ಮುಂದಿನ ತಲೆಮಾರನ್ನು ಸಿದ್ಧಮಾಡಲು ಪಟ್ಟಿ ಆದ್ಯತೆ ನೀಡಿದೆ. ಸಾಮಾಜಿಕ ನ್ಯಾಯ ಪರಿಗಣಿಸುವ ಬಿಜೆಪಿ ಪಟ್ಟಿ ಇದೆಂದು ತಿಳಿಸಿದರು.

ಇದನ್ನು ಓದಿ: ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಸಫಾರಿಗೆ ಆಗಮಿಸಿದ: ಪ್ರಧಾನಿ ಮೋದಿ
ಎಲ್ಲ ಜಾತಿ, ಉಪ ಜಾತಿಗೆ ಸಾಮಾಜಿಕ ಪ್ರಾತಿನಿಧ್ಯ ಕೊಡಲಾಗಿದೆ. ಸುಳ್ಯದಲ್ಲಿ ಆದಿ ದ್ರಾವಿಡ ಸಮುದಾಯಕ್ಕೆ ಸೇರಿದ ಇಲ್ಲಿನವರೆಗೆ ರಾಜಕೀಯ ಅವಕಾಶ ಸಿಗದ ಅತ್ಯಂತ ಸಾಮಾನ್ಯ ಜೀವನ ನಡೆಸುವ ಭಾಗೀರಥಿ ಮುರುಳ್ಯರನ್ನು ಶಾಸಕ ಅಭ್ಯರ್ಥಿಯಾಗಿ ಮಾಡಿದೆ. ಅವರ ಆರ್ಥಿಕ, ಸಾಮಾಜಿಕ ಹಿನ್ನೆಲೆಯ ಕುರಿತು ಗಮನ ಸೆಳೆಯಲು ಮನವಿ ಮಾಡಿದರು. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ವಿವರಿಸಿದರು.
ಎಸ್‍ಸಿ ಸಮುದಾಯದಲ್ಲೂ ಎಲ್ಲ ಜಾತಿಯವರಿಗೆ ಅವಕಾಶ ಕಲ್ಪಿಸಿದ ಪಕ್ಷ ನಮ್ಮದು. 7 ರೈಟ್, 8 ಲೆಫ್ಟ್, ಲಂಬಾಣಿ- 9, ಬೋವಿ- 5, ಆದಿದ್ರಾವಿಡ- 1 ಹೀಗೆ ಎಸ್‍ಸಿ ಸಮಾಜದ ಎಲ್ಲ ಜಾತಿ, ಉಪಜಾತಿಗೆ ನ್ಯಾಯ ಕೊಡಲಾಗಿದೆ. ಅಭ್ಯರ್ಥಿಗಳ ಪಟ್ಟಿ ನೋಡಿದರೆ ವೃತ್ತಿಪರರು ಐಪಿಎಸ್, ಐಎಎಸ್ ನಿವೃತ್ತರಾದ ಭಾಸ್ಕರ ರಾವ್, ಅನಿಲ್‍ಕುಮಾರ್ ಸ್ಥಾನ ಪಡೆದಿದ್ದಾರೆ. ಸ್ನಾತಕೋತ್ತರ ಪದವೀಧರರು, ವಕೀಲರು, ವೈದ್ಯರು- ಸಾಧಕ ಸಾಮಾಜಿಕ ಕಾರ್ಯಕರ್ತರ ಹೊಸ ತಂಡವನ್ನು ನರೇಂದ್ರ ಮೋದಿಯವರ ಸಲಹೆ ಮೇರೆಗೆ ತಯಾರಿಸಿದೆ. ಮುಂದಾಲೋಚನೆ, ದೂರದೃಷ್ಟಿಯ ಅಭ್ಯರ್ಥಿಗಳ ಪಟ್ಟಿ ಇದೆಂದು ತಿಳಿಸಿದರು.

ಇದನ್ನು ಓದಿ:  ಲೋಕಸಭೆ ಚುನಾವಣೆಗೆ ಪೂರಕವಾಗಿ ರಾಜ್ಯದಲ್ಲಿ ಬಿಜೆಪಿಗೆ ಜನಾದೇಶ: ಡಾ.ಕೆ.ಸುಧಾಕರ್
ಪಕ್ಷದೊಳಗೆ ಆಂತರಿಕ ಚರ್ಚೆಗಳು ನಡೆದಿವೆ. 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಲಾಗಿತ್ತು. ಜಿಲ್ಲೆ, ರಾಜ್ಯ ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಿದ್ದೇವೆ. 2 ದಿನ ಕೇಂದ್ರ ಚುನಾವಣಾ ಸಮಿತಿ ಚರ್ಚೆ, ಪ್ರಧಾನಿಯವರ ಸಲಹೆ ಮೇರೆಗೆ ಹೊಸತನದ ಪಟ್ಟಿ ಹೊರಬಿದ್ದಿದೆ ಎಂದರು.
21ನೇ ಶತಮಾನಕ್ಕೆ ಕರ್ನಾಟಕಕ್ಕೆ ದೂರದೃಷ್ಟಿ ಮತ್ತು ಗಟ್ಟಿತನದ ಯುವ ನಾಯಕತ್ವದ ಸಿದ್ಧತೆ ಮಾಡಿದ್ದೇವೆ. ಇತರ ಪಕ್ಷದಂತೆ ಕುಟುಂಬದ ಹಿಡಿತದಲ್ಲಿರುವ ಅಡುಗೆ ಮನೆಯಿಂದ ಪಟ್ಟಿ ಘೋಷಣೆ ಮಾಡುವುದಿಲ್ಲ ಎಂದ ಅವರು, ಇನ್ನೊಂದು ರಾಷ್ಟ್ರೀಯ ಪಕ್ಷ ಬಣಗಳ ಆಧಾರದಲ್ಲಿ ಪಟ್ಟಿ ಪ್ರಕಟಿಸಿದೆ ಎಂದು ಟೀಕಿಸಿದರು.
ಕನಕಪುರ, ವರುಣಾದ ಕಾಳಗದ ಕಡೆ ಜನತೆ ವಿಶೇಷ ಆಸಕ್ತಿಯಿಂದ ನೋಡುತ್ತಿದ್ದಾರೆ. ಪಕ್ಷವು ಏಕಾಂಗಿಯಾಗಿ ಗೆಲ್ಲಲು, ಪೂರ್ಣ ಬಹುಮತದ ಕಡೆ ಮುನ್ನಡೆಯಲು ಈ ಪಟ್ಟಿ ನೆರವಾಗಲಿದೆ ಎಂದು ತಿಳಿಸಿದರು. ಶಿಸ್ತಿನ ಪಕ್ಷ ನಮ್ಮದು. ಟಿಕೆಟ್ ಸಿಗದ ಸಂದರ್ಭದಲ್ಲಿ ಬೇಸರ, ಸಂಗಡಿಗರ ಜೊತೆ ಮಾತುಕತೆ ಸ್ವಾಭಾವಿಕ ಮತ್ತು ಸಹಜ. ಬಿಜೆಪಿ ಎಲ್ಲರ ವಿಶ್ವಾಸ ಪಡೆದುಕೊಂಡು ಚುನಾವಣೆಗೆ ಹೋಗಲಿದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಜೆಡಿಎಸ್- ಕಾಂಗ್ರೆಸ್ ನಡುವೆ ಮ್ಯಾಚ್ ಫಿಕ್ಸಿಂಗ್
ಜೆಡಿಎಸ್- ಕಾಂಗ್ರೆಸ್ ನಡುವೆ ಮ್ಯಾಚ್ ಫಿಕ್ಸಿಂಗ್ ಆಗಿದೆ. ಆದರೂ, ಅವು ಗೆಲ್ಲುವುದಿಲ್ಲ. ಪ್ರಗತಿಶೀಲ ಸರಕಾರವನ್ನು ನಾವು ಕೊಡಲಿದ್ದೇವೆ. ಅದು ಬಿಜೆಪಿ ಸಂಕಲ್ಪ. ನಮ್ಮ ಎಲ್ಲ ಅಭ್ಯರ್ಥಿಗಳನ್ನು ಮತದಾರರು ಆಶೀರ್ವದಿಸಲಿದ್ದಾರೆ ಎಂದು ತೇಜಸ್ವಿ ಸೂರ್ಯ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನು ಓದಿ: ಬಿಜೆಪಿ 13 ಆಕಾಂಕ್ಷಿಗಳಿಂದ ಬಂಡಾಯದ ಬಾಂಬ್ ಸ್ಫೋಟ: ಯಾರಿಗೆ ಎಫೆಕ್ಟ್; ?

ಪಕ್ಷದ ಕೆಲವು ಅಸಮಾಧಾನಗೊಂಡ ಹಿರಿಯರ ಜೊತೆ ನಮ್ಮ ಮುಖಂಡರು ಮಾತನಾಡುತ್ತಿದ್ದಾರೆ. ಪಕ್ಷವು ಅವರನ್ನು ವಿಶ್ವಾಸಕ್ಕೆ ಪಡೆಯಲಿದೆ. ಯಾವುದೇ ಕ್ಷೇತ್ರದಲ್ಲಿ ಯಾವುದೇ ಮಟ್ಟದ ಅಸಮಾಧಾನ ಇದ್ದರೂ ಪಕ್ಷದ ಕಾರ್ಯಕರ್ತರು ನಮ್ಮ ಜೊತೆಗಿದ್ದು, ಗೆಲುವು ಸಿಗಲಿದೆ ಎಂದು ತಿಳಿಸಿದರು.
ಏಕಾಏಕಿಯಾಗಿ ಪ್ಯಾರಾಚೂಟ್ ಆಗಿ ಬಂದವರಿಗೆ ಪಕ್ಷ ಅವಕಾಶ ಕೊಟ್ಟಿಲ್ಲ. ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂಬ ಮಾನದಂಡವನ್ನು ಗರಿಷ್ಠವಾಗಿ ಅನುಷ್ಠಾನಕ್ಕೆ ತರಲಾಗಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಯುವ ಮುಖಂಡ, ಗಾಂಧಿನಗರದ ಅಭ್ಯರ್ಥಿ ಸಪ್ತಗಿರಿ ಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಇದನ್ನು ಓದಿ: ಗೋ ಸಾಗಾಣೆ ವೇಳೆ ವ್ಯಕ್ತಿ ಅನುಮಾನಸ್ಪದ ಸಾವು ಪ್ರಕರಣ

Related posts

ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆ ಘೋಷಣೆ; ಮೇ 19ಕ್ಕೆ ಅಧಿಸೂಚನೆ  -ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

eNewsLand Team

ನಾಲ್ಕು ವರ್ಷ ಅಧಿಕಾರ ಮಾಡಿದ್ರೂ ಗುಂಡಿ ಮುಚ್ಚದ ಬಿಜೆಪಿ: ಸಿಎಂ ಸಿದ್ದು

eNewsLand Team

ಬಿಜೆಪಿ ಜನಸ್ವರಾಜ್ ಯಾತ್ರೆಗೆ ಚಾಲನೆ: ಮುಖ್ಯಮಂತ್ರಿ ಬೊಮ್ಮಾಯಿ

eNewsLand Team