25 C
Hubli
ಮೇ 25, 2024
eNews Land
ಸುದ್ದಿ

ಬಿಜೆಪಿ 13 ಆಕಾಂಕ್ಷಿಗಳಿಂದ ಬಂಡಾಯದ ಬಾಂಬ್ ಸ್ಫೋಟ: ಯಾರಿಗೆ ಎಫೆಕ್ಟ್; ?

ವಿಶೇಷ ವರದಿ
ಎನ್‌ಎಲ್ ಕಲಘಟಗಿ: ಎದುರಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪ್ರಕಟಿಸುವುದಕ್ಕೂ ಮುನ್ನವೇ 13 ಆಕಾಂಕ್ಷಿಗಳು ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದು ಬಂಡಾಯದ ಕಹಳೆಯೂದಿದ್ದಾರೆ.

ಇದು ಕ್ಷೇತ್ರದ ಟಿಕೇಟ್ ಆಕಾಂಕ್ಷಿ ಹಾಗೂ ಕೈ ಟಿಕೆಟ್ ತಪ್ಪಿಸಿಕೊಂಡಿರುವ ನಾಗರಾಜ ಛಬ್ಬಿಗೆ ಹಿನ್ನಡೆ ಉಂಟುಮಾಡುವ ಎಲ್ಲ ಸಾಧ್ಯತೆಗಳಿವ, ಹೌದು ಕಾಂಗ್ರೆಸ್ ಈಗಾಗಲೇ ಕಲಘಟಗಿಗೆ Kalaghatagi ಸಂತೋಷ್ ಲಾಡ್‌ Santosh Lad ರನ್ನು ತನ್ನ ಹುರಿಯಾಳಾಗಿ ಕಣಕ್ಕಿಳಿಸಿದೆ. ಆದರೆ, ಬಿಜೆಪಿಗೆ ನೀರು ಕುಡಿದಷ್ಟು ಸುಲಭವಾಗಿ ತನ್ನ ಅಭ್ಯರ್ಥಿ ಘೋಷಿಸುವುದು ಅಸಾಧ್ಯ ಎಂಬಂತ ಬೆಳವಣಿಗೆ ನಡೆದಿದೆ. ಬಿಜೆಪಿ ಕಟ್ಟಾಳುಗಳೇ ಪಕ್ಷದ ವಿರುದ್ಧ ತಿರುಗಿಬೀಳುವ ಸಾಧ್ಯತೆ ಇದೆ. ಇದು ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ್ ಅವರಿಗೆ ಹೊಸ ತಲೆನೋವು ತಂದಿಟ್ಟಿದೆ.

ಇನ್ನು ಲಾಡ್ ವಿರುದ್ಧ ಆಂತರಿಕ ಯುದ್ಧದಲ್ಲಿ ಗೆದ್ದು ಟಿಕೆಟ್ ಪಡೆಯಬೇಕು ಎಂಬ ನಾಗರಾಜ ಛಬ್ಬಿ Nagaraj Chabbi ಹೋರಾಟದಲ್ಲಿ ಮಣಿದಿದ್ದಾರೆ. ಅವರ ಚಿತ್ತವೂ ಈಗ ಬಿಜೆಪಿ ಕಡೆಗಿದೆ. ಒಂದು ವೇಳೆ ಛಬ್ಬಿ ಪಕ್ಷೇತರರಾಗಿ ಕಣಕ್ಕಿಳಿದರೆ ಬಿಜೆಪಿ ಆಕಾಂಕ್ಷಿಗಳಿಗೆ ತೊಂದರೆ ಇಲ್ಲ. ಅದರೆ ಬಿಜೆಪಿ ಕೂಡ ಒಂದು ಕಡೆ ಛಬ್ಬಿಯನ್ನು ಕಮಲದ ದಾಳವಾಗಿಸಿಕೊಳ್ಳಲು ಯತ್ನಿಸುತ್ತಿದೆ ಎಂಬ ಸುದ್ದಿಯೂ ಹರಿದಾಡತೊಡಿದೆ.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಬಿಜೆಪಿಯ 13 ಆಕಾಂಕ್ಷಿಗಳು, ಕ್ಷೇತ್ರದಲ್ಲಿ ನಾವು 13 ಜನ ಒಗ್ಗಟ್ಟಾಗಿದ್ದೇವೆ. ಬಿಜೆಪಿ ವರಿಷ್ಠರು ನಮ್ಮಲ್ಲಿ ಯಾರಿಗೇ ಟಿಕೆಟ್ ನೀಡಿದರೂ ಅವರ ಗೆಲವಿಗೆ ಶ್ರಮಿಸುತ್ತೇವೆ. ಒಂದು ವೇಳೆ ಹೊರಗಿನವರನ್ನು ಕರೆತಂದರೆ ಬಂಡಾಯದ ಬಾವುಟ ಹಾರಿಸುವುದಾಗಿ ಹೇಳಿದ್ದಾರೆ. ಬಿಜೆಪಿ ಸ್ಥಳೀಯ ಹೈಕಮಾಂಡ್ ಎಂದೇ ಕರೆಸಿಕೊಳ್ಳುವ ಜೋಡೆತ್ತು ಶೆಟ್ಟರ್ ಹಾಗೂ ಜೋಶಿ ಈ ಹಿನ್ನೆಲೆಯಲ್ಲಿ ಯಾರಿಗೆ ಮಣೆ ಹಾಕಲಿದ್ದಾರೆ?  ಯಾರಿಗೆ ಬಿ ಫಾರಂ ಕೊಡಲಿದ್ದಾರೆ ಎಂಬ ಯಕ್ಷಪ್ರಶ್ನೆಗೂ ಇದು ಕಾರಣವಾಗಿದೆ.
ನಾವೆಲ್ಲ ಆಕಾಂಕ್ಷಿಗಳು ಈಗಾಗಲೇ ಕ್ಷೇತ್ರವನ್ನು ಸುತ್ತಿ ಬಿಜೆಪಿ ಪರ ಪ್ರಚಾರ ಮಾಡಿದ್ದೇವೆ. ನಮಗೆ ಅದ್ಧೂರಿ ಜನಬೆಂಬಲ ವ್ಯಕ್ತವಾಗಿದೆ. ಸ್ಥಳೀಯ ಆಕಾಂಕ್ಷಿಗಳಿಗೆ ಹೆಚ್ಚು ಮನ್ನಣೆ ದೊರೆತಿದೆ. ಒಂದು ವೇಳೆ ಹಾಲಿ ಶಾಸಕ ಸಿ.ಎಂ.ನಿಂಬಣ್ಣವರ ಅವರಿಗೆ ಟಿಕೆಟ್ ಕೊಟ್ಟರೆ ಏನು ಮಾಡಬೇಕು ಎಂಬ ಬಗ್ಗೆ ನಾವಿನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ. ಹಾಗೆ ನೋಡಿದರೆ ಸುದ್ದಿಗೋಷ್ಠಿ ನಡೆಸಿದ ಹದಿಮೂರು ಜನರ ಹಿಂದೆ ನಿಂಬಣ್ಣವರ ಕೈವಾಡ ಇದೆಯೇ ಎಂಬ ಗುಮಾನಿಯೂ ಪಕ್ಷದ ಹೈಕಮಾಂಡ್‌ನಲ್ಲಿ ಮೂಡಿದೆ.

ಛಬ್ಬಿ ಎಫೆಕ್ಟ್?

ಕೋವಿಡ್ ಸಂದರ್ಭದಲ್ಲಿ ಜನಸೇವೆ ಮಾಡಿದ್ರೂ ಕಾಂಗ್ರೇಸ್ ಪರಿಗಣಿಸಲೇ ಇಲ್ಲ ಎನ್ನುವ ಮಾತು ಕಾರ್ಯಕರ್ತರ ಅಳಲಾಗಿದೆ. ಛಬ್ಬಿಗೆ ಕೈ ಟಿಕೆಟ್ ತಪ್ಪಿದ್ದು,

ನಿಂಬಣ್ಣವರ್ C M Nimbannavar ಅಥವಾ ಅವರ ಪುತ್ರ ಶಶಿಧರ್ ಬದಲಾಗಿ ಬಿಜೆಪಿ ಛಬ್ಬಿ ಮೇಲೆ ಕರುಣೆ ತೋರುವ ಸಾಧ್ಯತೆ ಇದೆ. ಆದರೆ, ಛಬ್ಬಿ ಗೆಲವು ಕೂಡ ಇಲ್ಲಿ ಸುಲಭವಿಲ್ಲ. ನಿಂಬಣ್ಣವರ ಸೇರಿ 13 ಬಂಡಾಯಗಾರರ ಬಿಸಿ ಅವರ ಗೆಲವಿಗೆ ಅಡ್ಡಿಯಾಗಬಹುದು.

ಲಾಡ್ ಲಡ್ಡು ಸುಲಭಕ್ಕೆ ಸಿಗಲ್ಲ: Santosh Lad
ಇನ್ನು ಲಾಡ್‌ಗೆ ಕೂಡ ಗೆಲುವಿನ ಸಿಹಿ ಅಷ್ಟು ಸುಲಭವಿಲ್ಲ. ನಾಗರಾಜ್ ಛಬ್ಬಿ ಇಲ್ಲಿ ಲಾಡ್ ಲಾರ್ಡ್ ಆಗುವುದನ್ನು ತಪ್ಪಿಸುವ ಎಲ್ಲ ಪ್ರಯತ್ನ ಮಾಡಲಿರುವುದು ಸತ್ಯ. ಕೋವಿಡ್ ಸಮಯದಲ್ಲಿ ಒಂದಿಷ್ಟು ಜನಪರ ಕೆಲಸ ಮಾಡಿದ್ದು ಏನಾದರೂ ಕೈ ಹಿಡಿಯಬಹುದಾ ಎಂಬ ಆಕಾಂಕ್ಷೆ ಲಾಡ್ ಪಾಳಯದಲ್ಲಿದೆ.

Mahesh Tenginkai 

ಟೆಂಗಿನಕಾಯಿ ಎಂಟ್ರಿ?
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮಹೇಶ್ ಟೆಂಗಿನಕಾಯಿ ಈ ಕ್ಷೇತ್ರದ ಅಭ್ಯರ್ಥಿ ಆಗಲಿದ್ದಾರೆ ಎಂಬ ಸುದ್ದಿ ಕೂಡ. ಇದೆ. ಅವರಿಗೂ ಮೊದಲಿಂದಲೂ ಈ ಕ್ಷೇತ್ರದ ಮೇಲೆ ಕಣ್ಣು ಇದ್ದಿದ್ದು ಸುಳ್ಳಲ್ಲ. ಹೀಗಾಗಿ ಈ ವಿಚಾರವೂ ಸ್ಥಳೀಯರ ಗುಸುಗುಸುವಿಗೆ ಕಾರಣವಾಗಿದೆ.

13 ಬಂಡಾಯಗಾರರು ಯಾರು ಗೊತ್ತಾ?
ಕರಿಯಪ್ಪ ಅಮ್ಮಿನಬಾವಿ, ಮಹೇಶ ತಿಪ್ಪಣ್ಣವರ, ಬಸವರಾಜ ಕೆಲಗೇರಿ, ವೈ.ಎನ್.ಪಾಟೀಲ್,  ವಿ.ಎಸ್.ಪಾಟೀಲ್, ಶಂಕರ ಬಸವರಡ್ಡಿ, ಕಲ್ಮೇಶ  ಹಾವೇರಪೇಟಾ, ಮಹಾಂತೇಶ ತಹಶೀಲ್ದಾರ್, ಶಿವಾನಂದ ಹಿರೇಮಠ, ವೀರಪಾಕ್ಷಿ ನೂಲ್ವಿ, ನೀಲಕಂಠಗೌಡ ಪಾಟೀಲ, ಯಲ್ಲಪ್ಪ ಕುಂದಗೋಳ, ಮಂಜುನಾಥ ಗೌರಿ ಬಿಜೆಪಿಗೆ ಸಡ್ಡು ಹೊಡೆದಿದ್ದಾರೆ.

Related posts

ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಡಿ.ವಿ.ಮುತಾಲಿಕ ದೇಸಾಯಿ ಇನ್ನಿಲ್ಲ

eNewsLand Team

ಸಿದ್ದೇಶ್ವರ ಸ್ವಾಮೀಜಿಯವರ ಭೌತಿಕ ಅಗಲಿಕೆಗೆ ಪ್ರದಾನಿ ನರೇಂದ್ರ ಮೋದಿ ಕಂಬನಿ

eNEWS LAND Team

ಇ-ಶ್ರಮ್ ತಂತ್ರಾಂಶದ ಮೂಲಕ ಅಸಂಘಟಿತ ಕಾರ್ಮಿಕರ‌ ಮಾಹಿತಿ ಸಂಗ್ರಹಿಸಿ: ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ

eNEWS LAND Team