ಇಎನ್ಎಲ್ ಧಾರವಾಡ:
ಧಾರವಾಡ ಸ್ಥಳೀಯ ಸಂಸ್ಥೆಗಳಿಂದ ಕರ್ನಾಟಕ ವಿಧಾನಪರಿಷತ್‍ನ ಎರಡು ಸ್ಥಾನಗಳಿಗೆ ಜರುಗಿದ ದ್ವೈವಾರ್ಷಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ 3334 ಮತಗಳನ್ನು ಮತ್ತು ಬಿಜೆಪಿಯ ಪ್ರದೀಪ ಶೆಟ್ಟರ 2497 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ಬಿಜೆಪಿಗೆ ತಲೆನೋವು ತಂದಿಟ್ಟಿದ್ದ ಮಲ್ಲಿಕಾರ್ಜುನ ಹಾವೇರಿ-1217 ಮತ ಪಡೆದಿದ್ದಾರೆ. ಉಳಿದಂತೆ, ಟಿ.ಶಿವಕುಮಾರ-03, ಫಕೀರಡ್ಡಿ ಅತ್ತಿಗೇರಿ-01, ಈರಪ್ಪ ಗುಬ್ಬೆರ-04, ಬಸವರಾಜ ಕೊಟಗಿ-05, ಮಹೇಶ ಜೋಷಿ-09, ಮಂಜುನಾಥ ಅಡಮನಿ-05, ವಿರೂಪಾಕ್ಷಗೌಡ ಪಾಟೀಲ-05 ಮತ ಪಡೆದಿದ್ದಾರೆ.
ಒಟ್ಟು ಸಿಂಧು ಮತ- 7080 ಒಟ್ಟು ಅಸಿಂಧು ಮತ-370 ಒಟ್ಟು ಏಣಿಕೆಯಾದ ಮತ-7450
ಮತ ಏಣಿಕಾ ಕೇಂದ್ರದಲ್ಲಿ ಚುನಾವಣಾ ವೀಕ್ಷಕರಾದ ಎಸ್.ಆರ್. ಉಮಾಶಂಕರ ಅವರು ಉಪಸ್ಥಿತರಿದ್ದರು.
ಧಾರವಾಡ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಹಾವೇರಿ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ,
ಗದಗ ಅಪರ ಜಿಲ್ಲಾಧಿಕಾರಿ ಎಮ್. ಸತೀಶಕುಮಾರ ಅವರು ಸಹಾಯಕ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.