eNews Land
ಬ್ರೇಕಿಂಗ್ ಸುದ್ದಿ ರಾಜಕೀಯ

ಮುಖ್ಯಮಂತ್ರಿ ಬೊಮ್ಮಾಯಿ ಬಿಚ್ಚಿಟ್ಟ‌ ಮನದಾಳ ಮಾತೇನು? ಇಲ್ಲಿ ನೋಡಿ

Listen to this article

ಇಎನ್ಎಲ್ ದೆಹಲಿ: 

ರಾಜ್ಯದ ಜನತೆ ನನ್ನನ್ನು ಒಬ್ಬ ಜನಸಾಮಾನ್ಯರ ಮುಖ್ಯಮಂತ್ರಿ ಎಂದು ಸ್ಮರಿಸಲು ಬಯಸುವುದಾಗಿ ತಿಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತಂದವನು ಎಂದು ಜನ ಗುರುತಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು.

ರಾಜ್ಯದ ಜನ ಫಲಾನುಭವಿಗಳಿಗಿಂತ ಪಾಲುದಾರರಾಗಬೇಕು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಬುಧವಾರ ನವದೆಹಲಿಯಲ್ಲಿ ಟೈಮ್ಸ್ ನೌವ್ ಸಮಿಟ್ ನಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಕರ್ನಾಟಕವನ್ನು ಹೇಗೆ ಮುನ್ನಡೆಸಲು ಬಯಸುವಿರಿ ಎಂಬ ಪ್ರಶ್ನೆಗೆ ಮುಖ್ಯಮಂತ್ರಿಗಳು ನೀಡಿದ ಪ್ರತಿಕ್ರಿಯೆ ಇದು.

ರಾಜ್ಯದಲ್ಲಿ ಅತ್ಯುತ್ತಮ ಹವಾಮಾನ, ಕೌಶಲ್ಯಯುಕ್ತ ಮಾನವ ಸಂಪನ್ಮೂಲವಿದೆ. ಆಧುನಿಕ ಕೃಷಿ ತಂತ್ರಜ್ಞಾನದಿಂದ ಹಿಡಿದು ಮಾಹಿತಿ ತಂತ್ರಜ್ಞಾನದವರೆಗೆ, ಬಾಹ್ಯಾಕಾಶ ತಂತ್ರಜ್ಞಾನದಿಂದ ಕೃತಕ ಬುದ್ಧಿಮತ್ತೆಯವರೆಗೆ ರಾಜ್ಯ ಮುಂಚೂಣಿಯಲ್ಲಿದೆ. ಇವೆಲ್ಲಾ ನಮ್ಮ ಶಕ್ತಿಯಾಗಿದ್ದು, ಈ ಶಕ್ತಿಯ ಸದ್ಬಳಕೆ ಮಾಡುವುದು ನನ್ನ ಆಶಯ ಎಂದರು.

ನಿಮ್ಮ ತಂದೆಯ ಹಾಗೂ ಬಿ.ಎಸ್.ವೈ. ಅವರ ಪರಂಪರೆಯನ್ನು ಮುಂದುವರೆಸುವ ಒತ್ತಡ ನಿಮ್ಮ ಮೇಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ರಾಜಕೀಯವಾಗಿ ಹೌದು. ಆದರೆ ಈ ಹಿಂದೆ ಐದು ಮುಖ್ಯಮಂತ್ರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ ಅನುಭವ ಈಗ ಉಪಯೋಗಕ್ಕೆ ಬಂದಿರುವುದಾಗಿ ತಿಳಿಸಿದರು.

Related posts

ಹು-ಧಾ ಸೆಂಟ್ರಲ್ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಪಡೆದ ಶೆಟ್ಟರ್

eNEWS LAND Team

ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಅಸಿಂಧುಗೊಳಿಸಲು ಒತ್ತಡ ಆರೋಪ, ಡಿಕೆಶಿಗೆ ಮಾತನಾಡಲು ವಿಷಯವಿಲ್ಲದೆ ಅನಗತ್ಯ ಆರೋಪ: ಸಿಎಂ ಬೊಮ್ಮಾಯಿ

eNEWS LAND Team

ಜ.5ರಿಂದ ಜೆ.ಪಿ.ನಡ್ಡಾ ಅವರ ರಾಜ್ಯ ಪ್ರವಾಸ- ನಿರ್ಮಲ್‍ಕುಮಾರ್ ಸುರಾಣ

eNewsLand Team