eNews Land
ರಾಜಕೀಯ

ಕಾಂಗ್ರೆಸ್ ಇಂದ ಜೆಡಿಎಸ್ ಗೆ ಬಂದ ಅಭ್ಯರ್ಥಿ

Listen to this article

ಪುರಸಭೆ ಚುನಾವಣೆ ೪ ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ನೈತಿಕವಾಗಿ ಮನಸ್ಸು ಒಪ್ಪದ ಕಾರಣ ಚುನಾವಣೆ ಕಣದಿಂದ ನಿವೃತ್ತಿ ಘೋಷಣೆ
ಇಎನ್ಎಲ್ ಅಣ್ಣಿಗೇರಿ– ಕಳೆದ ೨೦ ವರ್ಷಗಳಿಂದ ಜೆಡಿಎಸ್ ಪಕ್ಷದ ಸಿದ್ದಾಂತ, ತತ್ವಕ್ಕೆ ಬದ್ಧನಾಗಿ, ನಿಷ್ಠಾವಂತ ಕಾರ್ಯಕರ್ತನಾಗಿ, ರಾಜಕೀಯ ಭವಿಷ್ಯ ರೂಪಿಸಿಕೊಂಡಿದ್ದರಿoದ ಡಿ.೨೭ ರಂದು ಜರುಗುವ ಪುರಸಭೆ ಚುನಾವಣೆಯಲ್ಲಿ ೪ ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಡಿ.೧೪ ರಂದು ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಹಾಗೂ ವಿಧಾನ ಪರಿಷತ್ ಸದಸ್ಯ ಸಲಿಂ ಅಹಮ್ಮದ ಒತ್ತಾಯದ ಮೇರೆಗೆ   ಡಿ.೧೫ ರಂದು ನಾಮಪತ್ರ ಸಲ್ಲಿಸಿದ್ದೆ. ಡಿ-೧೮ ರಂದು ನಾಮಪತ್ರ ಹಿಂಪಡೆಯ ಪ್ರಕ್ರಿಯೆಗೆ ಮಧ್ಯಾಹ್ನ೨.೫೦ ಗಂಟೆಗೆ ಹಿಂಪಡೆಯ ಅರ್ಜಿ ಸಲ್ಲಿಸಿದ್ದರೂ  ಅಣ್ಣಿಗೇರಿ ಕಾಂಗ್ರೆಸ ಬ್ಲಾಕ ಕಮಿಟ ಅಧ್ಯಕ್ಷ ಮಂಜುನಾಥ ಮಾಯಣ್ಣವರ ತಡೆ ಉಂಟು ಮಾಡಿದ್ದರಿಂದ  ಹಾಗೂ ಚುನಾವಣೆ ಅಧಿಕಾರಿ ಸರಿಯಾಗಿ ಹಿಂಪಡೆಯ ಪ್ರಕ್ರಿಯೆ ಕೈಗೊಳ್ಳದ ಕಾರಣ ನೈತಿಕವಾಗಿ ಮನಸ್ಸು ಒಪ್ಪದ ಕಾರಣ ಚುನಾವಣೆ ಕಣದಿಂದ ದೂರ ಉಳಿಯಲು ನಿವೃತ್ತಿ ಘೋಷಿಸುತ್ತಿದ್ದೇನೆಂದು ಜೆಡಿಎಸ್ ಮುಖಂಡ  ಶಿವಶಂಕರ ಚನ್ನಪ್ಪ ಕಲ್ಲೂರ ಹೇಳಿದರು.
ಪಟ್ಟಣದ ಜೆಡಿಎಸ್ ಕಾರ್ಯಲಯದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು..
ಪುರಸಭೆ ಚುನಾವಣೆ ೪ ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾಗಿ,ಅನಿವರ‍್ಯವಾಗಿ ಚುನಾವಣೆ ಕಣದಲ್ಲಿ ಉಳಿಯುವಂತಾಗಿದೆ. ಅದಕ್ಕೆ ಚುನಾವಣೆಯಿಂದಲೇ ನಿವೃತ್ತಿ ಘೋಷಿಸುತ್ತಿದ್ದೇನೆಂದು ಹೇಳಿದರು.
ನನಗೆ ಮತ ನೀಡುವ ಮತದಾರ ಪ್ರಭುಗಳು ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಬೇಕು. ಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಳ್ಳುತ್ತೇನೆಂದು ಹೇಳಿದರು. ರಾಜಕೀಯ ನೆಲ ಕೊಟ್ಟ ಜೆಡಿಎಸ್ ಪಕ್ಷದಲ್ಲೇ ಮುಂದುವರೆಯುತ್ತೇನೆoದು ಹೇಳಿದರು.
ಈ ಸಂದರ್ಭದಲ್ಲಿ ಧಾ.ಜಿ.ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ.ಎನ್.ತೋಟದ, ವಿರೇಶ ಶಾನಭೋಗರ, ಜೆಟ್ಟೆಪ್ಪ ಮುತ್ತಲಗೇರಿ, ಭಾಷುಸಾಬ ನವಲಗುಂದ, ನಿಂಗಪ್ಪ ಬಡೆಪ್ಪನವರ, ವಿರೇಶ ಕುಬಸದ, ಸೋಮಶೇಖರ ಕಲ್ಲೂರ, ಮಂಜುನಾಥ ಅಡಕಾವು, ಹಸನಸಾಬ ನವಲಗುಂದ, ಚಂದ್ರಕಾoತ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಪುರಸಭೆ ಚುನಾವಣೆ ಅಖಾಡಕ್ಕೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಉಪಸ್ಥಿತರಿದ್ದರು.

Related posts

ಮೇ 13ರ ಬೆಳಗ್ಗೆ 8 ಗಂಟೆಯಿಂದ  ಮತ ಎಣಿಕೆ ಆರಂಭ ; ಮತ ಎಣಿಕಾ ಕೇಂದ್ರಕ್ಕೆ 375 ಸಿಬ್ಬಂದಿ ನಿಯೋಜನೆ

eNEWS LAND Team

ಬೊಮ್ಮಾಯಿ ನೂರು ದಿನಗಳ ಆಡಳಿತಕ್ಕೆ ಪ್ರಧಾನಿ ಮೋದಿ ಹೇಳಿದ್ದೇನು?

eNewsLand Team

ಎಸ್.ಎ.ರವೀಂದ್ರನಾಥ್ ಇಂದಿನ ಪೀಳಿಗೆಗೆ ಆದರ್ಶಪ್ರಾಯರು : ಸಿಎಂ ಬೊಮ್ಮಾಯಿ

eNEWS LAND Team