23.4 C
Hubli
ಮಾರ್ಚ್ 24, 2023
eNews Land
ದೇಶ ರಾಜಕೀಯ

ಒತ್ತಡ ನಿವಾರಣೆಗೆ ಸಿಎಂ ಬೊಮ್ಮಾಯಿ‌ ಏನು ಮಾಡ್ತಾರೆ? ಅವರೇನು ಹೇಳಿದ್ರು?

Listen to this article

ಇಎನ್ಎಲ್ ದೆಹಲಿ:

ರಾಜಕೀಯದ ಒತ್ತಡ ಹಾಗೂ ಮುಖ್ಯಮಂತ್ರಿಯಾಗಿ ಜನರ ಸಮಸ್ಯೆಗಳ ಒತ್ತಡಗಳನ್ನು ನಿವಾರಿಸಲು ಯಾವ ರೀತಿಯ ಸಂಗೀತ ಆಲಿಸುತ್ತೀರಿ?

ಇದು ದೆಹಲಿಯಲ್ಲಿ ಟೈಮ್ಸ್ ನೌ ಸಮಿಟ್ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ಗೆ ಕೇಳಲಾದ ಪ್ರಶ್ನೆ.

ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ಹಿಂದೂಸ್ತಾನಿ ಸಂಗೀತ ಅತ್ಯಂತ ಪ್ರಿಯ. ನನ್ನ ಶಾಲಾ ಕಾಲೇಜು ದಿನಗಳಲ್ಲಿ ಕನ್ನಡ ಹಾಗೂ ಹಿಂದಿ ಚಿತ್ರಗೀತೆಗಳು ನನ್ನ ಹೃದಯಕ್ಕೆ ಹತ್ತಿರ. ಉತ್ತಮ ಸಾಹಿತ್ಯವಿರುವ ಹಳೆಯ ಹಾಡುಗಳನ್ನು ಕೇಳುವ ಹವ್ಯಾಸವಿದೆ ಎಂದರು.

ಅಲ್ಲದೇ ಮುಖ್ಯಮಂತ್ರಿಯವರು ತಮಗೆ ಇಷ್ಟದ *ಚೌದವೀ ಕಾ ಚಾಂದ್ ಹೋ* ಹಿಂದಿ ಚಿತ್ರದ ಗೀತೆಯನ್ನು ಗುನುಗಿದರು.

Related posts

ಕೇಂದ್ರ ಪಂಚಾಯತ್ ರಾಜ್ ಸಚಿವರಿಂದ ಮುಖ್ಯಮಂತ್ರಿಗಳ ಭೇಟಿ

eNEWS LAND Team

ವಿಧಾನ ಪರಿಷತ್ ಚುನಾವಣಾ ದಿನಾಂಕ ಪ್ರಕಟ

eNEWS LAND Team

ಕೋವಿಡ್ ಬಗ್ಗೆ ಜನತೆ ಗಾಬರಿಯಾಗಬೇಕಿಲ್ಲ ಲಾಕ್ ಡೌನ್ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ : ಸಿಎಂ

eNEWS LAND Team