24.3 C
Hubli
ಮೇ 26, 2024
eNews Land
ಸುದ್ದಿ

ಅಣ್ಣಿಗೇರಿ ತಾಲೂಕ ಪಂಚಾಯತ ಕೆಡಿಪಿ ಸಭೆ : ತಾಲೂಕಿನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ

ಇಎನ್‌ಎಲ್‌ ಅಣ್ಣಿಗೇರಿ: ಆಡಳಿತ ವ್ಯವಸ್ಥೆಯಲ್ಲಿ ವಿಕೇಂದ್ರಿಕರಣವಿರಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಕೇಂದ್ರಕರಣದಿoದ ಆಡಳಿತ ಮಾಡಿದರೇ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಿದೆ. ಆ ಹಿನ್ನಲೆಯಲ್ಲಿ ಪುರಸಭೆ, ಗ್ರಾಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಕರೆಸಿದ್ದು ತಮ್ಮ ಪಟ್ಟಣ ಹಾಗೂ ಗ್ರಾಮ ವ್ಯಾಪ್ತಿಯ ಪ್ರದೇಶದಲ್ಲಿ ಮೂಲ ಸೌಲಭ್ಯಗಳನ್ನು ಕಾರ್ಯಗತಗೊಳಿಸಲು ಪಕ್ಷಾತೀತವಾಗಿ ಸರ್ವರೂ ಕೂಡಿಕೊಂಡು ಅಭಿವೃದ್ಧಿ ಪಥದತ್ತ ಕ್ಷೇತ್ರವನ್ನು ಮುನ್ನಡೆಸಲು, ಗ್ರಾಮದ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆಂದು ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.

ಪಟ್ಟಣದ ಪಂಪ ಸ್ಮಾರಕ ಭವನದಲ್ಲಿ ತಾಲೂಕ ಪಂಚಾಯತ ಕೆಡಿಪಿ ಸಭೆಯಲ್ಲಿ ಮಾತನಾಡಿದರು.
ಸರ್ಕಾರದ 5 ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಆ.27 ರಂದು ಗೃಹಲಕ್ಷ್ಮೀ ಯೋಜನೆ ಅನುಷ್ಠಾನಗೊಳ್ಳಲಿದ್ದು, ರಾಜ್ಯಾದ್ಯಂತ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮ ನವಲಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪುರಸಭೆ, ಪಟ್ಟಣ ಪಂಚಾಯತ, ಗ್ರಾಪಂಗಳಲ್ಲಿ ಸರಕಾದ ನಿರ್ದೇಶನದ ಪ್ರಕಾರ ಕಾರ್ಯಕ್ರಮ ಆಯೋಜಿಸಲು ಆಡಳಿತ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣ ಕೇಂದ್ರಗಳಲ್ಲಿ 5 ಜೋನ್ ಮಾಡಿ ಮಹಿಳೆಯರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಮಾಡಿ, ಉಪಹಾರ ವ್ಯವಸ್ಥೆ ಕಲ್ಪಸಿಕೊಡಬೇಕು. ಗ್ರಾಪಂಗಳಲ್ಲಿ ಆಡಳಿತ ಮಂಡಳಿ. ಪಿಡಿಓಗಳು, ಕರ್ತವ್ಯನಿರತರಾಗಿ ಕಾರ್ಯಕ್ರಮದ ಯಶಸ್ಸಿಗೆ ವ್ಯವಸ್ಥೆ ಕಲ್ಪಿಸಬೇಕೆಂದರು 
ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಸೌಲಭ್ಯ ಒದಗಿಸಿಲು ಅಗತ್ಯ ಕ್ರಮಕೈಗೊಳ್ಳಬೇಕು. ಕ್ಷೇತ್ರದ ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆ ಬರದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸೂಚಿಸಿದರು.  ಹೆಸ್ಕಾಂ ಅಧಿಕಾರಿಗಳಿಂದ ಗೃಹಜ್ಯೋತಿ ಕಾರ್ಯಕ್ರಮದ ಉಚಿತ ವಿದ್ಯುತ್ ಸೌಲಭ್ಯ, ಫಲಾನುಭವಿಗಳಿಗೆ ಒದಗಿಸಿದ ಮಾಹಿತಿ ಪಡೆದರು. ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ ಗೃಹಲಕ್ಷ್ಮೀ ಯೋಜನೆ ತಾಲೂಕಿನಲ್ಲಿ ಅರ್ಜಿ ನೊಂದಣಿ ಮಾಡಿದ ಫಲಾನುಭವಿಗಳ ಮಾಹಿತಿ ನೀಡಿದರು.
ಮಜ್ಜಿಗುಡ್ಡ, ಬೆಂತೂರ ರಸ್ತೆ, ಇಬ್ರಾಹಿಂಪೂರ, ಹಳ್ಳಿಕೇರಿ, ಸಾಸ್ವಿಹಳ್ಳಿ, ಬಸಾಪೂರ, ಭದ್ರಾಪೂರ, ಸೈದಾಪೂರ, ಶಲವಡಿ, ಗ್ರಾಮಗಳ ಚಕ್ಕಡಿ ರಸ್ತೆ, ಡಾಂಬರ ರಸ್ತೆ, ನಿರ್ಮಾಣ ಹಂತದ ಕುರಿತು ಪಿಡಬ್ಲ್ಯುಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸದ್ಯ ಅಪೂರ್ಣಗೊಂಡ ಕಾಮಾಗಾರಿಗೆ ಚಾಲನೆ ನೀಡಿ, ಬಿಲ್ ಪಾವತಿಸಿದ ಕಾರಣ ಅರ್ಧಕ್ಕೆ ನಿಲ್ಲಿಸಿದ ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಳಿಸಲು ತಿಳಿಸಿ, ಈಗಾಗಲೇ ಗುತ್ತಿಗೆದಾರರು ಕೈಗೊಂಡ ಕಾಮಗಾರಿ ಪರಿಶೀಲಿಸಿ ಬಿಲ್ ಪಾವತಿಸಲು  ಅಗತ್ಯ ಕ್ರಮಕೈಗೊಳ್ಳಬೇಕೆಂದರು.

ತಾಲೂಕಿನ ರೈತರ ಬೇಡಿಕೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಿದ ರೈತರ ಹೊಲಗದ್ದೆಗಳಿಗೆ  ಕೃಷಿ ಹೊಂಡ, ನಿರ್ಮಾಣಕ್ಕೆ ಚಾಲನೆ ನೀಡಲು ಕ್ರಮಕೈಗೊಳ್ಳಲಾಗುವುದೆಂದರು. ರೈತರ ಮುಂಗಾರು ಬೆಳೆ ನಷ್ಟ  ಪರಿಹಾರ, ಬೆಳೆವಿಮೆ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಇಬ್ಬರು ರೈತರ ಕುಟುಂಬಸ್ಥರಿಗೆ  5 ಲಕ್ಷ ರೂಗಳ ಪರಿಹಾರ ಧನ, ವಿತರಿಸಿದರು.
ತಾಲೂಕಿನ ಅಧಿಕಾರಿಗಳು ಕಟ್ಟನಿಟ್ಟಾಗಿ ಕರ್ತವ್ಯ ನಿಭಾಯಿಸಬೇಕು. ಹೆಡ್ ಕ್ವಾಟರ್‌ನಲ್ಲಿದ್ದು ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಲ್ಲಿ ಕ್ರಮಕೈಗೊಳ್ಳಬೇಕು. ಗ್ರಾಪಂ ಪಿಡಿಓಗಳು ನಿಷ್ಠೆಯಿಂದ ಕರ್ತವ್ಯ ನಿಭಾಯಿಸಿ, ಇಲ್ಲದೇ ಹೋದ್ರೆ ತಮ್ಮಲ್ಲಿ ಬದಲಾವಣೆ ತರಲು ವರ್ಗಾವಣೆ ಅನಿವಾರ್ಯವೆಂದರು. ಸರಕಾರಿ ಇಲಾಖೆ ಅಧಿಕಾರಿಗಳು, ನೌಕರರು, ಕರ್ತವ್ಯನಿರತರಾಗಿ ಸೇವೆ ಸಲ್ಲಿಸಬೇಕು ಇಲ್ಲದೇ ಹೋದ್ರೆ ವರ್ಗಾವಣೆಗೊಂಡು ಬೇರೆ ಸ್ಥಳಕ್ಕೆ ಹೋಗಬೇಕೆಂದರು. ಸೂಚನೆ ಕೊಟ್ಟರು.
ಕ್ಷೇತ್ರದ ಗ್ರಾಪಂ ಪುರಸಭೆ. ಪಟ್ಟಣ, ಪಂಚಾಯತ ಸಾಮಾನ್ಯ ಸಭೆಯಲ್ಲಿ ಅವಶ್ಯವಿದ್ದಾಗ ಪಾಲ್ಗೊಂಡು ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಭಾಗವಹಿಸುವುದಾಗಿ ಹೇಳಿದರು.
ಪುರಸಭೆ  ಅಧ್ಯಕ್ಷೆ ರಜೀಯಾಬೇಗಂ ಮಾತನಾಡಿ, ತಾಲೂಕಿನ ಎಲ್ಲಾ ಇಲಾಖೆ ಸರ್ಕಾರಿ ಕಛೇರಿಗಳು ಪ್ರಾರಂಭಗೊಳ್ಳಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಬಡ್ತಿ ನೀಡಿ, ವೈದ್ಯಕೀಯ ಎಲ್ಲಾ ಸುಸಜ್ಜಿತ ಸೌಲಭ್ಯಗಳು,  ವೈದ್ಯರು, ಸಿಬ್ಬಂದಿ,ಒಳಗೊoಡoತೆ  ತಾಲೂಕ ಆಸ್ಪತ್ರೆ ನಿರ್ಮಾಣಗೊಳ್ಳಬೇಕು.
ಪಟ್ಟಣದಲ್ಲಿರುವ ಬೀದಿ ವಾಪಾರಸ್ಥರಿಗೆ  ಮಾರ್ಕೇಟ್ ವ್ಯವಸ್ಥೆ ಕಲ್ಪಿಸಬೇಕು. ಎಲ್ಲಾ ಇಲಾಖೆಗಳು ಒಂದೇ ಸೂರಿನಡಿ ಕೆಲಸ ಮಾಡಲು ಮಿನಿವಿಧಾನಸೌಧ ಕಟ್ಟಡ ನಿರ್ಮಾಣವಾಗಬೇಕು. ಪ್ರಮುಖವಾಗಿ ಪಟ್ಟಣಕ್ಕೆ 128 ಕೋಟಿ ರೂಗಳ ವೆಚ್ಚದ ಪ್ಲಾನ ಸರ್ವೇ ಪ್ರಕಾರದ ಒಳಚರಂಡಿ ಯೋಜನೆ ಅನುಷ್ಠಾನಗೊಳಿಸಲು ಶಾಸಕರಲ್ಲಿ ಮನವಿ ಬೇಡಿಕೆಯಿಟ್ಟರು.
ತಾಲೂಕಿನ ಹಳ್ಳಿಕೇರಿ, ಸಾಸ್ವಿಹಳ್ಳಿ, ಇಬ್ರಾಹಿಂಪೂರ, ನಲವಡಿ, ಶಲವಡಿ, ತುಪ್ಪದಕುರಹಟ್ಟಿ, ಶಿಶ್ವಿನಹಳ್ಳಿ, ಭದ್ರಾಪೂರ, ನ್ಯಾವಳ್ಳಿ, ಗ್ರಾಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಸನ್ಮಾನ ಮಾಡಲಾಯಿತು. ತಾಲೂಕಿನ ಪುರಸಭೆ. ಗ್ರಾಪಂ ಅಧ್ಯಕ್ಷರು-ಉಪಾಧ್ಯಕ್ಷರು ಶಾಸಕ ಎನ್.ಎಚ್. ಕೋನರಡ್ಡಿ ಅವರಿಗೆ ಸನ್ಮಾನ ಮಾಡಿದರು.
ಅಣ್ಣಿಗೇರಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಾಗೀರದಾರ ಮಾತನಾಡಿ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದಕ್ಕೆ  ಎಲ್ಲಾ ಮಹನೀಯರಿಗೆ ವಂದಿಸಿದರು.
ಈ ಸಂದರ್ಭದಲ್ಲಿ ಜಿಪಂ ಲೆಕ್ಕಾಧಿಕಾರಿ, ಅಣ್ಣಿಗೇರಿ ತಾಪಂ ಆಡಳಿತಾಧಿಕಾರಿ, ಲಲಿತಾ ಲಮಾಣಿ, ಪಿಎಸ್ಆಯ್ ಸಿದ್ಧಾರೂಢ ಆಲದಕಟ್ಟಿ, ಪುರಸಭೆ ಅಧ್ಯಕ್ಷೆ ರಜೀಯಾಬೇಗಂ ರೊಕ್ಕದಕಟ್ಟಿ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜಕರಡ್ಡಿ, ಪುರಸಭೆ ಮುಖ್ಯಾಧಿಕಾರಿ ವಾಯ್.ಜಿ.ಗದ್ದಿಗೌಡರ, ತಹಶೀಲ್ದಾರ ಶಿವಾನಂದ ಹೆಬ್ಬಳ್ಳಿ, ತಾಪಂ ಸಿಬ್ಬಂದಿ ವರ್ಗ, ವಿವಿಧ ಇಲಾಖೆಗಳ ಅಧಿಕಾರಿಗಳು, ಪುರಸಭೆ ಸದಸ್ಯರು, ಸಾರ್ವಜನಿಕರಿದ್ದರು. 

Related posts

ಪಕ್ಷಾತೀತ, ಧರ್ಮಾತೀತ, ಕಾನೂನಾತ್ಮಕವಾಗಿ ಕರ್ತವ್ಯ ನಿರ್ವಹಿಸಿ: ಡಿಸಿ ಗುರುದತ್ತ ಹೆಗಡೆ

eNEWS LAND Team

ಈಶ್ವರಪ್ಪ ವಿವಾದಾತ್ಮಕ ಹೇಳಿಕೆಗೆ ಪ್ರತಿಭಟನೆ

eNEWS LAND Team

ಹಿರಿಯನಾಗರಿಕರ ಕ್ಷೇಮಾಭಿವೃದ್ದಿ ಸಂಘದಿಂದ ನೇತಾಜಿ ದಿನಾಚರಣೆ

eNEWS LAND Team