25.9 C
Hubli
ಏಪ್ರಿಲ್ 29, 2024
eNews Land
ಸುದ್ದಿ

ಅಣ್ಣಿಗೇರಿಯಲ್ಲಿ ಸಂಭ್ರಮದ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

ಇಎನ್‌ಎಲ್‌ ಅಣ್ಣಿಗೇರಿ: ನಮಗೆಲ್ಲಾ ಆ.15 ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂಭ್ರಮದ ದಿನ. ಪವಿತ್ರದಿನ, ಸ್ವಾಭಿಮಾನ ದಿನ, ಹೆಮ್ಮೆಯ ದಿನ, ಸ್ವಾತಂತ್ರ್ಯೋತ್ಸವಕ್ಕೆ ಪ್ರಾಣಾರ್ಪಣೆಗೈದ ಹುತಾತ್ಮರ ದಿನ,ದೇಶ ಸೇವೆಗೆ ನಮ್ಮನ್ನು ಸಮರ್ಪಣಾ ಭಾವದಿಂದ ತೊಡಗಿಸಿಕೊಳ್ಳುವ ದಿನವೆಂದು ಅಣ್ಣಿಗೇರಿ ತಾಲೂಕಿನ ಸಮಸ್ತ ಜನತೆಗೆ 77ನೇ ಸ್ವಾತಂತ್ರ್ಯೋತ್ಸವ ಶುಭಾಶಯವನ್ನು ತಹಶೀಲ್ದಾರ ಶಿವಾನಂದ ಹೆಬ್ಬಳ್ಳಿ ಹೇಳಿದರು.

ಪಟ್ಟಣದ ಶಾಸಕರ ಮಾದರಿ ಕೇಂದ್ರ ಶಾಲೆ ಮೈದಾನದಲ್ಲಿ ತಾಲೂಕ ಆಡಳಿತದಿಂದ ಆಯೋಜಸಿದ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೆರಿಸಿ ಮಾತನಾಡಿದರು.

ನಂತರ ಮಾತನಾಡಿ, ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರು, ಲಾಲಾ ಲಜಪತ್‌ರಾಯ್, ಭಗತ್‌ಸಿಂಗ, ಬಾಲ್ ಗಂಗಾಧರ ತಿಲಕ್, ಸುಭಾಷ್‌ಚಂದ್ರ ಭೋಸ್,ಸರದಾರ ವಲ್ಲಬಭಾಯಿ ಪಟೇಲ, ಅವರಂಥ ಅಸಂಖ್ಯಾತ ದಾರ್ಶಿನಿಕರನ್ನು ನಾವು ಈ ಮಂಗಳಕರ ಶುಭ ಸಂದರ್ಭದ ದಿನದಂದು ವಿಮೋಚನೆಯ ಹೋರಾಟದ ಫಲವಾಗಿ ಅವಿರತ ಶ್ರಮ ದೃಢತೆ, ಶೌರ್ಯದಿಂದ ಮುನ್ನಡೆಸಿದ ಪರಿಣಾಮ ರಾಷ್ಟ್ರ ಭಕ್ತರು,ಯೋಧರರು, ಸ್ವಾತಂತ್ರ್ಯ ಸೇನಾನಿಗಳು,ಅನ್ನದಾತರು, ಗಡಿರಕ್ಷಣೆ ಕಾಯುವ ಸೈನಿಕರು, ರಾಷ್ಟ್ರ ಅಭಿಮಾನಿಗಳನ್ನು ಗೌರವಿಸುತ್ತೇವೆ.

1947 ಆ.14ರ ಮಧ್ಯ ರಾತ್ರಿ 12 ಗಂಟೆಗೆ ಬ್ರೀಟಿಷ್ ವಸಾಹತುಶಾಹಿ ಆಡಳಿತದ ಸರ್ಕಾರ ನಮಗೆ ಸ್ವಾತಂತ್ರ್ಯೋತ್ಸವ ಮರಳಿ ನೀಡಿದ ವಿಜಯೋತ್ಸವದ ದಿನವಾಗಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 76 ವರ್ಷಗಳು ಗತಿಸಿದವು. ಇಂದು 77 ನೇ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ಮಾಡಲು ನಾವೆಲ್ಲಾ ಸೇರಿದ್ದೇವೆ. ಪ್ರತಿವರ್ಷ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯಲ್ಲಿ ರಾಷ್ಟ್ರವ್ಯಾಪಿ ದ್ವಜಾರೋಹಣ ನೆರವೆರಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದೇವೆ

150 ವರ್ಷಗಳ ಕಾಲ ಸ್ವಾತಂತ್ರ್ಯೋತ್ಸವ ಹೋರಾಟದಲ್ಲಿ ಸ್ವಾತಂತ್ರ್ಯ ಸೇನಾನಿಗಳು ತೊಡಗಿ ಸಾಕಷ್ಟು ಕಷ್ಟ ನಷ್ಟ ನೋವು ಜೈಲುವಾಸ ಸೇರಿ ಗಲ್ಲಿಗೇರಿದ್ದರು. ಮನೆ ಮಠಗಳನ್ನು ಕಳೆದುಕೊಂಡು, ಹೋರಾಡಿ ಬದುಕನ್ನೆ ರಾಷ್ಟ್ರಕ್ಕೆ ಸಮರ್ಪಣೆ ಗೈದ ಅವರ ನಿರಂತರ ಶ್ರಮ, ತ್ಯಾಗ, ಬಲಿದಾನ, ಹೋರಾಟ ಪ್ರಯುಕ್ತ ನಾವು ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವದ ಅಮೂಲ್ಯ ಕೊಡುಗೆಯನ್ನು ಆನಂದಿಸುತ್ತಿದ್ದೇವೆoದರು.

ಭಾರತ ದೇಶದ ಸ್ವಾತಂತ್ರö್ಯಕ್ಕೆ ತಮ್ಮ ಬದುಕನ್ನೇ ಮುಡಿಪಿಟ್ಟ ಹೋರಾಟಗಾರ ತ್ಯಾಗ,ಸಮರ್ಪಣೆ ಭಾವ.ನೆನಪಿಸುವ ಸುದಿನದಂದು ದ್ವಜಾರೋಹಣ ನೇರವೆರಿಸಲು ಜಾತಿ.ಮತ,ಪಂಥ,ಧರ್ಮ ಪಕ್ಷವೆನ್ನದೇ ಸರ್ವರು ಒಗ್ಗಟ್ಟಿನಿಂದ ಸ್ವಾತಂತ್ರೊö್ಯÃತ್ಸವ ದಿನಾಚರಣೆ ಹಬ್ಬದಂತೆ ಆಚರಣೆ ಮಾಡುತ್ತಾರೆ. ಎಕೀಕೃತ, ಪ್ರಗತಿಪರ, ಅಂತರ್ಗತ ಭಾರತಕ್ಕೆ ತಮ್ಮ ಭದ್ದತೆಯನ್ನು ಪುನರುಚ್ಚಿರಿಸುತ್ತಾರೆಂದರು.

ರಾಷ್ಟ್ರ,ಹಾಗೂ ನಾಡಿನ ಸಮಗ್ರ ಅಭಿವೃದ್ಧಿ ಪ್ರಗತಿ ಸಾಧಿಸಬೇಕಿದೆ.ಅಂತರಿಕ ಸಮಸ್ಯೆಗಳನ್ನು ಅರಿತು ಪರಿಹರಿಸುವಲ್ಲಿ ಸಾಧನೆಗೈಯಬೇಕಿದೆ. ಬಾಹ್ಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮುನ್ನಗ್ಗಬೇಕಿದೆ. 140 ಕೋಟಿ ಜನಸಂಖ್ಯೆ ಹೊಂದಿರುವ ಪ್ರಜಾಪ್ರಭುತ್ವ ರಾಷ ನಮ್ಮದು. ಅನುಭವದಲ್ಲಿ ಸ್ವಾತಂತ್ರ್ಯೋತ್ಸವ ಕಾಣಬೇಕಿದೆ.ಪ್ರಜಾಪ್ರಭುತ್ವ ಜನಮುಖಿಯಾಗಬೇಕು. ಅನೈತಿಕತೆಯಲ್ಲಿ ಎಕತೆಯನ್ನು ಕಾಣಬೇಕಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಅರಿತು ಯುವ ಜನಾಂಗ ದೇಶದ ಪ್ರಜೆಗಳಾಗಿ ದೇಶಸೇವೆಗೆ ಕಂಕಣ ಬದ್ದರಾಗಿ ದುಡಿಯಲು ಪಣತೊಡಬೇಕಿದೆ ಎಂದರು.

ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡು, ಭಾಷಣ, ದೇಶ ಭಕ್ತಿಗೀತೆಗಳನ್ನು ಹಾಡಿ, ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮ, ಕವಾಯತು ಮಾಡಿ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು.ಆಶಾ ಕಾರ್ಯಕರ್ತೆಯರು, ಶಿಕ್ಷಕರು,ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು. ಪತ್ರಕರ್ತರು, ಬಿ,ಎಲ್.ಓಗಳು, ಪದ್ಮಶ್ರಿ ಪುರಸ್ಕೃತ ಎ.ಆಯ್.ನಡಕಟ್ಟಿನ, ಯುಪಿಎಸ್‌ಸಿ ರ‍್ಯಾಂಕ ವಿಜೇತ ಸಿದ್ದಲಿಂಗಪ್ಪ ಪೂಜಾರ ಮಾತೋಶ್ರೀ ಅವರಿಗೆ ತಾಲೂಕ ಆಡಳಿತದಿಂದ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ರಜೀಯಾಬೇಗಂ ರೊಕ್ಕದಕಟ್ಟಿ, ಉಪಾಧ್ಯಕ್ಷೆ ವಿಜಯಲಕ್ಷಿ0 ಜಕರಡ್ಡಿ, ಸ್ಥಾಯಿ ಸಮಿತಿ ಚೇರಮನ್ ಅಮೃತಪ್ಪ ಮೀಶಿ, ಪುರಸಭೆಯ ಸರ್ವ ಸದಸ್ಯರು, ಮುಖ್ಯಾಧಿಕಾರಿ ವಾಯ್.ಜಿ.ಗದ್ದಿಗೌಡರ, ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿವರ್ಗ, ಶಿಕ್ಷಕರ ವೃಂದ, ಅಧ್ಯಾಪಕರ ವೃಂದ, ವಿದ್ಯಾರ್ಥಿಗಳು, ರೈತ ಮುಖಂಡರು, ಸಾರ್ವಜನಿಕರು, ಮಹಿಳೆಯರು, ಉಪಸ್ಥಿತರಿದ್ದರು.

ಪಟ್ಟಣದ ಎಲ್ಲಾ ಶಿಕ್ಷಣ ಸಂಸ್ಥೆಗಳು,ವಿವಿಧ ಇಲಾಖೆ ಸರಕಾರಿ ಕಛೇರಿಗಳು, ರಾಷ್ಟ್ರೀಕೃತ ಕೃತ ಬ್ಯಾಂಕುಗಳು, ಸಂಘ ಸಂಸ್ಥೆಗಳು, ಪ್ರತಿ ವಾರ್ಡಿನ ಯುವಕ ಮಂಡಳಗಳು, ಮಹಿಳಾ ಮಂಡಳಗಳು, ತಮ್ಮ ಕಾರ್ಯಲಯದಲ್ಲಿ ಸ್ವಾತಂತ್ರö್ಯದಿನಾಚರಣೆ ಆಚರಿಸಿದರು.ಹಾಗೂ ಪಟ್ಟಣ ಹಾಗೂ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಮನೆ ಮನೆಗಳ ಮೇಲೆ ದ್ವಜಾರೋಹಣ ಮಾಡಿ ದೇಶಭಕ್ತಿ ಪ್ರೇಮ ಹಂಚಿಕೊoಡರು.

 

Related posts

ಹುಬ್ಬಳ್ಳಿಲಿ ಡಿ.ಕೆ.ಶಿ, ಸಿದ್ದರಾಮಯ್ಯ ಸುಟ್ಟಿದ್ದು ಯಾಕೆ ಗೊತ್ತಾ?

eNEWS LAND Team

ಅಣ್ಣಿಗೇರಿಯಲ್ಲಿ ಹೂಗಾರ ಸಮಾಜದ ಸಭೆ

eNEWS LAND Team

ಗುಡಗೇರಿಗೆ ಭೇಟಿ ನೀಡಿದ ಶಾಸಕಿ ಕುಸುಮಾವತಿ

eNEWS LAND Team