27 C
Hubli
ಏಪ್ರಿಲ್ 29, 2024
eNews Land
ಸುದ್ದಿ

ವಿದ್ಯಾರ್ಥಿಗಳು ಜೀವನದ ಅದ್ಭುತ ಯಶಸ್ವಿಗಾಗಿ ಉನ್ನತ ವಿಚಾರ, ಗುರಿ,ಸಾಧನೆಗೈಯಬೇಕು: ಶಾಸಕ ಎನ್.ಎಚ್.ಕೋನರಡ್ಡಿ

ಇಎನ್‌ಎಲ್ ಅಣ್ಣಿಗೇರಿ: ವಿದ್ಯಾರ್ಥಿಗಳು ಜೀವನದಲ್ಲಿ ಸಾಧಿಸುವಛಲ, ದೃಢಸಂಕಲ್ಪ, ಆತ್ಮವಿಶ್ವಾಸ, ಪ್ರಾಮಾಣಿಕ ಪ್ರಯತ್ನ,ಮೈಗೂಡಿಸಿಕೊಂಡು ಅಧ್ಯಾಯನದ ಸಾಧನೆಮಾರ್ಗದಲ್ಲಿ ಮುನ್ನುಗ್ಗಿದರೇ ನಿಶ್ಚಿತಗುರಿ ತಲುಪಲು ಸಾಧ್ಯವೆಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.

ಪಟ್ಟಣದ ಎಂ.ಬಿ.ಹಳ್ಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ ಪ್ರಸಕ್ತ ಶೈಕ್ಷಣಿಕ ಸಾಲಿನ ವಿವಿಧ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೋಡಗೆ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಲ್ಲಿ  ಪ್ರಯತ್ನದ ಹಾದಿಯಲ್ಲಿ ಬರುವ ಸಮಸ್ಯೆಗಳು, ಅಡೆ ತಡೆಗಳನ್ನು ಸವಾಲಾಗಿ ಸ್ವೀಕರಿಸಿ, ಅಧ್ಯಾಯನದಲ್ಲಿ ಮುನ್ನುಗ್ಗುವುದರಲ್ಲಿಯೇ ಸಫಲತೆಯ ಗುಟ್ಟು ಅಡಗಿದೆ ಎಂಬುದನ್ನು ಮನಗಾಣಬೇಕು. ನಿಮ್ಮ ಪರಿಶ್ರಮಕ್ಕೆ ಪ್ರತಿಫಲ, ಗುರಿ ಮುಟ್ಟುವುದು ವಿಳಂಭವಾದರೂ ಪ್ರಯತ್ನ ನಿಲ್ಲ್ಲಿಸದೇ ದಿಟ್ಟ ನಿಲುವು ತಾಳಿದರೇ, ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದನ್ನು ಮರೆಯಬಾರದು. ನಿಮ್ಮ ಪ್ರಯತ್ನದ  ಹಂತದಲ್ಲಿ ಆಕಸ್ಮಿಕ ಸೋಲಿನ ಸಿಹಿ ಕಹಿ ಅನುಭವಗಳು ಕಾರ್ಯಸಾಧನೆಗೆ ತಡೆ ಒಡ್ಡಿದರೂ ಎದೆಗುಂದದೇ, ಸಂಯಮ, ತಾಳ್ಮೆಯನ್ನು ಕಳೆದುಕೊಳ್ಳದೇ, ಆತ್ಮಾವಲೋಕನ ಮಾಡಿಕೊಂಡು ಕೈಗೆತ್ತಿಕೊಂಡ ಪ್ರಯತ್ನದ ಸಾಧನೆ ಗುರಿ ಕೈಬಿಡಬಾರದು.ನಿಮ್ಮ ಗುರಿ ತಲುಪುವ ಪ್ರಯತ್ನ, ಪರಿಶ್ರಮ, ಮಾರ್ಗದುದ್ದಕ್ಕೂ ಇರಬೇಕೆಂದು ಸಲುಹೆ ನೀಡಿದರು.

ಪ್ರಾಚಾರ್ಯ ಡಾ.ಮೋತಿಲಾಲ ರಾಠೋಡ ಕಾಲೇಜಿನಿಂದ ಇತ್ತೀಚಿಗೆ ವರ್ಗಾವಣೆಗೊಂಡ ಅಧ್ಯಾಪಕರನ್ನು ಸನ್ಮಾನಿಸಿ ಮಾತನಾಡಿ, ನವ ಸಮಾಜ ನಿರ್ಮಾಣದಲ್ಲಿ ಇಂದಿನ ಯುವ ಜನಾಂಗದ ಪಾತ್ರ ಪ್ರಮುಖವಾಗಿದೆ. ಯುವಕರು ತಮ್ಮಲ್ಲಿ ಹುದಗಿರುವ ಸುಪ್ತ ಪ್ರತಿಭೆ, ಸಾಮರ್ಥ್ಯ, ಜಾಗೃತೆಗೊಳಿಸಿಕೊಂಡರೇ  ಶಕ್ತಿ ಸಾಮರ್ಥ್ಯ, ಪ್ರತಿಭೆ ಅರಿವು ಮೂಡಿ ಆತ್ಮವಿಶ್ವಾಸ ನಂಬಿಕೆ ಚಿಗುರುತ್ತದೆ. ಆ ನಂಬಿಕೆ ಜೀವನದ ಕಾರ್ಯಶಕ್ತಿ ಕಾರ್ಯಕ್ಷಮತೆಯನ್ನು ಹುರಿದುಂಬಿಸುತ್ತದೆ. ಯಶಸ್ವಿನ ದಾರಿಗೆ ನಂಬಿಕೆಯ ದಾರಿದೀಪ. ವಿಕ್ಷಣೆ, ಅವಲೋಕನ, ಪ್ರಯೋಗ, ಮೂಲಕ ಜ್ಞಾನ ಕಲ್ಪಸಿಕೊಂಡು ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸಿಕೊಂಡು ಪರಿಣಾಮಕಾರಿಯಾಗಿ ಬುದ್ದಿವಂತಿಕೆಯಿ0ದ ಸಮಾಜದಲ್ಲಿ ಸ್ವಸ್ಥ ಸಶಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ನಿಮ್ಮ ಪ್ರಯತ್ನದ ಹಾದಿ ಸುಗಮವಾಗಲು ಸಾಧ್ಯವೆಂದರು.

ಕಲಘಟಗಿ ಸರಕಾರಿ ಪ್ರಥಮ ದರ್ಜೆ ಕಾಲೇಜ ಅಧ್ಯಾಪಕಿ ಸಲ್ಲೇಶ ಬಿ.ಬೆಳಗಾಂ ಮಾತನಾಡಿ ವಿದ್ಯಾರ್ಥಿಗಳು ನಿರಂತರ ಅಧ್ಯಾಯನ, ಕಠಿಣ ಪರಿಶ್ರಮವಹಿಸಿ ಸಾಧನೆಗೈದರೇ ಗುರಿ ಮುಟ್ಟಲು ಸಾಧ್ಯವೆಂದರು.

ಶಿಗ್ಗಾವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ ಅಧ್ಯಾಪಕ ಡಾ.ಎ.ಸಿ.ವಾಲಿ ಮಾತನಾಡಿ, ವಿದ್ಯಾರ್ಥಿಗಳು ಒಡೆದು ಹೋಗುವ ಸಮಾಜವನ್ನು ಕಟ್ಟುವ ಕೆಲಸದಲ್ಲಿ ಹಾಗೂ ಕಂಡ ಕನಸುಗಳನ್ನು ಸಾಕಾರಗೊಳಿಸವಲ್ಲಿ ಜಾತಿ ಭೀತಿಯಿಲ್ಲದ ನಾಡನ್ನು ಕಟ್ಟುವಲ್ಲಿ ತಲ್ಲೀನರಾಗಬೇಕೆಂದರು.

ಕಿತ್ತೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ ಅಧ್ಯಾಪಕಿ ಡಾ.ಸುಜಾತಾ ತಲ್ಲೂರ ಮಾತನಾಡಿ,ಜ್ಞಾನದ ಹಸಿವು ವಿದ್ಯಾರ್ಥಿಗಳಲ್ಲಿ ಜಾಗೃತಗೊಂಡರೇ ಉದಾತ್ತ ಉದ್ದೇಶದೊಂದಿಗೆ ಉನ್ನತ ಅಧ್ಯಾಯನ ಕಡೆಗೆ ಒಲವು ತೋರಬಹುದು.ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಅಧ್ಯಾಯನದೊಂದಿಗೆ ಸಾಧನೆಗೈದರೆ ಯಶಸ್ಸಿನ ಭವಿಷ್ಯದ ಗುರಿ ಮುಟ್ಟಲು ಸಾಧ್ಯವೆಂದರು.

ನರೇಗಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜ ಅಧ್ಯಾಪಕ ಎಸ್.ಎಸ್.ಸೂಡಿ ಮಾತನಾಢಿ ವಿದ್ಯಾರ್ಥಿಗಳು ಗಮನವಿಟ್ಟು ಅಧ್ಯಾಯನ ಕೈಗೊಂಡು ವಿದ್ಯಾರ್ಜನೆ ಮಾಡಿದರೇ ನೀರಿಕ್ಷಿಸಿದ ಉದ್ಯೋಗವನ್ನು ಪಡೆಯಲು ಸಾಧ್ಯವೆಂದರು.

ಪ್ರಾಸ್ತವಿಕವಾಗಿ ಭಾರತಿ ಮಣ್ಣೂರ ಮಾತನಾಡಿದರು. ವಿಜಯಲಕ್ಷ್ಮೀ ಪಾಟೀಲ ಸ್ವಾಗತಕೋರಿದರು. ಕೀರ್ತಿ ಕಳ್ಳೇರ ವಾರ್ಷಿಕ ವರದಿಯನ್ನು ವಾಚಿಸಿದರು. ಡಾ.ಮಹೇಂದ್ರ ದೊಡ್ಡಮನಿ ನಿರೂಪಿಸಿದರು. ಆಕಾಶ ಭದ್ರಾಪೂರ ಸಂಗಡಿಗರು ಪ್ರಾರ್ಥಿಸಿದರು. ಡಾ.ಅಣ್ಣಪ್ಪ ರೊಟ್ಟಿಗವಾಡ ವಂದಿಸಿದರು.    

ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಯೋಜಕಿ ಡಾ.ವಿದ್ಯಾ ಹಡಗಲಿ, ಕ್ರೀಡಾ ವಿಭಾಗ ಗೋರಖನಾಥ ಟಿಲೆ, ಮಲ್ಲಿಕಾರ್ಜುನ ಸುರಕೋಡ, ಕಾಲೇಜ ಪ್ರತಿನಿಧಿ ನಿಂಗನಗೌಡ  ಪಾಟೀಲ, ಕಾಲೇಜ ಪ್ರತಿನಿಧಿ ಭುವನೇಶ್ವರಿ ಹೈಗರ,  ಅಧ್ಯಾಪಕರ ವೃಂದ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ENL Annigeri: MLA N.H. Konardy said that students can achieve their goals only if they have the desire to achieve in life, determination, self-confidence, sincere effort, and unite and advance in the path of achievement of the chapter.

He spoke at the conclusion of various activities of the current academic year and the farewell ceremony of the final year graduate students organized at MB Halli Government First Class College in the town.

Students should be convinced that the secret of success lies in accepting the problems and obstacles as a challenge and forging ahead in the process of creating a bright future. Don’t forget that your hard work will be rewarded, even if reaching the goal is delayed, if you take a firm stand without stopping your efforts, success in life is the key to success. Even if the sweet and bitter experiences of accidental failure at the stage of your effort hinder the achievement, do not lose heart, do not lose restraint and patience, do not give up the goal of the effort undertaken by introspection.

Principal Dr. Motilala Rathoda honored the recently transferred faculty from the college and said that the role of today’s youth is important in building a new society. When the youth awakens the hidden talent, ability, power, talent and awareness, self-confidence and belief will grow. That faith inspires life’s work force performance. A beacon of faith on the way to success. He said that the path of your efforts in building a healthy and empowered society in an effectively intelligent society can be smoothened by improving the educational quality through exploration, observation, experiment, and imagining knowledge.

Kalaghatagi Government First Class College Teacher SalleshaB. Belagam said that students can achieve their goals only if they are persistent and hardworking.

Dr.A.C.Vali, teacher of Shiggavi Government First Class College, said that the students should be absorbed in the work of building a broken society and realizing their dreams in building a nation without fear of caste.

Dr. Sujatha Tallura, teacher of Kittoor Government First Class College, said that if the hunger for knowledge is awakened in the students, they can tend towards the higher chapter with a noble purpose.

Naregala Government First Class College teacher S.S.Sudi Matanadhi said that if the students take the chapter carefully and do their studies, they can get the job they are looking for.

Bharti Mannoor spoke in introduction. Vijayalakshmi Patila welcomed. Kirti Kakhera read the annual report. Narrated by Dr. Mahendra Doddamani. Akasha Bhadrapura’s companions prayed. Dr. Annappa Rottigavad saluted.

On this occasion IQAC Coordinator Dr. Vidya Hadagali, Sports Department Gorakhnath Tile, Mallikarjuna Surakoda, College Representative Ninganagowda Patil, College Representative Bhuvaneshwari Haigara, faculty, staff and students were present.

Related posts

ನನ್ನ ತಾಯಿಯೇ ನನಗೆ ಹೀರೋ : ಸಂತೋಷ ಲಾಡ್

eNEWS LAND Team

ಧಾರವಾಡಕ್ಕೂ ಒಕ್ಕರಿಸಿದ ಒಮಿಕ್ರಾನ್ ! ಡಿಸಿಯೇನೋ ಯಾರೂ ಹೆದ್ರಬೇಡಿ ಅಂತಿದಾರೆ..! ಆದ್ರೆ??

eNewsLand Team

ರಂಗಿನಾಟದಲ್ಲಿ ಮಿಂದೆದ್ದ ವಾಣಿಜ್ಯ ನಗರಿ ಹುಬ್ಬಳ್ಳಿ ಸಂಭ್ರಮ ಹೇಗಿತ್ತು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಗ್ರೌಂಡ್ ರಿಪೋರ್ಟ್

eNEWS LAND Team