25.9 C
Hubli
ಏಪ್ರಿಲ್ 29, 2024
eNews Land
ಸುದ್ದಿ

ಅಣ್ಣಿಗೇರಿ ಪುರಸಭೆಯ ಸಾಮಾನ್ಯ ಸಭೆ

ಇದನ್ನು ಓದಿ:ಶಕ್ತಿ ಯೋಜನೆಯಿಂದ ನಿಶಕ್ತಿಯಾಗಿ ಕ್ಷೀಣಿಸುತ್ತಿದೆ ವಿದ್ಯಾಭ್ಯಾಸ!!!

ಇಎನ್‌ಎಲ್‌ ಅಣ್ಣಿಗೇರಿ: ಪೌರಕಾರ್ಮಿಕರ ಆರೋಗ್ಯ ತಪಾಸಣೆ ಕುರಿತು ಕಾಯ್ದಿರಿಸಿದ ಮೊತ್ತದಲ್ಲಿ ಉಳಿತಾಯ ಕ್ರಿಯಾ ಯೋಜನೆ ಸಲ್ಲಿಸುವ ಕುರಿತು, ಎಸ್.ಬಿ.ಎಮ್-2 ಉಳಿತಾಯ ಮೊತ್ತದಲ್ಲಿ ಎಸ್.ಡಬ್ಲೂ.ಎಮ್. ಸೈಟ್‌ಗೆ ಅವಶ್ಯಕ ಇರುವ ಬೇಲಿಂಗ್ ಮಷಿನ್ ಹಾಗೂ ಮನೆ ಮನೆ ಕಸ ಸಂಗ್ರಹಣೆಗಾಗಿ ದ್ವಿಮಾದರಿಯ ಡಸ್ಟಬಿನ್ ಖರೀದಿಸಲು, ಚರ್ಚಿಸಿ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.

ಇದನ್ನು ಓದಿ:ವಿದ್ಯಾರ್ಥಿಗಳ ಯಶಸ್ವಿಗೆ ಪ್ರೋತ್ಸಾಹ ಅವಶ್ಯಕ: ಡಾ.ಮೋಹನ ಅಣ್ಣಿಗೇರಿ

ಪಟ್ಟಣದ ಪುರಸಭೆ ಸಭಾಭವನದಲ್ಲಿ ಪುರಸಭೆ ಅಧ್ಯಕ್ಷರ ನಿರ್ದೇಶನ ಮೇರೆಗೆ ಹಮ್ಮಿಕೊಂಡ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯಕೈಗೊಂಡರು.
ಖಾಲಿ ನಿವೇಶನಗಳನ್ನು ಪುರಸಭೆಯಿಂದ ಸ್ವಚ್ಛಗೊಳಿಸಿ ಬೋಜಾ ದಾಖಲಿಸುವ ಬಗ್ಗೆ, ಜುಲೈ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಸಾರ್ವಜನಕರಿಗೆ ಮುಕ್ತವಾಗಿ ಓಡಾಡಲು ಅನೂಕಲವಾಗುವ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಕುರಿತು,ಚರ್ಚಿಸಿ ಸದಸ್ಯರು ಠರಾವುಗೆ ಮಂಜೂರ ಸೂಚಿಸಿದರು.

ಇದನ್ನು ಓದಿ:ಜನಪದ ಕಲೆ ಆಧುನಿಕ ಕಲೆಗಳಿಗೆ ತಾಯಿಬೇರು: ವಿಜಯಶ್ರೀ ಹಿರೇಮಠ
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಕಟ್ಟಿಗೆ ಕಲ್ಲುಗಳನ್ನು ಹಾಕಿ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದರಿoದ ತೆರವುಗೊಳಿಸುವ ಕುರಿತು ಸೂಕ್ತ ಕ್ರಮ ಜರುಗಿಸಲು ಹಾಗೂ ಹಿಂದಿನ ಸಭೆಯ ಠರಾವುಗಳನ್ನು ಓದಿ ದೃಢಿಕರಿಸುವದು ಬಗ್ಗೆ ಚರ್ಚಿಸಿ ಸರ್ವ ಸದಸ್ಯರು ಸಮ್ಮತಿ ಸೂಚಿಸುವ ಮೂಲಕ ತಿರ್ಮಾನಿಸಿದರು.
ಮೇ-2023 ರಿಂದ ಜುಲೈ-2023 ರ ಮಾಹೆಯ ಜಮಾ ಖರ್ಚುಗಳನ್ನು ಪರಿಶೀಲಿಸಿ ಮಂಜೂರಾತಿ ನೀಡಲು, ಅಣ್ಣಿಗೇರಿ ಪಟ್ಟಣದ 23 ವಾರ್ಡಗಳಲ್ಲಿಯ ಮುಖ್ಯ ರಸ್ತೆಗಳಿಗೆ ನಾಮ ಫಲಕ ಅಳವಡಿಸುವ ಕುರಿತು, ವಾರ್ಡ-13 ಸದಸ್ಯರು ತಮ್ಮ ವಾರ್ಡನಲ್ಲಿ ಅಂಗವಾಡಿ ನಿರ್ಮಿಸಲು ಸಲ್ಲಿಸಿದ ಅರ್ಜಿಯನ್ನು ಪರೀಗಣಿಸಿ ಕ್ರಮಕೈಗೊಳ್ಳಲಾಯಿತು.
ಸರಕಾರಿ ದವಾಖಾನೆ ಆವರಣ ಹಾಗೂ ಕಲಬಂಡೇಶ್ವರ ದೇವಸ್ಥಾನದ ಹತ್ತಿರದ ಜಾಗೆಯನ್ನು ಸ್ವಚ್ಚಗೊಳಿಸಲು ಸದಸ್ಯರು ಸಮ್ಮತಿಸುವ ಮೂಲಕ ಇನ್ನುಳಿದಂತೆ ಅಧ್ಯಕ್ಷರ ಅಪ್ಪಣೆ ಮೇರೆಗೆ ಬರುವ ವಿಷಯಗಳ ಬಗ್ಗೆ ಕ್ರಮಕೈಗೊಳ್ಳಲು ಸೂಚಿಸಿದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ವಾಯ್.ಜಿ.ಗದ್ದಿಗೌಡರ, ಪುರಸಭೆ ಅಧ್ಯಕ್ಷೆ ರಜೀಯಾಬೇಗಂ.ರೊಕ್ಕದಕಟ್ಟಿ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜಕರಡ್ಡಿ, ಸ್ಥಾಯಿ ಸಮಿತಿ ಚೇರಮನ್ ಅಮೃತೇಶ ಬಸಪ್ಪ ಮೀಶಿ, ಸರ್ವ ಸದಸ್ಯರು, ಸಿಬ್ಬಂದಿ ವರ್ಗ, ಉಪಸ್ಥಿತರಿದ್ದರು.

ಇದನ್ನು ಓದಿ:ಪೌರಸೇವಾ ನೌಕರರ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

Related posts

ಪ್ರಾಕೃತಿಕ ವಿಕೋಪ; ಕರ್ನಾಟಕದಲ್ಲೇ ಹೆಚ್ಚು ಬೆಳೆ ಹಾನಿ!

eNewsLand Team

ಶಲವಡಿ ಗ್ರಾಮ ಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ

eNEWS LAND Team

ಸಿಎಂ ಬೊಮ್ಮಾಯಿ ಕೋವಿಡ್ ಸಭೆಯಲ್ಲಿ ಏನೇನಾಯ್ತು?

eNEWS LAND Team