24.3 C
Hubli
ಮೇ 26, 2024
eNews Land
ಸುದ್ದಿ

ಶಲವಡಿ ಗ್ರಾಮ ಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ

ವಿಶೇಷ ವರದಿ: ಸಿ.ಎ.ಹೂಗಾರ

ಇಎನ್‌ಎಲ್ ಅಣ್ಣಿಗೇರಿ: ಹಳ್ಳಿಗಳ ಉದ್ದಾರವೇ ದೇಶದ ಉದ್ದಾರವೆಂದು  ಮಹಾತ್ಮಗಾಂಧೀಜಿಯವರ ಮಹತ್ವಕಾಂಕ್ಷೆಯ ಕನಸು ಸಾಕಾರಗೊಳಿಸುವಲ್ಲಿ ಪ್ರಸ್ತುತ ಸಮಾಜದಲ್ಲಿ ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಪಂ ಅಭಿವೃದ್ಧಿ ಪಥದಲ್ಲಿ ದಿಟ್ಟ ನಿಲುವು ಸಂಕಲ್ಪ ತಾಳಿ ಸಾಧನೆಗೈದು ಜನಪರ ಮೂಲಸೌಲಭ್ಯಗಳನ್ನು ಕಲ್ಪಿಸಿ ಪ್ರಗತಿಯಲ್ಲಿ ಸಾಗುತಿದೆ. ಆ ಹಿನ್ನಲೆಯಲ್ಲಿ ತಾಲೂಕಿನ ಶಲವಡಿ ಗ್ರಾ.ಮ ಪಂಚಾಯತಿಗೆ ಪ್ರಸಕ್ತ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಥಮ ಬಾರಿಗೆ ಲಭಿಸಿದ್ದು, ಗ್ರಾಮಸ್ಥರು, ಅಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರಿಗೆ ಸಂತಸ ತಂದಿದೆ.
ಗ್ರಾಮದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು
ಶಲವಡಿ ಗ್ರಾಮದ ಜನಸಂಖ್ಯೆ ಅಂದಾಜು 7500 ಇದ್ದು,

ಈ ಕ್ಷೇತ್ರ ಹೆಚ್ಚಿನ ಪ್ರಮಾಣದಲ್ಲಿ ಜನಸಂಖ್ಯೆ ಅನುಗುಣವಾಗಿ ಬೆಳೆಯುತ್ತಾ ಸಾಗಿದೆ. ಸಂಪೂರ್ಣವಾಗಿ ಗ್ರಾಮದಲ್ಲಿ ಶೇ 100ರಷ್ಟು ಒಳಚರಂಡಿ ಯೋಜನೆ ಅನುಷ್ಠಾನಗೊಳಿಸಿದೆ. ಹಾಗೂ ಗ್ರಾಮದಲ್ಲಿ ಎಲ್.ಇ.ಡಿ, ಲೈಟ್ ವ್ಯವಸ್ಥೆ ಕಲ್ಪಸಿದೆ. ನರೇಗಾ ಯೋಜನೆಯಡಿ 2022-23ರಲ್ಲಿ 20180 ಮಾನವ ದಿನಗಳ ಸೃಜನೆ, ಡಿಜಿಟೆಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಸ್ಥಾಪನೆ, ಸ್ವಚ್ಛ ಭಾರತ ಮಿಷನ್ ಯೋಜನೆಯಡಿ 12 ಲಕ್ಷ ರೂಗಳಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಿದೆ. 1ಕೋಟಿ ರೂಗಳ ವೆಚ್ಚದಲ್ಲಿ ಮಲತಾಜ್ಯ ನಿರ್ವಹಣಾ ಘಟಕ ಮಂಜೂರಿ ಹಂತದಲ್ಲಿದೆ. ಮಹಿಳಾ ಸ್ತಿçಶಕ್ತಿ ಸಂಘಗಳ ಬಲವರ್ಧನೆಗೆ 16 ಲಕ್ಷ ರೂಗಳ ವೆಚ್ಚದಲ್ಲಿ (ಸಂಜೀವಿನಿ ಮಹಿಳಾ ಒಕ್ಕೂಟಕ್ಕೆ )ಎನ್.ಆರ್.ಎಮ್.ಎಲ್ ಭವನ ನಿರ್ಮಾಣವಾಗಿದೆ. ಗ್ರಾ.ಪಂ ಕಟ್ಟಡದ ಮೇಲೆ ಸೋಲಾರ ರೂಪ್ ಟಾಫ್ ಹಾಕಿಸಲಾಗಿದೆ. ಪ.ಜಾ/ಪ.ಪಂ. ದವರಿಗೆ ಎಲ್ಲಾ ಯೋಜನೆಗಳಲ್ಲಿ ಕಾಮಗಾರಿ ಕೈಗೊಂಡಿದೆ. ರೈತರ ಜಮೀನಲ್ಲಿ ಬದುವು ನಿರ್ಮಿಸಿ ನೀರು ತಡೆದು ಅಂತರ್ಜಲ ಹೆಚ್ಚಿಸಿದೆ.

ಶಲವಡಿ ಗ್ರಾಮದಲ್ಲಿ ಪ್ರಾಚೀನ ಕಾವ್ಯ, ಪುರಾಣಗಳ ಹಸ್ತಪ್ರತಿಗಳನ್ನು ಶಾನಭೋಗರ ಮಠದಲ್ಲಿ ಚೆನ್ನವೀರಯ್ಯನವರು 1912 ರಲ್ಲಿ 63 ಪುರಾತನರ ಪುರಾಣ ಪ್ರತಿಮಾಡಿಸಿ ಸಂರಕ್ಷಿಸಿದ್ದಾರೆ. ಪುರಾತನ ವೀರಭದ್ರೇಶ್ವರ ದೇವಸ್ಥಾನ ಭಕ್ತರಿಗೆ ಶಕ್ತಿ ಕೇಂದ್ರವಾಗಿದೆ.
ಶಲವಡಿ ಗ್ರಾಮದಲ್ಲಿ 4 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಹೈಸ್ಕೂಲ್, ಪದವಿ ಪೂರ್ವ ಕಾಲೇಜ. 8 ಅಂಗವಾಡಿ ಕೇಂದ್ರಗಳಿವೆ. 24/7 ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದೆ. ಮಲಪ್ರಭಾ ಬಲದಂಡೆ ಕಾಲುವೆ ನೀರನ್ನು ಬೃಹತ್ ಕೆರೆಯಲ್ಲಿ ಸಂಗ್ರಹಿಸಿ ಪ್ರತಿಎರಡು ದಿನಕ್ಕೊಮ್ಮೆ ಗ್ರಾಮಗಳಲ್ಲಿ ಗ್ರಾ.ಪಂ ಕುಡಿಯುವ ನೀರು ಪೂರೈಸುತಿದೆ. ಗ್ರಾಮಸ್ಥರ ವಿವಿಧ ವರ್ಗದವರ ಶವಸಂಸ್ಕಾರಕ್ಕೆ ಸ್ಮಶಾನವಿದೆ. ಗ್ರಾಮದ ಪ್ರತಿ ಮನೆಗಳಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಸಿದೆ.ಗ್ರಾಮದ ಪ್ರಮುಖ ರಸ್ತೆಗಳನ್ನು ಸಿ.ಸಿ ರೋಡ ನಿರ್ಮಾಣಗೊಳಿಸಿದೆ.

ಇನ್ನು ಹೊಸದಾಗಿ 18 ಎಕರೆ ಜಮೀನು ಗ್ರಾಪಂ ವತಿಯಿಂದ ಖರೀದಿಸಿ ಲೇವಟ್ ಮಾಡಿದ ಪ್ಲಾಟುಗಳಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸಿ  ಬಡವರಿಗೆ ವಿತರಿಸಲು ಪ್ರಸ್ತಾವನೆಗೆ ಕ್ರಮಕೈಗೊಳ್ಳುವಲ್ಲಿ ಚಿಂತನೆ ನಡೆದಿದೆ. ರಸ್ತೆ ಕುಡಿಯುವ ನೀರು, ಗಟಾರು, ಒಳಚರಂಡಿ, ವ್ಯವಸ್ಥೆ ಹೊಸ ಬಡಾವಣೆಗಳಿಗೆ ಕಲ್ಪಿಸಬೇಕಿದೆ.ಗ್ರಾಮದ ರೈತರ ಹೊಲಗದ್ದೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಸಂರಕ್ಷಣೆಗೆ ಕೃಷಿ ಹೊಂಡಗಳನ್ನು ನಿರ್ಮಾಣಗೊಳಿಸಿದೆ.

ಶಲವಡಿ ಗ್ರಾಮಕ್ಕೆ ಪ್ರಥಮ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಸಿಕ್ಕಿದ್ದು ಸಂತಸ ತಂದಿದೆ. ರಾಜ್ಯದಲ್ಲಿ ಮಾದರಿ ಅಭಿವೃದ್ಧಿ ಗ್ರಾಮವನ್ನಾಗಿ ನಿರ್ಮಿಸಿ, ಜನರು ನಮ್ಮ ಗ್ರಾಮಕ್ಕೆ ಬಂದು ಅಭಿವೃದ್ಧಿ ಕಾರ್ಯಗಳನ್ನು ವಿಕ್ಷಿಸುವ ಮಾದರಿ ಕ್ಷೇತ್ರವನ್ನಾಗಿ ರೂಪಿಸಬೇಕಿದೆ. ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆಗಳ ಅನುದಾನ ಸದ್ಭಳಿಸಿಕೊಂಡು ಗ್ರಾಮಕ್ಕೆ ಮೂಲಸೌಲಭ್ಯಗಳು ಅಗತ್ಯವಿರುವ ಅಭಿವೃದ್ಧಿಕಾರ್ಯಗಳನ್ನು ಮಾಡುತ್ತೇವೆ. ಧಾ.ಜಿ.ಪಂಚಾಯತ ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಯೋಜನೆಯಡಿ ವಿವಿಧ ಘಟಕಾಂಶಗಳನ್ನು ಉತ್ತಮವಾಗಿ ಅನುಷ್ಠಾ£ಗೊಳಿಸಿದ್ದಕ್ಕೆ  “ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-೨೦೨೩” ಪ್ರಶಸ್ತಿ ತಾಲೂಕ ಮಟ್ಟದ ಸಮೀಕ್ಷೆಯಲ್ಲಿ ಧಾ.ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮ.ಪಂಚಾಯತ ಹೆಚ್ಚು ಅಂಕ ಪಡೆದಿದ್ದಕ್ಕೆ ಜಿಲ್ಲಾ ಮಟ್ಟಕ್ಕೆ ಪ್ರಶಸ್ತಿ ಸಮೇತ ಅರ್ಹತೆ ಪಡೆದಿದೆ.
ಗುರುನಾಥ ಜೋಗಿ, ಶಲವಡಿ ಗ್ರಾಪಂ ಪಿಡಿಓ

ಶಲವಡಿ ಗ್ರಾಮ ಪಂಚಾಯತಿ ಆಡಳಿತದಲ್ಲಿ ನಾನು ಅಧ್ಯಕ್ಷರಿರುವ ವೇಳೆ ಜಿಪಂ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಪ್ರಶಸ್ತಿ, ಪ್ರಥಮ ಬಾರಿಗೆ ಶಲವಡಿ ಗ್ರಾಪಂ ಇತಿಹಾಸದಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಲಭಿಸಿದ್ದು ಹೆಚ್ಚು ಸಂತಸ. ಅಣ್ಣಿಗೇರಿ ತಾಲೂಕಿಗೆ ಶಲವಡಿ ಗ್ರಾಪಂ ಅಭಿವ್ರದ್ದಿಯಲ್ಲಿ ಸಾಧನೆಗೈದು ಹೆಗ್ಗಳಿಕೆಗೆ ಪಾತ್ರವಾಗಿದೆ. ಗ್ರಾಮದ ಮೂಲಸೌಲಭ್ಯಗಳನ್ನು ಕಲ್ಪಿಸುವಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದು, ಗ್ರಾಮದ ಇನ್ನುಳಿದ ಪ್ರದೇಶಗಳಲ್ಲಿ ಗಟಾರು, ಒಳಚರಂಡಿ, ರಸ್ತೆ ನಿರ್ಮಾಣ ಅಭಿವೃದ್ದಿಗೆ ಚಾಲನೆ ನೀಡುತ್ತೇವೆ.ಜನಪರಸೇವೆ ಗ್ರಾಮದ ಅಭಿವೃದ್ದಿ ಕನಸು ಸಾಕಾರಗೊಳಿಸುವಲ್ಲಿ ಪ್ರಮಾಣಿಕಸೇವೆಗೈದು ರಾಜ್ಯ ರಾಷ್ಟç ಮಟ್ಟದ ಪ್ರಶಸ್ತಿ ಪಡೆಯುವಲ್ಲಿ ಕಂಕಣ ಬದ್ದರಾಗಿದ್ದೇವೆ.
ಸುವರ್ಣಾ ಮಲ್ಲಯ್ಯ ಮಠಪತಿ, ಶಲವಡಿ ಗ್ರಾಪಂ ಅಧ್ಯಕ್ಷೆ

Related posts

ಕಲಘಟಗಿ-ಅಳ್ನಾವರ ಶೀಘ್ರ ಬರಗಾಲ ಪ್ರದೇಶ!!!: ಎಸ್.ಆರ್.ಪಾಟೀಲ್

eNEWS LAND Team

ಮಳೆ ಲೆಕ್ಕಿಸದೇ ಕೇಂದ್ರ ತಂಡ ಭೇಟಿ: ಚೆನ್ನಾಗಿ ಕೆಲಸ ಮಾಡಿದ್ದೀರಿ: ಅಂಕಿತ್ ಮಿಶ್ರಾ

eNEWS LAND Team

ದ.ರಾ.ಬೇಂದ್ರೆ ಅಜ್ಜನ ಜನುಮ ದಿನ:ಅಜ್ಜನ ಬಗ್ಗೆ ತಿಳಿದುಕೊಳ್ಳಿ.

eNEWS LAND Team