29 C
Hubli
ಏಪ್ರಿಲ್ 26, 2024
eNews Land
ಸುದ್ದಿ

ಇಂದಿನಿಂದ ಜಿಲ್ಲಾದ್ಯಂತ 15 ರಿಂದ 18 ವರ್ಷದೊಳಗಿನವರಿಗೆ ಕೋವಿಡ್-19 ಲಸಿಕೆ

ಇಎನ್ಎಲ್ ಹಾವೇರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಅನ್ವಯ 15 ರಿಂದ 18 ವರ್ಷದ ಅರ್ಹ ಫಲಾನುಭವಿಗಳಿಗೆ ಕೋವಿಡ್-19 ಲಸಿಕಾಕರಣವನ್ನು ಜಿಲ್ಲೆಯಾದ್ಯಂತ ಜನವರಿ 03 ರಿಂದ ಹಮ್ಮಿಕೊಳ್ಳಲಾಗಿದೆ. ಪ್ರತಿ ದಿನ ಆಯ್ದ ಪ್ರೌಢ ಶಾಲೆ ಮತ್ತು ಪಿ.ಯು ಕಾಲೇಜುಗಳಲ್ಲಿ ನಿಗದಿತ ವೇಳಾಪಟ್ಟಿಯನ್ವಯ ಲಸಿಕಾಕರಣ ಜರುಗಲಿದೆ. ಸಾರ್ವಜನಿಕರು ಈ ಲಸಿಕಾಕರಣದ ಸದುಪಯೋಗ ಪಡೆದುಕೊಳ್ಳಬೆಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ ಅವರು ತಿಳಿಸಿದ್ದಾರೆ.
15 ರಿಂದ 18 ವರ್ಷ ವಯಸ್ಸಿನ ಮಕ್ಕಳ ಪಾಲಕರು ಸದರಿ ಕೋವಿಡ್-19 ಲಸಿಕೆಯನ್ನು ತಮ್ಮ ತಮ್ಮ ಮಕ್ಕಳಿಗೆ ಮರೆಯದೇ ಲಸಿಕಾಕರಣ ನಡೆಯುವ ಸ್ಥಳಕ್ಕೆ ತೆರಳಿ ಲಸಿಕೆ ನೀಡುವಲ್ಲಿ ಜಾಗೃತರಾಗಬೇಕು. ಕೋವಿಡ್-19 3ನೇ ಅಲೆಯನ್ನು ತಡೆಗಟ್ಟುವಲ್ಲಿ ಕೋವಿಡ್-19 ಲಸಿಕೆಯು ಪ್ರಮುಖವಾದ ಪಾತ್ರವನ್ನು ವಹಿಸಲಿರುವದರಿಂದ 15 ವರ್ಷ ಮೇಲ್ಪಟ್ಟ ಎಲ್ಲ ಅರ್ಹ ಫಲಾನುಭವಿಗಳು, 1 ನೇ ಡೋಸ್ ಪಡೆಯದೇ ಇರುವವರು ಆಧಾರ್ ಕಾರ್ಡ್, ಶಾಲಾ ಗುರುತಿನ ಚೀಟಿಯನ್ನು ಇದರಲ್ಲಿ ಯಾವುದಾದರೊಂದು ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗಿ ತಮ್ಮ ತಮ್ಮ ತಾಲೂಕಿನ ನಿಗದಿತ ಆಯ್ದ ಲಸಿಕಾ ಕೇಂದ್ರಗಳಲ್ಲಿ ಲಸಿಕೆಯನ್ನು ಪಡೆದುಕೊಳ್ಳಲು ಕೋರಲಾಗಿದೆ.
ಕೋವಿಡ್-19 ಲಸಿಕೆಯನ್ನು ಪಡೆಯದೇ ಇರುವ ತಮ್ಮ ನೆರೆಹೊರೆಯವರನ್ನೂ ಸಹ ಲಸಿಕಾಕರಣಕ್ಕೆ ಮನವೊಲಿಸಿ ಲಸಿಕೆಯನ್ನು ಪಡೆಯುವಂತೆ ಹಾವೇರಿ ಜಿಲ್ಲೆಯ ಎಲ್ಲ ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯ ಹಾಗೂ ಜಿಲ್ಲಾಡಳಿತದ ಪರವಾಗಿ ವಿನಂತಿಸಿಕೊಳ್ಳಲಾಗಿದೆ.

ಮಕ್ಕಳ ವಿವರ: ಜಿಲ್ಲೆಯಲ್ಲಿ 15 ರಿಂದ 18 ವರ್ಷದೊಳಗಿನ 9ನೇ ತರಗತಿಯ 24054, 10ನೇ ತರಗತಿಯ 25016 ಹಾಗೂ ಪಿಯು.ಸಿ.ಯ 28607 ಸೇರಿ 77677ಮಕ್ಕಳನ್ನು ಗುರುತಿಸಲಾಗಿದೆ.

ಬ್ಯಾಡಗಿ ತಾಲೂಕಿನಲ್ಲಿ 9ನೇ ತರಗತಿಯ 2,150, 10ನೇ ತರಗತಿಯ 2,265 ಹಾಗೂ ಪಿಯುಸಿಯ 2,387, ಹಾನಗಲ್ ತಾಲೂಕಿನಲ್ಲಿ 9ನೇ ತರಗತಿಯ 3,787, 10ನೇ ತರಗತಿಯ 4,018 ಹಾಗೂ ಪಿಯುಸಿಯ 4,307, ಹಾವೇರಿ ತಾಲೂಕಿನಲ್ಲಿ 9ನೇ ತರಗತಿಯ 4,463, 10ನೇ ತರಗತಿಯ 4,368 ಹಾಗೂ ಪಿಯುಸಿಯ 7,001, ಹಿರೇಕೆರೂರು ತಾಲೂಕಿನಲ್ಲಿ 9ನೇ ತರಗತಿಯ 2,958, 10ನೇ ತರಗತಿಯ 3,420 ಹಾಗೂ ಪಿಯುಸಿಯ 6,083, ಸವಣೂರ ತಾಲೂಕಿನಲ್ಲಿ 9ನೇ ತರಗತಿಯ 2,413, 10ನೇ ತರಗತಿಯ 2,396 ಹಾಗೂ ಪಿಯುಸಿಯ 1,486 ಹಾಗೂ ಶಿಗ್ಗಾಂವ ತಾಲೂಕಿನಲ್ಲಿ 9ನೇ ತರಗತಿಯ 2,962, 10ನೇ ತರಗತಿಯ 3,210 ಹಾಗೂ ಪಿಯುಸಿಯ 2,879 ಮಕ್ಕಳನ್ನು ಗುರುತಿಸಲಾಗಿದೆ.

Related posts

ಅಣ್ಣಿಗೇರಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಪದಸ್ವೀಕಾರ ನಾಳೆ

eNEWS LAND Team

ಭೂಕಂಪ; ತಾಲಿಬಾನ್ ಅಫ್ಘಾನಿಸ್ತಾನ ಸ್ಮಶಾನ, ತುತ್ತು ಅನ್ನಕ್ಕೂ ತತ್ವಾರ!!

eNewsLand Team

ಸರಿಯಾದ ಮಾರ್ಗದಲ್ಲಿ ನಡೆಯೋದು ಯೋಗ: ವಚನಾನಂದಶ್ರೀ

eNEWS LAND Team