27 C
Hubli
ಏಪ್ರಿಲ್ 20, 2024
eNews Land
ಸುದ್ದಿ

ಕೆಎಸ್’ನ ಸಾಹಿತ್ಯ ಪ್ರಶಸ್ತಿ,, ಕಾವ್ಯಗಾಯನ ಪ್ರಶಸ್ತಿ ಪ್ರಕಟ

ಇಎನ್ಎಲ್ ಬೆಂಗಳೂರು

ಕರ್ನಾಟಕ ಸರ್ಕಾರದ ಕೆಎಸ್ ನರಸಿಂಹ ಸ್ವಾಮಿ ಟ್ರಸ್ಟ್ ವತಿಯಿಂದ ನೀಡಲಾಗುವ ಕೆಎಸ್ ನ ಸಾಹಿತ್ಯ ಹಾಗೂ ಕಾವ್ಯಗಾಯನ ಪ್ರಶಸ್ತಿ ಯನ್ನು ಪ್ರಕಟಿಸಲಾಗಿದ್ದು, 2021-22 ನೇ ಹಾಗೂ 2022-23 ನೇ ಸಾಲಿನ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಶ್ರೀಮತಿ ಸವಿತಾ ನಾಗಭೂಷಣ, ಹಿರಿಯ ಸಾಹಿತಿ, ಪತ್ರಕರ್ತ ಶ್ರೀ ಸರಜೂ ಕಾಟ್ಕರ್, ಹಿರಿಯ ಗಾಯಕರಾದ ಶ್ರೀಮತಿ ಎಂ ಕೆ ಜಯಶ್ರೀ ಹಾಗೂ ಗರ್ತಿಕೆರೆ ರಾಘಣ್ಣ ಅವರಿಗೆ ನೀಡಲಾಗುತ್ತದೆ,ದಿನಾಂಕ 05/01/2023 ರ ಗುರುವಾರ ಸಂಜೆ 5.00 ಗಂಟೆಗೆ ಜ್ಯೋತಿ ಪುರಾಣಿಕ್,ಡಾ ಕಿಕ್ಕೇರಿ ಕೃಷ್ಣಮೂರ್ತಿ,ಶ್ರೀನಿವಾಸಉಡುಪಜೋಗಿಸುನಿತಾ ,ಡೇವಿಡ್,ವಿದ್ಯಾ ಶಂಕರ್,ಶ್ರೀಧರ್, ಮುಂತಾದ ಕಲಾವಿದರಿಂದ ಕೆಎಸ್ ನರಸಿಂಹ ಸ್ವಾಮಿ ಅವರ ಗೀತಗಾಯನದ ಮೂಲಕ ಪ್ರಾರಂಭವಾಗಲಿದ್ದು, ಕೆಎಸ್ ನ.ಗೀತೆಗಳಿಗೆ ನೃತ್ಯ ಪ್ರದರ್ಶನ ನಡೆಯಲಿದೆ,ಸಮಾರಂಭವನ್ನು ಹಿರಿಯ ಕವಿಗಳಾದ ಶ್ರೀ ಬಿ ಆರ್ ಲಕ್ಷ್ಮಣ ರಾವ್ ಅವರು ಉದ್ಘಾಟನೆ ಮಾಡಲಿದ್ದು,ಪ್ರಶಸ್ತಿ ಪ್ರದಾನವನ್ನು ಮಂಡ್ಯಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ ಗೋಪಾಲಯ್ಯ ಹಾಗೂ ರೇಷ್ಮೆ,ಯುವಜನ ಸಬಲೀಕರಣ ಸಚಿವರಾದ ಶ್ರೀ ಕೆ ಸಿ ನಾರಾಯಣಗೌಡರು ನಡೆಸಿಕೊಡಲಿದ್ದಾರೆ,ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶ ಗೌಡರು,ಹಿರಿಯ ಸಾಹಿತಿಗಳಾದ ಡಾ.ಪ್ರದೀಪ್ ಕುಮಾರ್ ಹೆಬ್ರಿ,ಪ್ರೊ.ಜಿ ಟಿ ವೀರಪ್ಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Related posts

ಗ್ರಾಮ ಪಂಚಾಯತಿ ಚುನಾವಣೆ ಡಿ.27 ರಂದು: ಡಿಸಿ ನಿತೇಶ ಪಾಟೀಲ

eNEWS LAND Team

ಅತಿವೃಷ್ಟಿಗಾಗಿ ತುರ್ತು ಸಭೆ : ರೈತ ನೆಮ್ಮದಿಯಿಂದ ಇದ್ದಾಗ ಮಾತ್ರ ನಾವೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ: ಶಾಸಕ ನಿಂಬಣ್ಣವರ

eNEWS LAND Team

ಡಿ.6ಕ್ಕೆ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮನ

eNEWS LAND Team