26 C
Hubli
ಏಪ್ರಿಲ್ 30, 2024
eNews Land
ಸುದ್ದಿ

ಹುಬ್ಬಳ್ಳಿ-ಧಾರವಾಡ ನಗರ-ಉಪನಗರ ಸಾರಿಗೆಗಳಲ್ಲಿ ನಗದು ರಹಿತ ಇ-ಪರ್ಸ ಸ್ಟಾರ್ಟ ಕಾರ್ಡ ಪ್ರಾರಂಭ

ಇಎನ್ಎಲ್ ಹುಬ್ಬಳ್ಳಿ: ಸೆ.24ರಂದು ವಾ.ಕ.ರ.ಸಾ.ಸಂಸ್ಥೆಯ 25ನೇ ಸಂಸ್ಥಾಪನೊತ್ಸವದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವರು ಹುಬ್ಬಳ್ಳಿ-ಧಾರವಾಡದಲ್ಲಿ ನಗರ & ಉಪನಗರ ಸಾರಿಗೆಗಳಲ್ಲಿ ನಗದು ರಹಿತ ಇ-ಪರ್ಸ ಸ್ಟಾರ್ಟಕಾರ್ಡಗೆ ಚಾಲನೆ ನೀಡಿರುತ್ತಾರೆ.

ಈ ವ್ಯವಸ್ಥೆಯಲ್ಲಿ ಸಾರ್ವಜನಿಕ ಪ್ರಯಾಣಿಕರು ಹುಬ್ಬಳ್ಳಿ ಧಾರವಾಡ ನಗರ ಸಾರಿಗೆ ವಿಭಾಗದ ವ್ಯಾಪ್ತಿಯ ಹುಬ್ಬಳ್ಳಿ ನಗರ ಉಪನಗರ ಸಾರಿಗೆ, ಧಾರವಾಡ ಹೊಸ ಬಸ್‌ ನಿಲ್ದಾಣ & ಬಿ.ಆರ್.ಟಿ.ಎಸ್ ನಿಲ್ದಾಣ ಹಾಗೂ ಎಲ್ಲಾ ಪಾಸ್ ಕೌಂಟರಗಳಲ್ಲಿ ವಿತರಿಸಲಾಗುವ ಇ-ಪರ್ಸ ಸ್ಮಾರ್ಟಕಾರ್ಡಗಳನ್ನು ಪಡೆದು ಅದರಲ್ಲಿ Top Up ಮಾಡಿದ ಮೊತ್ತಕ್ಕೆ 10% ಬೋನಸ್ ದೊರೆಯುತ್ತದೆ, ಸದರಿ ಕಾರ್ಡನ್ನು ಉಪಯೋಗಿಸಿ ಈಗಾಗಲೇ HDBRTS ನಲ್ಲಿ Tap in- Tap out ಮಾಡಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಇನ್ನು ಮುಂದೆ ಹುಬ್ಬಳ್ಳಿ-ಧಾರವಾಡ ನಗರ & ಉಪನಗರ ಸಾರಿಗೆಗಳಲ್ಲಿಯೂ ನಗದು ಪಾವತಿಸದೇ ಇದೇ ಕಾರ್ಡಿನಿಂದ ಟಿಕೇಟ್ ಪಡೆದು ಪ್ರಯಾಣಿಸಬಹುದಾಗಿದೆ. ಈ ರೀತಿ ಪ್ರಯಾಣಿಸಿದಾಗ ಪ್ರತಿ ನಗರ-ಉಪನಗರ- HDBRTS ಸಾರಿಗೆ ಸೇವೆಯನ್ನು 2 ಘಂಟೆಯ ಒಳಗೆ ಬದಲಾವಣೆ ಮಾಡಿ ಪ್ರಯಾಣಿಸುವುದರಿಂದ ಪ್ರಯಾಣದ ಹಾಸಲಿಗೆ 10% ರಿಯಾಯ್ತಿ ದೊರೆಯುತ್ತದೆ.

ಹುಬ್ಬಳ್ಳಿ-ಧಾರವಾಡ ನಗರ & ಉಪನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಜನಸ್ನೇಹಿಯಾಗಿಸಲು & ನಗದು ರಹಿತ ವ್ಯವಹಾರವನ್ನು ಉತ್ತೇಜಿಸಿ ಚಿಲ್ಲರೆ ತೊಂದರೆ ನಿವಾರಿಸಿ, ಸಮಯವನ್ನು ಉಳಿಸಲು ಮಾಡಿರುವ ಈ ಇ-ಪರ್ಸ ಸ್ಮಾರ್ಟಕಾರ್ಡ ವ್ಯವಸ್ಥೆಯನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗ ಪಡಿಸಿಕೊಳ್ಳಲು ಕೋರಿದೆ. ಈ ಒಂದೇ ಇ-ಪರ್ಸ ಸ್ಮಾರ್ಟಕಾರ್ಡನಿಂದ ಹುಬ್ಬಳ್ಳಿ-ಧಾರವಾಡ ನಗರ, ಉಪನಗರ & HDBRTS ಸಾರಿಗೆಗಳಲ್ಲಿ ಹಿಂದೆಂದಿಗಿಂತಲೂ ಅತೀ ಕಡಿಮೆ ದರದಲ್ಲಿ ಸರಳವಾಗಿ ಪ್ರಯಾಣಿಸಬಹುದಾಗಿದೆ. ವಾಕರಸಾ ಸಂಸ್ಥೆ ಹು-ಧಾ ನಗರ ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟನೆ ತಿಳಿಸಿದ್ದಾರೆ.

 

Related posts

ಧಾರವಾಡದಲ್ಲಿ ಮತ್ತೆರಡು ಒಮಿಕ್ರೋನ್ ದೃಢ ; ಸೋಂಕಿತರಿಗೆ ಹೋಂ ಐಸೋಲೇಷನ್‍ದಲ್ಲಿ ಚಿಕಿತ್ಸೆ

eNEWS LAND Team

ಏಳು ಮಕ್ಕಳ ತಾಯಮ್ಮ ದೇವಿಗೆ ಸಂಕ್ರಾಂತಿ ಸಿಂಗಾರ

eNewsLand Team

RUNNING OF SUMMER SPECIAL TRAIN BETWEEN SECUNDERABAD AND ARSIKERE

eNewsLand Team