23 C
Hubli
ಸೆಪ್ಟೆಂಬರ್ 25, 2023
eNews Land
ಸುದ್ದಿ

ಹುಬ್ಬಳ್ಳಿ : ಹಳೇ ವಿದ್ಯಾರ್ಥಿಗಳಿಂದ ಸ್ಮಶಾನ ಪಕ್ಕದ ಗೋಡೆಗೆ ಸುಣ್ಣ ಬಣ್ಣದ ರಂಗೋಲಿ!

ಇಎನ್ಎಲ್ ಹುಬ್ಬಳ್ಳಿ :
ಹುಬ್ಬಳ್ಳಿ ಹೆಗ್ಗೇರಿ ಸ್ಮಶಾನದ ಪಕ್ಕದ ಗೋಡೆಗೆ  ಸಾರ್ವಜನಿಕರು ತ್ಯಾಜ್ಯ ಎಸೆಯುವುದು ಹಾಗೂ ಗಿಡಗಂಟೆಗಳಿಂದ ಆವೃತವಾಗಿದ್ದ ರಸ್ತೆಗೆ ವಿನೂತನ ನವೀನ್ ಚೈತನ್ಯ ನೀಡುವ ನಿಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ

 ವಲಯ ಕಚೇರಿ 10 ಮತ್ತು 7 ರ ಆರೋಗ್ಯ ನಿರೀಕ್ಷಕ ರಮೇಶ ಸಾಂಬ್ರಾಣಿ ಹಾಗೂ ಪುಂಡಲೀಕಪ್ಪ ಯಾತನೂರ್ ಸಂಪೂರ್ಣ ರಸ್ತೆಯಲ್ಲಿ ಹಾಗೂ ಸ್ಮಶಾನದ ಗೋಡೆ ಪಕ್ಕದಲ್ಲಿ ಸ್ವಚ್ಛತೆಗೆ ಕ್ರಮವಹಿಸಿ, ಶ್ರೀ ಸದ್ಗುರು ಸಿದ್ಧಾರೂಢ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳ ಸಂಘ(ರಿ)ದಿಂದ ಸಮನ್ವಯದೊಂದಿಗೆ ಸ್ಮಶಾನದ ಸುತ್ತಲಿನ ಸಂಪೂರ್ಣ ಗೋಡೆಗೆ ಬಣ್ಣ ಬಳೆದು, ಗೋಡೆ ಮೇಲೆ ಸ್ವಚ್ಛ ಭಾರತದ ಕಲ್ಪನೆಯ ವಿವಿಧ ಜಾಗೃತಿ ಸಂದೇಶಗಳನ್ನು ಬರೆಯಲಾಗಿ ಪುನಃ ಅಲ್ಲಿನ ಸಾರ್ವಜನಿಕರು ಕೂಡಾ ಇದಕ್ಕೆ ಕೈಜೋಡಿಸಿ ಅಲ್ಲಿನ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡಲು ಸುತ್ತಲೂ ರಂಗೋಲಿ ಹಾಕುವುದರೊಂದಿಗೆ ವಿನೂತನ ಪ್ರಯತ್ನ ಮಾಡಲಾಗಿದೆ. ಈ ಸಂಧರ್ಭದಲ್ಲಿ ಪಾಲಿಕೆಯ  ಘನತ್ಯಾಜ್ಯ ವಸ್ತು ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಸಂತೋಷಕುಮಾರ್ ಯರಂಗಳಿ, ವಲಯ ಕಚೇರಿ 7 ರ ಸಹಾಯಕ ಆಯುಕ್ತ ಪಿ ಡಿ ಗಾಳೆಮ್ಮನವರ, 10 ರ ಸಹಾಯಕ ಆಯುಕ್ತ ರಿಯಾಜ್ ಹುಬ್ಬಳ್ಳಿ, ಪರಿಸರ ಅಭಿಯಂತರ ಬಿ ಎಮ್ ಮೆಣಸಿನಕಾಯಿ, ಜ್ಯೋತಿ ಬಿ ಎಚ್, ಶ್ರೀ ಸದ್ಗುರು ಸಿದ್ಧಾರೂಢ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಹಾಗೂ ಆರೋಗ್ಯ ನೀರಿಕ್ಷಕರು ಉಪಸ್ಥಿತರಿದ್ದರು

Related posts

ಮಾರ್ಕೆಟ್ ಓಪನಿಂಗ್ ಬೆಲ್

eNewsLand Team

ಶರಣ ಹೂಗಾರ ಮಾದಯ್ಯ ಜಯಂತಿ ಹಾಗೂ ಹೂಗಾರ ಸಮಾಜದ ಪ್ರಥಮ ಸಮಾವೇಶ

eNEWS LAND Team

ಸಿದ್ದೇಶ್ವರ ಸ್ವಾಮೀಜಿಯವರ ಭೌತಿಕ ಅಗಲಿಕೆಗೆ ಪ್ರದಾನಿ ನರೇಂದ್ರ ಮೋದಿ ಕಂಬನಿ

eNEWS LAND Team