26.4 C
Hubli
ಏಪ್ರಿಲ್ 18, 2024
eNews Land
ಆರೋಗ್ಯ ಸುದ್ದಿ

ನೆನೆಸಿದ ಖರ್ಜೂರ, ಬಾದಾಮಿ ಆರೋಗ್ಯಕ್ಕೆ ತುಂಬಾ ಒಳ್ಳೆದಂತಾರೆ? ಎಷ್ಟು ನಿಜ?

ಇಎನ್ಎಲ್ ಹೆಲ್ತ್ ಟಿಪ್ಸ್: ಒಣ ಬೀಜಗಳು ಆರೋಗ್ಯಕ್ಕೆ ನಿಜಕ್ಕೂ ತುಂಬಾ ಒಳ್ಳೆಯ ಲಾಭ ತಂದು ಕೊಡುತ್ತವೆ. ಅವರಲ್ಲಿಯೂ ನೆನೆಸಿಟ್ಟ ಡ್ರೈ ಫ್ರೂಟ್ಸ್ ಸೇವನೆಯಿಂದ ಸಾಕಷ್ಟು ಆರೋಗ್ಯ ಪ್ರಯೋಜನ ಸಿಗುತ್ತವೆ.

ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಆರೋಗ್ಯಕರವಾದ ನಾವು ಯಾವುದೇ ಆಹಾರ ಪದಾರ್ಥವನ್ನು ಸೇವನೆ ಮಾಡಿದರೆ, ಅದರ ಆರೋಗ್ಯಕರ ಗುಣಲಕ್ಷಣಗಳು ನಮ್ಮ ದೇಹದ ಮೇಲೆ ಸಾಕಷ್ಟು ಪ್ರಭಾವವನ್ನು ಹೊಂದಿರುತ್ತವೆ. ಅದರಂತೆ ಇಡೀ ರಾತ್ರಿ ನೆನೆಹಾಕಿದ ಡ್ರೈ ಫ್ರೂಟ್ಸ್ ಗಳನ್ನು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ, ಸಾಕಷ್ಟು ಕಾಯಿಲೆಗಳನ್ನು ನೀವು ದೂರ ಇರಿಸಬಹುದು.

ಬಾದಾಮಿ ಅತಿ ಆರೋಗ್ಯಕರ ಎಂಬ ಅಂಶದಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇವನ್ನು ಒಣದಾಗಿರುವಂತೆಯೇ ತಿಂದರೆ ಹೆಚ್ಚು ಪ್ರಯೋಜನ ಪಡೆಯಲು ಸಾಧ್ಯವಿಲ್ಲ.
ಇದರಲ್ಲಿರುವ ಹೆಚ್ಚಿನ ಕ್ಯಾಲೋರಿಗಳು, ಒಮೆಗಾ-ವಿಟಮಿನ್ನುಗಳು ನಮ್ಮ ಮೆದುಳನ್ನು ಚುರುಕುಗೊಳಿಸಲು ಬಳಸಲ್ಪಡಬೇಕಾದರೆ ಇವನ್ನು ನೆನೆಸಿಟ್ಟು ಮರುದಿನ ತಿನ್ನಬೇಕು.
ಒಂದು ಸಾಮಾನ್ಯ ಗಾತ್ರದ ಬೋಗುಣಿಯಲ್ಲಿ ಒಂದು ಕಪ್ ಬಾದಾಮಿಗೆ ಎರಡು ಕಪ್ ನಷ್ಟು ಪ್ರಮಾಣದಲ್ಲಿ ನೀರು ಹಾಕಿ.
ಬಾದಾಮಿ ನೀರಿನಲ್ಲಿ ಪೂರ್ಣವಾಗಿ ಮುಳುಗಬೇಕು. ರಾತ್ರಿಯಿಡೀ ಈ ನೀರನ್ನು ತೆರೆದಿಟ್ಟು 6 ರಿಂದ 12 ಗಂಟೆಗಳ ಕಾಲ ಹಾಗೇ ಬಿಡಿ.
ಮರುದಿನ ಬೆಳಗ್ಗೆ ಈ ನೀರನ್ನು ನಿವಾರಿಸಿ ಬಾದಾಮಿಗಳನ್ನು ಸಂಗ್ರಹಿಸಿ.
ಈ ಬಾದಾಮಿಯನ್ನು ಹಸಿಯಾಗಿಯೇ ತಿಂದರೆ ಅತ್ಯುತ್ತಮ. ಇಷ್ಟವಾಗದಿದ್ದರೆ ಸಿಪ್ಪೆಯನ್ನು ಸುಲಿದು ಕೇವಲ ತಿರುಳಿನ ಭಾಗವನ್ನೂ ಸೇವಿಸಬಹುದು.

ಒಣದ್ರಾಕ್ಷಿ

 

 

ಒಣಹಣ್ಣುಗಳಲ್ಲಿರುವ ಪ್ರಯೋಜನಗಳ ಬಗ್ಗೆ ವಿಷಯ ಬಂದಾಗ, ನಾವೆಲ್ಲಾ ಬಾದಾಮಿ, ಗೋಡಂಬಿ, ಪಿಸ್ತಾ ಇತ್ಯಾದಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ, ಒಣದ್ರಾಕ್ಷಿಯನ್ನು ಮಾತ್ರ ಮರೆತೇ ಬಿಡುತ್ತೇವೆ! ಆದರೆ ಇದರಲ್ಲಿ ಇರುವಂತಹ ಆರೋಗ್ಯ ಲಾಭಗಳ ಬಗ್ಗೆ ತಿಳಿದರೆ ಆಗ ಖಂಡಿತವಾಗಿಯೂ ಒಣದ್ರಾಕ್ಷಿಯನ್ನು ತಪ್ಪದೇ ಸೇವಿಸುವಿರಿ
ಮುಖ್ಯವಾಗಿ ನಾವು ಸಿಹಿ ತಿನಿಸುಗಳು ಹಾಗೂ ಇತರ ಕೆಲವೊಂದು ಖಾದ್ಯ, ಐಸ್ ಕ್ರಿಮ್ ಗಳಲ್ಲಿ ಬಳಸುವಂತಹ ಒಣ ದ್ರಾಕ್ಷಿಯು ನಮ್ಮ ಆರೋಗ್ಯಕ್ಕೆ ಅತೀ ಉತ್ತಮ. ಮುಖ್ಯವಾಗಿ ಒಣದ್ರಾಕ್ಷಿಯಲ್ಲಿ ಕಬ್ಬಿನಾಂಶ, ಪೊಟಾಶಿಯಂ, ಕ್ಯಾಲ್ಸಿಯಂ, ಮೆಗ್ನಿಶಿಯಂ ಮತ್ತು ನಾರಿನಾಂಶ ಆಗಾಧ ಪ್ರಮಾಣದಲ್ಲಿದ್ದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಆರೋಗ್ಯ ತಜ್ಞರೇ ಹೇಳುತ್ತಾರೆ.

​ಕೇವಲ ಒಣದ್ರಾಕ್ಷಿ ಮಾತ್ರವಲ್ಲ, ಇದನ್ನು ನೆನೆಸಿಟ್ಟ ನೀರಿನ ಸೇವನೆ ಕೂಡ ಬಹಳ ಒಳ್ಳೆಯದು

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಪ್ರಥಮ ಆಹಾರವಾಗಿ ಒಣದ್ರಾಕ್ಷಿ ನೆನೆಸಿಟ್ಟ ನೀರನ್ನು ಸೇವಿಸುವು ದರಿಂದ ಹೃದಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನವಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ಈ ವಿಧಾನದಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ, ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ದೇಹದಲ್ಲಿ ಟ್ರೈಗ್ಲಿಸರೈಡ್ ಮಟ್ಟವನ್ನು ಸಹಾ ಆರೋಗ್ಯಕರ ಮಟ್ಟದಲ್ಲಿರಿಸುತ್ತದೆ.
ವಾಸ್ತವದಲ್ಲಿ ಒಣದ್ರಾಕ್ಷಿಯನ್ನು ಹಾಗೇ ಸೇವಿಸುದುದಕ್ಕಿಂತಲೂ ನೆನೆಸಿಟ್ಟ ನೀರಿನ ಸೇವನೆಯಿಂದ ದೇಹಕ್ಕೆ ಲಭಿಸುವ ಸಕ್ಕರೆಯ ಶೇಖಡಾವಾರು ಪ್ರಮಾಣ ಕಡಿಮೆಯಾಗಿ ಉಳಿದ ಪೋಷಕಾಂಶಗಳು ಹೆಚ್ಚಾಗಿ ದೊರಕುವುದೇ ಈ ನೀರಿನ ಮಹತ್ವವಾಗಿದೆ.
​ಕೊಲೆಸ್ಟ್ರಾಲ್ ಕಡಿಮೆ ಮಾಡುವುದು
ನೆನೆಸಿದ ಒಣದ್ರಾಕ್ಷಿ ಮತ್ತು ಅದರ ನೀರಿನಿಂದ ಸಿಗುವ ಮತ್ತೊಂದು ಲಾಭವೆಂದರೆ ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದು. ಆಕ್ಸಿಡೀಕರಿಸಿದ ಕಡಿಮೆ ಸಾಂದ್ರತೆಯ
ಕೊಲೆಸ್ಟ್ರಾಲ್ ದೇಹದಲ್ಲಿದ್ದರೆ ಆಗ ಅದು ಹೃದಕ್ಕೆ ತುಂಬಾ ಅಪಾಯ ತಂದೊಡ್ಡಬಹುದು ಮತ್ತು ಅಪಧಮನಿಯ ಹಲವಾರು ಕಾಯಿಲೆಗಳಿಗೆ ಇದು ಕಾರಣವಾಗಬಹುದು. ಒಣದ್ರಾಕ್ಷಿ ಮತ್ತು ದ್ರಾಕ್ಷಿ ನೀರು ಇದೆಲ್ಲದರಿಂದ ನಿಮ್ಮನ್ನು ಕಾಪಾಡುವುದು. ನೀವು ನೆನೆಸಿದ ಒಣದ್ರಾಕ್ಷಿ ಜತೆಗೆ ಅದರ ನೀರನ್ನು ಕೂಡ ಕುಡಿಯಿರಿ ಮತ್ತು ಆರೋಗ್ಯವಾಗಿರಿ.
​ಕೆಮ್ಮು, ದೈಹಿಕ ಆಯಾಸ, ನಿದ್ದೆ ಸಮಸ್ಯೆ ಇದ್ದರೆ, ನೆನೆಸಿಟ್ಟ ಖರ್ಜೂರ ಸೇವಿಸಿ
ರಾತ್ರಿ ಮಲಗುವ ಸಂದರ್ಭದಲ್ಲಿ ಒಂದು ಲೋಟ ಹಾಲು ಕುಡಿದು ಮಲಗಬೇಕು ಎಂದು ಹೇಳುತ್ತಾರೆ. ಏಕೆಂದರೆ ಇದರಿಂದ ಸಾಕಷ್ಟು ಲಾಭವಿದೆ. ಗರ್ಭಿಣಿ ಮಹಿಳೆಯರು ಹಾಲಿಗೆ ಕೇಸರಿ ಹಾಕಿ ಕುಡಿದು ಮಲಗಬೇಕು. ಪುಟ್ಟಮಕ್ಕಳು ಬಾದಾಮಿ ಹಾಲು ಕುಡಿಯಬೇಕು.
ಹಾಗೆ ದೇಹದಲ್ಲಿ ಅತಿಯಾದ ಉಷ್ಣಾಂಶ ಹೊಂದಿರುವವರು ಹಾಲಿಗೆ ಕಲ್ಲುಸಕ್ಕರೆ ಹಾಕಿಕೊಂಡು ಕುಡಿಯುವುದು ಎಲ್ಲಾ ಕಡೆ ಚಾಲ್ತಿಯಲ್ಲಿರುವ ಅಭ್ಯಾಸ. ಆದರೆ ಹಾಲಿನ ಜೊತೆ ಖರ್ಜೂರಗಳನ್ನು ನೆನೆಸಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಅಪಾರವಾದ ಪ್ರಯೋಜನಗಳು ಸಿಗುತ್ತವೆ.
ಹೊಟ್ಟೆಯ ಭಾಗದಿಂದ ಹಿಡಿದು ಕರುಳಿನವರೆಗೂ ಖರ್ಜೂರ ಗಳ ಪ್ರಭಾವ ಇರುತ್ತದೆ. ಅಷ್ಟೇ ಅಲ್ಲದೆ ಮಧುಮೇಹ ಸಮಸ್ಯೆಯನ್ನು ಹೊಂದಿದವರು ಹಾಲಿಗೆ ಸಕ್ಕರೆ ಹಾಕಿಕೊಳ್ಳುವ ಬದಲು ಖರ್ಜೂರಗಳನ್ನು ಹಾಕಿ ಸೇವನೆ ಮಾಡಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಯಾವುದೇ ಕಾರಣಕ್ಕೂ ಏರಿಕೆ ಕಾಣುವುದಿಲ್ಲ.
ಆಶ್ಚರ್ಯಕರವಾದ ರೀತಿಯಲ್ಲಿ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಗಳು ಖರ್ಜೂರ ಮಿಶ್ರಿತ ಹಾಲನ್ನು ಕುಡಿಯುವುದರಿಂದ ಉಂಟಾಗುತ್ತದೆ.
ದೀರ್ಘಕಾಲದಿಂದ ಯಾರು ರಾತ್ರಿ ಹೊತ್ತು ನಿದ್ರೆ ಬರದೇ ತಡವರಿಸುತ್ತಾರೆ ಅಂತಹವರಿಗೆ ಖರ್ಜೂರದಿಂದ ಪರಿಹಾರ ಸಿಗುತ್ತದೆ. ಅತಿಯಾದ ಕೆಮ್ಮು, ದೈಹಿಕ ಆಯಾಸ ಇತ್ಯಾದಿ ಸಮಸ್ಯೆಗಳಿಗೆ ಹಾಲಿನಲ್ಲಿ ನೆನೆಸಿದ ಖರ್ಜೂರ ಉತ್ತರವಾಗಿ ನಿಲ್ಲುತ್ತದೆ.
ಖರ್ಜೂರ ಗಳನ್ನು ಹಾಲಿನಲ್ಲಿ ನೆನೆಸಿ ಸೇವನೆ ಮಾಡುವುದರಿಂದ ಮಹಿಳೆಯರಿಗೆ ಹಾಗೂ ಪುರುಷರಿಗೆ ಹಾಗೂ ಮಕ್ಕಳಿಗೆ ಬಹುತೇಕ ಆರೋಗ್ಯ ಲಾಭಗಳನ್ನು ನಿರೀಕ್ಷೆ ಮಾಡಬಹುದು.
ಆರೋಗ್ಯ ತಜ್ಞರು ಹೇಳುವ ಹಾಗೆ ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿರುವ ಗರ್ಭಿಣಿ ಮಹಿಳೆಯರು, ನರಗಳ ದೌರ್ಬಲ್ಯದಿಂದ ಬಳಲುತ್ತಿರುವ ಮಕ್ಕಳು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಸುಮಾರು 24 ಗಂಟೆಗಳ ಕಾಲ ಹಾಲಿನಲ್ಲಿ ನೆನೆಸಿದ ಖರ್ಜೂರ ಸೇವನೆ ಮಾಡಬೇಕು.

Related posts

ಜಿ.ಪಂ ಸಿಬ್ಬಂದಿಗಳಿಗೆ ವಾರದಲ್ಲಿ ಒಂದು ದಿನ ಸಮವಸ್ತ್ರ

eNEWS LAND Team

ರೆಡ್ ರೋಸ್ ಕೊಡಲು ಹೋಗಿ, ಪೊಲೀಸರ ಅತಿಥಿಯಾದ ಕಾಂಗ್ರೆಸಿಗರು

eNEWS LAND Team

SWR: TRIAL RUN OF VANDE BHARAT EXPRESS

eNEWS LAND Team