24.3 C
Hubli
ಮೇ 26, 2024
eNews Land
ಸುದ್ದಿ

ಇ.ಡಿ ಮೂಲಕ ಕೇಂದ್ರ ಸರ್ಕಾರ ದಬ್ಬಾಳಿಕೆ: ಅಣ್ಣಪ್ಪ ಓಲೇಕಾರ

ಇಎನ್ಎಲ್ ಕಲಘಟಗಿ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಇವರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ನಾಗರಾಜ ಛಬ್ಬಿ ಗೆಳೆಯರ ಬಳಗ, ಕಾಂಗ್ರೆಸ್ ಮುಖಂಡರು ಮತ್ತು ವಕೀಲ ಅಣ್ಣಪ್ಪ ಓಲೇಕಾರ ಹೇಳಿದರು.

    ಪಟ್ಟಣದ ತಹಶೀಲ್ದಾರ ಕಛೇರಿಯ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ರಾಜಕೀಯ ದುರುದ್ದೇಶದಿಂದ ಇ.ಡಿ ಸಂಸ್ಥೆಯ ಮೂಲಕ ಕೇಂದ್ರ ಸರ್ಕಾರವು ಸಂವಿಧಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ಇದಕ್ಕೆ ಜನರು ಪಾಠ ಕಲಿಸುತ್ತಾರೆ ಎಂದರು. ಪಕ್ಷದ ಕಾರ್ಯಕರ್ತ ಕಿರಣ ಪಾಟೀಲ ಕುಲಕರ್ಣಿ ಮಾತನಾಡಿ ಭಾರತೀಯ ಸಂವಿಧಾನದಲ್ಲಿ ವ್ಯಕ್ತಿಯ ಮಾನಸಿಕ ಕಿರುಕುಳ ನೀಡುವುದು ಹಾಗೂ ತೇಜೋವಧೆ ಮಾಡುವುದನ್ನು ವಿರೋಧಿಸಿದೆ. ನೀವು ಎಷ್ಟೇ ಕಿರುಕುಳ ನೀಡಿದರೂ ಜನರು ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಪಟ್ಟಣದ ಆಂಜನೇಯ ಸರ್ಕಲ್‌ನಿಂದ ತಹಶೀಲ್ದಾರ ಕಛೇರಿಯವರೆಗೆ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಹಶೀಲ್ದಾರ್ ಯಲ್ಲಪ್ಪ ಗೊಣ್ಣೆನ್ನವರಗೆ ಮನವಿ ಸಲ್ಲಿಸಿದರು.
    ಪ್ರತಿಭಟನೆಯಲ್ಲಿ ಹಿರಿಯ ವಕೀಲರಾದ ಬಿ.ವಿ.ಪಾಟೀಲ, ನಾಗಪ್ಪ ಅಂಗಡಿ, ಗುರುನಾಥ ದಾನವೇನವರ, ಸಹದೇವಪ್ಪ ನೂಲ್ವಿ, ಬಸಪ್ಪ ಕುರಡಿಕೇರಿ, ರಮೇಶ ಕರಿಗಾರ, ಸಿ.ಎನ್.ಹಿತ್ತಲಮನಿ, ನಾರಾಯಣ ಮಧುಕರ, ಸಂಗಪ್ಪ ಹೊಸಮನಿ, ಹಾಗೂ ಛಬ್ಬಿ ಅಭಿಮಾನಿ ಬಳಗ, ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ಛಬ್ಬಿ ಅಭಿಮಾನಿ ಬಳಗ ತಹಶೀಲ್ದಾರ ಕಛೇರಿಯ ಆವರಣದಿಂದ ಹೊರಗೆ ಬಂದ ನಂತರ ಸಂತೋಷಲಾಡ್ ಬಳಗವೂ ಕಛೇರಿಯ ಆವರಣಕ್ಕೆ ಹೋಗಿ ತಹಶೀಲ್ದಾರರಿಗೆ ಪ್ರತ್ಯೇಕವಾಗಿ ಇದೇ ವಿಷಯವಾಗಿ ಮನವಿ ಸಲ್ಲಿಸಿದ್ದು ತಾಲೂಕಿನ ಕಾಂಗ್ರೆಸ್ ಪಕ್ಷವು ಇಭ್ಬಾಗವಾಗಿದ್ದು ಸ್ಪಷ್ಟವಾಗಿತ್ತು.
 

Related posts

ಅಪಘಾತಕ್ಕೊಳಗಾದ ಹುಧಾ ಚಿಗರಿ!! ಎಲ್ಲಿ? ಯಾವಾಗ ನೋಡಿ?

eNEWS LAND Team

ದಿವಾಳಿ ಆಗಿಲ್ಲ: ಕಲಘಟಗಿ ಅರ್ಬನ್ ಬ್ಯಾಂಕ್ ಸ್ಪಷ್ಟಣೆ

eNEWS LAND Team

ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನ: ಸಾಮೂಹಿಕ ಜವಾಬ್ದಾರಿ

eNEWS LAND Team