35 C
Hubli
ಮಾರ್ಚ್ 19, 2024
eNews Land
ಆರ್ಥಿಕತೆ ಸುದ್ದಿ

ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರುಪಾಯಿ!!

ಇಎನ್ಎಲ್ ಹುಬ್ಬಳ್ಳಿ: ಅಮೇರಿಕಾದ ಡಾಲರ್ ಎದುರು ಭಾರತದ ರುಪಾಯಿ ಗುರುವಾರ ಸಾರ್ವಕಾಲಿಕ ಕನಿಷ್ಠ ಮಟ್ಟ 78.32 ರು.ಗೆ ಇಳಿಕೆಯಾಗಿದೆ.

ಗುರುವಾರ ಭಾರತೀಯ ಷೇರು ಮಾರುಕಟ್ಟೆಗಳು ಪುಟಿದೆದ್ದಿವೆ. ಆದರೆ ಒಟ್ಟಾರೆ ಕಾರ್ಯಕ್ಷಮತೆಯು ಮುಂದೆ ಹೆಚ್ಚಿನ ಕುಸಿತವನ್ನು ಸೂಚಿಸುತ್ತಿದೆ. ಇದೇ ವೇಳೆ ರೂಪಾಯಿ ಕೂಡ ನೆಲಕಚ್ಚಿದೆ. ಆರ್ಥಿಕ ಹಿಂಜರಿತದ ಭಯದಲ್ಲಿ ಜಾಗತಿಕ ಮಟ್ಟದಲ್ಲಿ ಅಪಾಯದ ಸ್ವತ್ತುಗಳು ಕುಸಿತ ಕಂಡಿದ್ದು, ಇದರ ಜತೆ ಜತೆಗೆ ರುಪಾಯಿ ಕೂಡ ಕುಸಿತ ಕಂಡಿದೆ.

ರುಪಾಯಿ ಗುರುವಾರ 78.26ರಲ್ಲಿ ವಹಿವಾಟು ಆರಂಭಿಸಿತು. ಆದರೆ ಅಂತಿಮವಾಗಿ ಸಾರ್ವಕಾಲಿಕ ಕನಿಷ್ಠ 78.32 ರು.ನಲ್ಲಿ ನೆಲೆ ನಿಂತಿತು. ಬುಧವಾರವೂ ರುಪಾಯಿ 19 ಪೈಸೆಗಳಷ್ಟು ಕುಸಿದು ಅಮೆರಿಕ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 78.32 ರು.ಗೆ ಕುಸಿದಿತ್ತು. ಇದೀಗ ಗುರುವಾರವೂ ಇದೇ ಮಟ್ಟದಲ್ಲಿ ವಹಿವಾಟು ಕೊನೆಗೊಳಿಸಿದ್ದು, ರುಪಾಯಿ ಮೇಲೇಳುವಂತೆ ಕಾಣಿಸುತ್ತಿಲ್ಲ.

ಇದನ್ನು ಓದಿ: ಭೂಕಂಪ; ತಾಲಿಬಾನ್ ಅಫ್ಘಾನಿಸ್ತಾನ ಸ್ಮಶಾನ, ತುತ್ತು ಅನ್ನಕ್ಕೂ ತತ್ವಾರ!!

 

Related posts

ದೀಪಾವಳಿ ಹೀಗೂ ಆಚರಿಬಹುದು ಎಂದು ತೋರಿಸಿದ ಹಾವೇರಿ ಡಿಸಿ

eNEWS LAND Team

ಇಂದು ಪಂ.ಭೀಮಸೇನ ಜೋಶಿ ಜನ್ಮ ಶತಮಾನೋತ್ಸವ ಸಮಾರಂಭ

eNEWS LAND Team

ಎಚ್.ಡಿ.ಕುಮಾರಸ್ವಾಮಿ ನೇತೃತ್ವಲ್ಲಿ ಅರಮನೆ ಶಂಕರ್ ಪರ ಮತಯಾಚನೆ: ಬಸವನಗುಡಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಚಾಲನೆ

eNEWS LAND Team