ಇಎನ್ಎಲ್ ಅಣ್ಣಿಗೇರಿ: ಪಟ್ಟಣದ ಪುರಸಭೆ 23 ವಾರ್ಡ್ಗಳ ಚುನಾವಣೆಗೆ ಡಿ.15 ರಂದು ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ ಇದ್ದರಿಂದ ಡಿ.13 ರಂದು 6 ಅಭ್ಯರ್ಥಿಗಳು ನಾಮಪತ್ರಸಲ್ಲಿಸಿದರೇ, ಡಿ.14 ರಂದು 31 ಅಭ್ಯರ್ಥಿಗಳು, ಒಟ್ಟು ಇವರೆಗೂ ಪುರಸಭೆ ಚುನಾವಣೆ 23 ವಾರ್ಡ್ಗಳಿಗೆ 37 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.ನಾಳೆ ಡಿ.15 ರಂದು ಬಿಜೆಪಿ. ಜೆಡಿಎಸ್. ಕಾಂಗ್ರೆಸ್, ಪಕ್ಷೇತರ, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂಖ್ಯೆ ಹೆಚ್ಚುವ ಸಂಭವವಿದೆ.ಡಿ.16 ರಂದು ನಾಮಪತ್ರ ಪರೀಶಿಲನೆ, ಡಿ.18 ರಂದು ನಾಮಪತ್ರ ಹಿಂಪಡೆಯುವುದು.

23 ವಾರ್ಡ್ಗಳಲ್ಲಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ,
ಕಾಂಗ್ರೇಸ್-22, ಬಿಜೆಪಿ-3, ಪಕ್ಷೇತರರು-12, ಜೆಡಿಎಸ್. ಪಕ್ಷದ ಯಾವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಲ್ಲ. ವಾರ್ಡ್-1 ರಲ್ಲಿ 2 ಕಾಂಗ್ರೆಸ್, 2 ಪಕ್ಷೇತರರು, ವಾರ್ಡ್-2 ರಲ್ಲಿ 2 ಕಾಂಗ್ರೆಸ್, ವಾರ್ಡ್-3 ರಲ್ಲಿ ಯಾವ ಅಭ್ಯರ್ಥಿ ನಾಮಪತ್ರ ಸಲ್ಲಿಸಿಲ್ಲ. ವಾರ್ಡ್-4 ರಲ್ಲಿ ಒಬ್ಬ ಪಕ್ಷೇತರ ಅಭ್ಯರ್ಥಿ, ವಾರ್ಡ್-5 ರಲ್ಲಿ 2 ಕಾಂಗ್ರೆಸ್, 1 – ಬಿಜೆಪಿ, 1- ಪಕ್ಷೇತರ ಅಭ್ಯರ್ಥಿ,ವಾರ್ಡ್-6 ರಲ್ಲಿ 1- ಕಾಂಗ್ರೆಸ್ ಅಭ್ಯರ್ಥಿ,ವಾರ್ಡ್-7 ರಲ್ಲಿ 1- ಕಾಂಗ್ರೆಸ್,1-ಪಕ್ಷೇತರ,ವಾರ್ಡ 8 ರಲ್ಲಿ 1-ಕಾಂಗ್ರೆಸ್, ವಾರ್ಡ್-9 ರಲ್ಲಿ –ಯಾರೂ ನಾಮಪತ್ರ ಸಲ್ಲಿಸಿಲ್ಲ. ವಾರ್ಡ್-10 ರಲ್ಲಿ 1-ಪಕ್ಷೇತರ, ವಾರ್ಡ್-11 ರಲ್ಲಿ 3-ಕಾಂಗ್ರೆಸ್, 2-ಪಕ್ಷೇತರ, ವಾರ್ಡ್-12 ರಲ್ಲಿ 1-ಕಾಂಗ್ರೆಸ್, 1-ಬಿಜೆಪಿ, ವಾರ್ಡ್-13 ಹಾಗೂ ವಾರ್ಡ್- 14 ರಲ್ಲಿ ಯಾರೂ ನಾಮಪತ್ರ ಸಲ್ಲಿಸಿಲ್ಲ. ವಾರ್ಡ್-15 ರಲ್ಲಿ 1-ಕಾಂಗ್ರೆಸ್, 1-ಪಕ್ಷೇತರ, ವಾರ್ಡ್-16 ರಲ್ಲಿ 1-ಕಾಂಗ್ರೆಸ್, 1-ಪಕ್ಷೇತರ, ವಾರ್ಡ್-17 ರಲ್ಲಿ 1-ಕಾಂಗ್ರೆಸ್, 1-ಪಕ್ಷೇತರ, ವಾರ್ಡ್, ವಾರ್ಡ್-18 ರಲ್ಲಿ 2-ಕಾಂಗ್ರೆಸ್, 1-ಪಕ್ಷೇತರ, ವಾರ್ಡ್-19 ರಲ್ಲಿ 1-ಬಿಜೆಪಿ. 1-ಕಾಂಗ್ರೆಸ್, ವಾರ್ಡ್-20 ರಲ್ಲಿ 1-ಕಾಂಗ್ರೆಸ್, ವಾರ್ಡ್-21 ರಲ್ಲಿ ಯಾರೂ ನಾಮಪತ್ರ ಸಲ್ಲಿಸಿಲ್ಲ.ವಾಡ್-22 ರಲ್ಲಿ 1-ಕಾಂಗ್ರೆಸ್, ವಾರ್ಡ್23 ರಲ್ಲಿ 1-ಕಾಂಗ್ರೆಸ್,
ನಾಮಪತ್ರ ಸಲ್ಲಿಸುವ ಅಭ್ಯರ್ಥಿ ತಮ್ಮ ತಮ್ಮ ವಾರ್ಡಿನ ಗುರುಹಿರಿಯರು,ಪಕ್ಷಗಳ ಕಾರ್ಯಕರ್ತರು, ಮಹಿಳೆಯರು, ಯುವಕರು,ತಂಡೋಪತoಡವಾಗಿ ಜೈಕಾರ. ಪಟಾಕಿ ಸಿಡಿಸಿ, ಪಟ್ಟಣದ ಅಮೃತೇಶ್ವರನಿಗೆ ಪೂಜೆ ಸಲ್ಲಿಸಿ, ದರ್ಶನ ಪಡೆದು ಪುರಸಭೆಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿ, ಜೆಡಿಎಸ್, ಟಿಕೇಟ ಆಕಾಂಕ್ಷಿಗಳು ನಾಳೆಯೇ ಮಧ್ಯಾಹ್ನ 3-೦೦ ಗಂಟೆಯೊಳಗೆ ಪಕ್ಷದ ಬಿ-ಫಾರ‍್ಮ ಪಡೆದು ನಾಮಪತ್ರ ಸಲ್ಲಿಸುವಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ನಡೆಸುತ್ತಿರೋದು ಮೆಲ್ನೋಟಕ್ಕೆ ಕಂಡುಬರುತ್ತಿದೆ.