29 C
Hubli
ಅಕ್ಟೋಬರ್ 8, 2024
eNews Land
ಸುದ್ದಿ

ಮಾಜಿ ಶಾಸಕ ಎಂ‌ ಪಿ ಕರ್ಕಿ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ

ಮಾಜಿ ಶಾಸಕ ಎಂ‌ ಪಿ ಕರ್ಕಿ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾ

ಬೆಂಗಳೂರು:

ಕುಮಟಾ ಕ್ಷೇತ್ರದ ಮಾಜಿ ಶಾಸಕ ಎಂ ಪಿ ಕರ್ಕಿ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಹಾಗೂ ರಾಜ್ಯದಲ್ಲಿ ಜನಸಂಘ ಮತ್ತು ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಕರ್ಕಿಯವರ ಪಾತ್ರ ಮಹತ್ವದ್ದಾಗಿತ್ತು. ಶಿಕ್ಷಣ ಕ್ಷೇತ್ರ ಹಾಗೂ ಸಾಮಾಜಿಕ ಸೇವೆಯಲ್ಲಿ ಇವರು ಮಾಡಿರುವ ಸೇವೆ ಅನುಕರಣೀಯ. ಕರ್ಕಿ ಅವರ ನಿಧನದಿಂದ ಸಂಘಪರಿವಾರ ಒಬ್ಬ ಹಿರಿಯ ನಾಯಕನನ್ನು ಕಳೆದುಕೊಂಡಂತಾಗಿದೆ. ಅವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬದವರಿಗೆ ಕರುಣಿಸಲಿ ಎಂದು ಆ ದೇವರಲ್ಲಿ ಕೋರುತ್ತೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related posts

ಹುಬ್ಬಳ್ಳಿ: ಗಬ್ಬೂರು ವೃತ್ತದಲ್ಲಿ ರಸ್ತೆ ತಡೆದು ರೈತರ ಪ್ರತಿಭಟನೆ

eNewsLand Team

ಹುಬ್ಬಳ್ಳಿ ಮತ್ತು ಗುಂತಕಲ್ ಗಳ ನಡುವೆ ಡೆಮು ರೈಲು ಸಂಚಾರ ಪ್ರಾರಂಭ

eNEWS LAND Team

ಇದು ಚಕ್ರವರ್ತಿ, ಗಾನವಿ ಭಾವಚಿತ್ರ

eNewsLand Team