25.4 C
Hubli
ಏಪ್ರಿಲ್ 26, 2024
eNews Land
ಸುದ್ದಿ

ನೈಋತ್ಯ ರೈಲ್ವೆಯ ತಂಡಕ್ಕೆ ಅಖಿಲ ಭಾರತ ರೈಲ್ವೆ ರೋಡ್ ಸೈಕ್ಲಿಂಗ್ ಚಾಂಪಿಯನ್’ಶಿಪ್ ಪ್ರಶಸ್ತಿ

ಇಎನ್ಎಲ್ ಧಾರವಾಡ: ವಾಯುವ್ಯ ರೈಲ್ವೆ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ 58ನೇ ರೋಡ್ ಸೈಕ್ಲಿಂಗ್ ಚಾಂಪಿಯನ್’ಶಿಪ್ ಈಚೆಗೆ ಬಿಕಾನೇರ್’ನಲ್ಲಿ ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ನೈಋತ್ಯ ರೈಲ್ವೆಯ ತಂಡ ಒಂದು ಚಿನ್ನ, ನಾಲ್ಕು ಬೆಳ್ಳಿ ಪದಕ ಗಳಿಸಿ ಚಾಂಪಿಯನ್’ಶಿಪ್ ಪ್ರಶಸ್ತಿ ಗೆದ್ದಿದೆ.

ಇದನ್ನೂ ಓದಿ:ಬೇಕಾಬಿಟ್ಟಿ ನ್ಯೂಸ್ ಪ್ರಿಂಟ್ ಬಳಸೊ ಪತ್ರಿಕಾ ಸಂಸ್ಥೆಗಳ ಕಥೆ… ಮಾಧ್ಯಮದಲ್ಲಿ ಕೆಲಸ ಮಾಡ್ತಾ ಇದೀರಾ ಇದನ್ನು ತಪ್ಪದೆ ಓದಿ

100 ಕೀ ಮೀ. ರೋಡ್ ರೇಸ್’ನಲ್ಲಿ ಶ್ರೀ ವೆಂಕಪ್ಪ ಕೆ. (ಟಿಕೆಟ್ ಪರೀಕ್ಷಕ – ಹುಬ್ಬಳ್ಳಿ ವಿಭಾಗ) ಚಿನ್ನದ ಪದಕ, ಶ್ರೀ ಅನಿಲ್ ಮಂಗ್ಲಾವ್ (ಟಿಕೆಟ್ ಪರೀಕ್ಷಕ – ಹುಬ್ಬಳ್ಳಿ ವಿಭಾಗ) ಬೆಳ್ಳಿಯ ಪದಕ ಹಾಗೂ ಶ್ರೀ ಸಚಿನ್ ದೇಸಾಯಿ (ಟಿಕೆಟ್ ಪರೀಕ್ಷಕ – ಹುಬ್ಬಳ್ಳಿ ವಿಭಾಗ) ನಾಲ್ಕನೇ ಸ್ಥಾನ ಪಡೆದರು.

ಇದನ್ನೂ ಓದಿ:ಕಾನೂನು ವಿವಿ ಘಟಿಕೋತ್ಸವ; 5188 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

50ಕೀ.ಮೀ. ಕ್ರೈಟೀರಿಯಂ ರೇಸ್’ನಲ್ಲಿ ಶ್ರೀ ಸಚಿನ್ ದೇಸಾಯಿ (ಟಿಕೆಟ್ ಪರೀಕ್ಷಕ – ಹುಬ್ಬಳ್ಳಿ ವಿಭಾಗ) ಬೆಳ್ಳಿಯ ಪದಕ ಹಾಗೂ ಶ್ರೀ ಅಶ್ವಿನ್ ಪಾಟೀಲ್ (ಟಿಕೆಟ್ ಪರೀಕ್ಷಕ – ಹುಬ್ಬಳ್ಳಿ ವಿಭಾಗ) ಐದನೇ ಸ್ಥಾನ ಪಡೆದರು.
40ಕೀ.ಮೀ. ಇಂಡಿವಿಜುವಲ್ ಟೈಮ್ ಟ್ರಯಲ್ಸ್ ನಲ್ಲಿ ವೆಂಕಪ್ಪ ಕೆ. (ಟಿಕೆಟ್ ಪರೀಕ್ಷಕ – ಹುಬ್ಬಳ್ಳಿ ವಿಭಾಗ) ಬೆಳ್ಳಿಯ ಪದಕ ಹಾಗೂ ಶ್ರೀ ಅನಿಲ್ ಮಂಗ್ಲಾವ್ (ಟಿಕೆಟ್ ಪರೀಕ್ಷಕ – ಹುಬ್ಬಳ್ಳಿ ವಿಭಾಗ) ) ನಾಲ್ಕನೇ ಸ್ಥಾನ ಪಡೆದರು.
ಅನಿಲ್ ಮಂಗ್ಲಾವ್ (ಟಿಕೆಟ್ ಪರೀಕ್ಷಕ – ಹುಬ್ಬಳ್ಳಿ ವಿಭಾಗ), ವೆಂಕಪ್ಪ ಕೆ. (ಟಿಕೆಟ್ ಪರೀಕ್ಷಕ-ಹುಬ್ಬಳ್ಳಿ ವಿಭಾಗ). ರಾಜು ಬಾಟಿ, (ಟಿಕೆಟ್ ಪರೀಕ್ಷಕ – ಹುಬ್ಬಳ್ಳಿ ವಿಭಾಗ), ವಿಶ್ವನಾಥ್ ಜಿ.(ಪ್ರೋಬೇಷನರಿ ಕಮರ್ಷಿಯಲ್ ಕ್ಲರ್ಕ್, ವಲಯ ತರಬೇತಿ ಕೇಂದ್ರ, ಧಾರವಾಡ) ಇವರುಗಳನ್ನೊಳಗೊಂಡ ತಂಡವು 60ಕೀ.ಮೀ. ಟೀಮ್ ಟೈಮ್ ಟ್ರಯಲ್ಸ್ ನಲ್ಲಿ ಬೆಳ್ಳಿಯ ಪದಕ ಪಡೆದುಕೊಂಡಿತು.

ಇದನ್ನೂ ಓದಿ:ಕಡಿಮೆ ವೆಚ್ಚ, ತ್ವರಿತ ಗತಿಯಲ್ಲಿ ನ್ಯಾಯದಾನವಾಗಬೇಕು: ರಾಜ್ಯಪಾಲ ಗೆಹ್ಲೋತ್

ಈ ಎಲ್ಲ ಕ್ರೀಡಾಪಟುಗಳು ತರಬೇತುದಾರ ಶ್ರೀ ನಂಜಪ್ಪ ಯೆಂಟದ್ ಮುಖ್ಯ ಟಿಕೆಟಿಂಗ್ ಇನ್ಸ್’ಪೆಕ್ಟರ್, ಹುಬ್ಬಳ್ಳಿ ವಿಭಾಗ) ಅವರ ನೇತೃತ್ವದಲ್ಲಿ ಭಾಗವಹಿಸಿದ್ದರು

ಇದನ್ನೂ ಓದಿ:ಕೃಷಿ ವಿವಿ ವಿದೇಶಿ ವಿದ್ಯಾರ್ಥಿಗಳೊಂದಿಗೆ ರಾಜ್ಯಪಾಲರ ಸಂವಾದ

ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ್ ಪಾರಿತೋಷಕ ವಿಜೇತ ಈ ಎಲ್ಲ ಕ್ರೀಡಾಪಟುಗಳಿಗೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿ ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ, ಜೊತೆಗೆ ಈ ಸಾಧನೆಗಾಗಿ ನೈಋತ್ಯ ರೈಲ್ವೆ ಸ್ಪೋರ್ಟ್ಸ್ ಅಸೋಸಿಯೇಶನ್ ಪದಾಧಿಕಾರಿಗಳಾದ ಶ್ರೀ ಸಂಜೀವ ಕಟವಾರೆ ಹಾಗೂ ಶ್ರೀ ಅಜಯ ಜೈನ್’ರವರನ್ನು ಅಭಿನಂದಿಸಿದ್ದಾರೆ.

ಇದನ್ನೂ ಓದಿ:ಬಾಲಗೌರವ ಪ್ರಶಸ್ತಿ ಹಾಗೂ ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗೆ ಅರ್ಜಿ ಆಹ್ವಾನ

Related posts

ಹುಬ್ಬಳ್ಳಿ-ಧಾರವಾಡ ನಗರ-ಉಪನಗರ ಸಾರಿಗೆಗಳಲ್ಲಿ ನಗದು ರಹಿತ ಇ-ಪರ್ಸ ಸ್ಟಾರ್ಟ ಕಾರ್ಡ ಪ್ರಾರಂಭ

eNEWS LAND Team

ಹುಬ್ಬಳ್ಳಿಲಿ ಬೈಕು ಟಚ್ ಆಗಿದ್ದಕ್ಕೆ ಚಾಕೂ ಚುಚ್ಚಿದ್ನಾ ಉಸ್ಮಾನ್ ಭಾಯ್!!

eNewsLand Team

ಧಾರವಾಡ ಚುನಾವಣಾ ಅಖಾಡ ಫೈನಲ್; ಕಣದಿಂದ ಓಡಿಹೋದವರ್ಯಾರು ಗೊತ್ತಾ?

eNEWS LAND Team