39 C
Hubli
ಏಪ್ರಿಲ್ 29, 2024
eNews Land
ಸುದ್ದಿ

ಅಣ್ಣಿಗೇರಿ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲು ಆಗ್ರಹ

ಇಎನ್‌ಎಲ್‌ ಅಣ್ಣಿಗೇರಿ: ತಾಲೂಕಿನ ಪಕ್ಷಾತೀತ ರೈತ ಹೋರಾಟ ಸಮಿತಿ ರೈತ ಮುಖಂಡರು ಅಣ್ಣಿಗೇರಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹಿಸಿ ತಹಶೀಲ್ದಾರ ಅವರಿಗೆ ಸರ್ಕಾರಕ್ಕೆ ಕಳಿಸಲು ಮನವಿ ಸಲ್ಲಿಸಿದರು.

ಪ್ರಸಕ್ತ ಸಾಲಿನ ಮುಂಗಾರು ಬೆಳೆಗಳಾದ ಹೆಸರು, ಶೇಂಗಾ, ಹತ್ತಿ, ಮೆಣಸಿನಕಾಯಿ, ಅಲ್ಪ ಮಳೆಯಿಂದ ರೈತರು ಭಿತ್ತನೆ ಮಾಡಿದ್ದಾರೆ. ಬಿತ್ತನೆ ಬೆಳೆಗಳು ಮಣ್ಣಿನ ತೇವಾಂಶವಿದ್ದ ಸ್ಥಳದಲ್ಲಿ ಮಾತ್ರ ಹುಟ್ಟಿದ್ದು ಉಳಿದ ಕಡೆ ಬೆಳೆಗಳು ಬೆಳೆದಿಲ್ಲ. ಬೆಳೆದ ಬೆಳೆಗಳು ರೋಗ ತಗುಲಿ ಬೆಳೆ ನಾಶವಾಗಿದೆ. ರೈತರು ಸಂಕಷ್ಟದಲ್ಲಿದ್ದು ಒಂದು ಹೆಕ್ಟರ್ ಭೂಮಿಗೆ 40 ಸಾವಿರ ರೂಗಳು ರೈತರ ಖಾತೆಗೆ ಜಮಾ ಕೊಡಬೇಕು. ಹೆಸರು, ಶೇಂಗಾ, ಮೆಣಸಿನಕಾಯಿ, ಹತ್ತಿ ಬೆಳೆಗೆ ತುಂಬಿದ ವಿಮಾ ಕಂತಿನ ಹಣ ಬಿಡುಗಡೆ ಮಾಡಬೇಕೆಂದು ರೈತ ಮುಖಂಡ ಭಗವಂತ ಪುಟ್ಟಣ್ಣವರ ಆಗ್ರಹಿಸಿದರು.
ಕಳಸಾ-ಬಂಡೂರಿ ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ತಕ್ಷಣವೇ ಚಾಲನೆ ನೀಡಬೇಕು.ಕಳೆದ 5-6 ವರ್ಷಗಳಿಂದ ನಿರಂತರ ಹೋರಾಟ ಮಾಡಿದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಭರವಸೆಗಳನ್ನು ನೀಡುತಿದೆ. ರೈತರ ಪ್ರಮುಖ ಬೇಡಿಕೆಗಳಿಗೆ ಸೂಕ್ತ ಕ್ರಮಕೈಗೊಂಡು ರೈತ ಕುಲವನ್ನು ಕಾಪಾಡದಿದ್ದರೇ ಉಗ್ರ ಹೋರಾಟಕ್ಕೆ ಮುನ್ನಗ್ಗಬೇಕಾಗುತ್ತದೆಂದು ಅಣ್ಣಿಗೇರಿ ತಾಲೂಕ ರೈತ ಹೋರಾಟ ಸಮಿತಿ ಅಧ್ಯಕ್ಷ ಜಯರಾಜ ಹೂಗಾರ ಎಚ್ಚರಿಕೆ ಕೊಟ್ಟರು.
ಈ ಸಂದರ್ಭದಲ್ಲಿ ಗುರುಸಿದ್ದಪ್ಪ ಕೊಪ್ಪದ, ಎಸ್.ಟಿ.ಸೋಟಕನಾಳ, ನಿಂಗಪ್ಪ ಬಡೆಪ್ಪನವರ, ಮಲ್ಲಪ ಬ್ಯಾಹಟ್ಟಿ, ಯಲ್ಲಪ್ಪ ಮೊರಬಸಿ, ಎ.ಪಿ.ಗುರಿಕಾರ, ರೈತ ಮಹಿಳೆಯರು, ಸುತ್ತಮುತ್ತಲಿನ ಗ್ರಾಮದ ರೈತ ಮುಖಂಡರು ಉಪಸ್ಥಿತರಿದ್ದರು.

Related posts

ಖಾಸಗಿ, ಸರ್ಕಾರಿ,ಅರೆ ಸರ್ಕಾರಿ ಉದ್ಯೋಗ ಕನ್ನಡಿಗರಿಗೇ : ಸಿಎಂ ಬೊಮ್ಮಾಯಿ

eNEWS LAND Team

ಹರ್ ಘರ್ ತಿರಂಗಾ ಅಭಿಯಾನ: ಭಾರತೀಯರು ಒಂದು ಎಂಬ ಸಂದೇಶ ಸಾರಬೇಕು: ಸಿಎಂ ಬೊಮ್ಮಾಯಿ

eNEWS LAND Team

ಹುಬ್ಬಳ್ಳಿ ಕೇಶ್ವಾಪುರ – ರೈಲ್ವೇ ಕೆಳಸೇತುವೆ ನೂತನ ರಸ್ತೆ ಲೋಕಾರ್ಪಣೆ

eNewsLand Team