28 C
Hubli
ಏಪ್ರಿಲ್ 30, 2024
eNews Land
ಜಿಲ್ಲೆ ಸುದ್ದಿ

ಹುಬ್ಬಳ್ಳಿ ಕೇಶ್ವಾಪುರ – ರೈಲ್ವೇ ಕೆಳಸೇತುವೆ ನೂತನ ರಸ್ತೆ ಲೋಕಾರ್ಪಣೆ

₹ 400 ಕೋಟಿ ಕೇಂದ್ರ ರಸ್ತೆ ನಿಧಿಯಡಿ ಅವಳಿ ನಗರದ ರಸ್ತೆಗಳ ಅಭಿವೃದ್ಧಿ: ಶೆಟ್ಟರ್

ಇಎನ್ಎಲ್ ಹುಬ್ಬಳ್ಳಿ: ₹ 400 ಕೋಟಿ  ಕೇಂದ್ರ ರಸ್ತೆ ನಿಧಿಯಡಿ ಹುಬ್ಬಳ್ಳಿ ಧಾರವಾಡ ಅವಳಿ ನಗರದ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.

ಕೇಂದ್ರ ರಸ್ತೆ ನಿಧಿ ಯೋಜನೆಯಡಿ ಕೇಶ್ವಾಪುರದ ಸರ್ವೋದಯ ವೃತ್ತದಿಂದ ಗದಗ ರಸ್ತೆಯ ರೈಲ್ವೆ ಕೆಳಸೇತುವೆವರೆಗೆ ನಿರ್ಮಿಸಲಾಗಿರುವ ನೂತನ ಸಿ.ಸಿ. ರಸ್ತೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಕೇಂದ್ರ ರಸ್ತೆ ನಿಧಿ ಯೋಜನೆಯ 50 ಕೋಟಿ ರೂಪಾಯಿಗಳ ಅನುದಾನದಲ್ಲಿ ಗದಗ ರೈಲ್ವೇ ಕೆಳ ಸೇತುವೆಯಿಂದ ಕೇಶ್ವಾಪುರ, ಬೆಂಗೇರಿ, ಗೋಪನಕೊಪ್ಪ ಹಾಗೂ ಸಾಯಿನಗರ ಸಂಪರ್ಕಿಸುವ ಸಿ.ಸಿ.ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.

ಯೋಜನೆ ಹಂತದಲ್ಲಿ ಗದಗ ರಸ್ತೆಯ ರೈಲ್ವೇ ಕೆಳಸೇತುವೆಯಿಂದ ಕೇಶ್ವಾಪುರ ಸರ್ವೋದಯ ವೃತ್ತದವರೆಗೆ ಉತ್ತಮ ಗುಣಮಟ್ಟದ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ರಸ್ತೆಯ ಪಕ್ಕದಲ್ಲಿ ಪೇರ್ಯಸ್ ಅಳವಡಿಸಲಾಗಿದೆ. ಸುಸಜ್ಜಿತ ಫುಟ್ ‌ಪಾತ್ ನಿರ್ಮಿಸಲಾಗಿದೆ. ಬಿ.ಎಸ್.ಎನ್.ಎಲ್. ಜಲಮಂಡಳಿ, ಮಹಾನಗರ ಪಾಲಿಕೆ, ಹೆಸ್ಕಾಂ ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸಿ ರಸ್ತೆ ನಿರ್ಮಿಸಲು ಸೂಕ್ತ ನಿರ್ದೇಶನಗಳನ್ನು ನೀಡಿದ್ದೆ. ಇದರ ಫಲವಾಗಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಂಡಿದೆ ಎಂದರು.

ಅವಳಿ ನಗರದ ಎಲ್ಲಾ ಮನೆಗಳಿಗೆ 24\7 ಕುಡಿಯುವ ನೀರಿನ ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ. ಎಲ್ ಆ್ಯಂಡ್ ಟಿ ಕಂಪನಿಯ ಸರ್ವೇ ಕಾರ್ಯ ಮುಗಿದ ಬಳಿಕ ಕಾಮಗಾರಿ ಆರಂಭಿಸಲಾಗುವುದು. ಕೊರೋನಾದಿಂದಾಗಿ ಕಾಮಗಾರಿ ವಿಳಂಬವಾಗುತ್ತಿವೆ. ಮುಂದಿನ ಆರು ತಿಂಗಳಲ್ಲಿ ಅವಳಿ ನಗರ ಸುಂದರ ನಗರವಾಗಲಿದೆ. ರಸ್ತೆ ಕಾಮಗಾರಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಕಾಮಗಾರಿಯಿಂದ ಟ್ರಾಫಿಕ್ ಸಮಸ್ಯೆ ಆಗಲಿದ್ದು, ಜನರು ಸಹಕರಿಸಿಕೊಂಡು ಹೋಗಬೇಕು. ರಸ್ತೆ ಬದಿಯಲ್ಲಿರುವ ಮರಗಳನ್ನು ಉಳಿಸಿ,
ಕಾಮಗಾರಿ ಕೈಗೊಳ್ಳಲಾಗುವುದು.
ಮೂಲಭೂತ ಸೌಕರ್ಯ ಒದಗಿಸಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಬೆಂಗೇರಿ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ:₹ 50 ಕೋಟಿ ಕೇಂದ್ರ ರಸ್ತೆ ನಿಧಿ ಯೋಜನೆಯ ಎರಡನೇ ಹಂತದ ಭಾಗವಾಗಿ, ಕೇಶ್ವಾಪುರದಿಂದ ಬೆಂಗೇರಿ ಸಿಸಿ ರಸ್ತೆ ನಿರ್ಮಾಣಕ್ಕೆ ಜಗದೀಶ್ ಶೆಟ್ಟರ್ ನಾಗಶೆಟ್ಟಿ ಕೊಪ್ಪದ ರಮೇಶ್ ಭವನದ ಬಳಿ ಭೂಮಿ ಪೂಜೆ ನೆರವೇರಿಸಿದರು. ಇದೇ ಯೋಜನೆಯ ಭಾಗವಾಗಿ ಬಾದಾಮಿ ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಸ್ತೆಯನ್ನು ಸಹ ಅವರು ಲೋಕಾರ್ಪಣೆ ಮಾಡಿದರು.

ಬಾರಾಕೋಟ್ರಿ -ಭವಾನಿನಗರ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ

ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಅನುದಾನದಡಿ ಬಾರಾಕೋಟ್ರಿಯಿಂದ ಭವಾನಿನಗರದ ದುರ್ಗಾ ಬೇಕರಿವರಗೆ ನಿರ್ಮಿಸಲಾಗುತ್ತಿರುವ ಸಿಸಿ ರಸ್ತೆ ನಿರ್ಮಾಣಕ್ಕೆ ಜಗದೀಶ್ ಶೆಟ್ಟರ್ ಭೂಮಿ ಪೂಜೆ ನೆರವೇಸಿ ಕಾಮಗಾರಿಗೆ ಚಾಲನೆ ನೀಡಿದರು. ನಿರ್ಮಿತಿ ಕೇಂದ್ರದಿಂದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.

ಗ್ಯಾಸ್ ಕಿಟ್ ವಿತರಣೆ

ಬಾದಾಮಿ ನಗರದ ಹುಬ್ಬಳ್ಳಿ ಧಾರವಾಡ ಒನ್ ಕಚೇರಿ ಆವರಣದಲ್ಲಿ, ಮಹಾನಗರ ಪಾಲಿಕೆಯ 24.10 ಹಾಗೂ 7.25 ಅನುದಾನದಲ್ಲಿ 10 ಫಲಾನುಭವಿಗಳಿಗೆ ಉಚಿತ ಗ್ಯಾಸ್ ಕಿಟ್‌ಗಳನ್ನು ಜಗದೀಶ್ ಶೆಟ್ಟರ್ ವಿತರಿಸಿದರು.

ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಮಾಜಿ ಮಹಾಪೌರ ಹಾಗೂ ಪಾಲಿಕೆ ಸದಸ್ಯ ವೀರಣ್ಣ ಸವಡಿ ಪಾಲಿಕೆ ಇತರೆ ಸದಸ್ಯರಾದ ಸಂತೋಷ ಚವ್ಹಾಣ, ಉಮಾ ಮುಕುಂದ, ಮೀನಾಕ್ಷಿ ವಂಟಮೂರಿ, ಬೀರಪ್ಪ ಖಂಡೇಕರ ಮಾಜಿ ಪಾಲಿಕೆ ಸದಸ್ಯೆ ಮೇನಕಾ ಹುರಳಿ ಇದ್ದರು.

Related posts

ವಿದ್ಯುತ್ ಚಾಲಿತ ವಾಹನಗಳ ನೋಂದಣಿ; ರಾಜ್ಯಕ್ಕೆ ಎಷ್ಟನೇ ಸ್ಥಾನ? ತಿಳ್ಕೋಬೇಕಾದ ಇಂಪಾರ್ಟೆಂಟ್ ವಿಷ್ಯ

eNewsLand Team

ಗಾಂಧೀಜಿಯವರ ಜೀವನ ಶೈಲಿ ನಮ್ಮೆಲ್ಲರಿಗೂ ಮಾದರಿ: ವರ್ಧಮಾನಗೌಡ ಹಿರೇಗೌಡರ

eNEWS LAND Team

ಮುಖ್ಯಮಂತ್ರಿಗೆ ಕೃಷಿ ಬೆಲೆ ಆಯೋಗದ ವರದಿ ಸಲ್ಲಿಕೆ

eNewsLand Team