ಇಎನ್ಎಲ್ ಧಾರವಾಡ:
ಜನವರಿ 28. 2022 ರಿಂದ ಹಾಸನದಿಂದ ಸೇವೆ ಪ್ರಾರಂಭ ವಾಗುವಂತೆ ಹಾಗೂ ಜನವರಿ 29, 2022 ರಿಂದ ಸೊಲ್ಲಾಪುರದಿಂದ ಸೇವೆ ಪ್ರಾರಂಭವಾಗುವಂತೆ ರೈಲು ಸಂಖ್ಯೆ 11312/11311 ಹಾಸನ – ಸೊಲ್ಲಾಪುರ – ಹಾಸನ ನಿತ್ಯ ಸೇವೆಯ ಎಕ್ಸ್ ಪ್ರೆಸ್ ಅನ್ನು ಸೊಲ್ಲಾಪುರ – ಯಶವಂತಪುರ -ಸೊಲ್ಲಾಪುರ ಗಳ ನಡುವೆ ಎಲೆಕ್ಟ್ರಿಕ್ ಲೋಕೋಮೋಟಿವ್ ನಿಂದ ಸಂಚರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಈ ಮೊದಲು, ಈ ರೈಲು ಪ್ರಾರಂಭದಿಂದ ಕೊನೆಯ ನಿಲ್ದಾಣದವರೆಗೆ ಅಂದರೆ ಹಾಸನದಿಂದ ಸೊಲ್ಲಾಪುರದವರೆಗೆ ಡೀಸೆಲ್ ಲೋಕೋಮೋಟಿವ್ ನೊಂದಿಗೆ ಸಂಚರಿಸುತ್ತಿತ್ತು.
ಹಾಗೆಯೇ ಜನವರಿ 28. 2022ರಿಂದ ಮೈಸೂರಿನಿಂದ ಸೇವೆ ಪ್ರಾರಂಭವಾಗುವಂತೆ ಹಾಗೂ ಜನವರಿ 29, 2022 ರಿಂದ ಬಾಗಲಕೋಟೆಯಿಂದ ಸೇವೆ ಪ್ರಾರಂಭವಾಗುವಂತೆ ರೈಲು ಸಂಖ್ಯೆ 17307/17308 ಮೈಸೂರು – ಬಾಗಲಕೋಟೆ – ಮೈಸೂರು ಬಸವ ಎಕ್ಸ್ ಪ್ರೆಸ್. ಮೈಸೂರು – ಸೊಲ್ಲಾಪುರ – ಮೈಸೂರುಗಳ ನಡುವೆ ಎಲೆಕ್ಟ್ರಿಕ್ ಲೋಕೋಮೋಟಿವ್ ನಿಂದ ಸಂಚರಿಸುತ್ತದೆ. ಈ ಮೊದಲು, ಈ ರೈಲು ಮೈಸೂರು ಮತ್ತು ಯಶವಂತಪುರಗಳ ನಡುವೆ ಎಲೆಕ್ಟ್ರಿಕ್ ಲೋಕೋಮೋಟಿವ್ ನೊಂದಿಗೆ ಸಂಚರಿಸುತ್ತಿತ್ತು.
ನೈಋತ್ಯ ರೈಲ್ವೆಯಲ್ಲಿ ಕಳೆದ ಎರಡು ಹಣಕಾಸು ವರ್ಷದಲ್ಲಿ ಅಂದರೆ. 2019-20 ಹಾಗೂ 2020-21ರಲ್ಲಿ ಪ್ರತಿ ವರ್ಷ 24 ರೈಲುಗಳಂತೆ ಒಟ್ಟು 48 ರೈಲುಗಳನ್ನು ಎಲೆಕ್ಟ್ರಿಕ್ ಎಂಜಿನ್ ನೊಂದಿಗೆ ಸಂಚರಿಸುವಂತೆ ವಿಸ್ತ ರಿಸಲಾಗಿದೆ/ಕಾರ್ಯಗತಗೊಳಿಸಲಾಗಿದೆ.
ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸಂಜೀವ್ ಕಿಶೋರ್ ರವರು ಪ್ರಸ್ತುತ ಹಣಕಾಸು ವರ್ಷದಲ್ಲಿ ಈಗಾಗಲೇ, 22 ರೈಲುಗಳನ್ನು ಎಲೆಕ್ಟ್ರಿಕ್ ಲೋಕೋಮೋಟಿವ್ ನಿಂದ ಸಂಚರಿಸಲು ಎಲೆಕ್ಟ್ರಿಕ್ ಟ್ರ್ಯಾಕ್ ಷನ್ ನಲ್ಲಿ ಪರಿವರ್ತಿಸಲಾಗಿದೆ. ಹಾಗೂ ಇನ್ನೂ ನಾಲ್ಕು ರೈಲುಗಳನ್ನು 28 ಹಾಗೂ 29ನೇ ಜನವರಿಯಿಂದ ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದರು.
ಮೈಸೂರು – ಕೆಎಸ್ಆರ್ ಬೆಂಗಳೂರು – ಧರ್ಮಾವರಂ – ಗುಂತಕಲ್ – ರಾಯಚೂರು – ವಾಡಿ- ಕಲ್ಬುರ್ಗಿ ಹಾಗೂ ಸೊಲ್ಲಾಪುರಗಳ ನಡುವೆ ಶೇ. 76ರಷ್ಟು ಮಾರ್ಗದಲ್ಲಿ ಎಲೆಕ್ಟ್ರಿಕ್ ಎಂಜಿನ್ ನೊಂದಿಗೆ ಬಸವ ಎಕ್ಸ್ ಪ್ರೆಸ್ ಸಂಚರಿಸುತ್ತದೆ. ಹಾಗೆಯೇ ಹಾಸನ – ಸೊಲ್ಲಾಪುರ – ಹಾಸನ – ಎಕ್ಸ್ ಪ್ರೆಸ್ ಯಶವಂತಪುರ – ಧರ್ಮಾವರಂ – ಗುಂತಕಲ್ – ರಾಯಚೂರು – ವಾಡಿ- ಕಲ್ಬುರ್ಗಿ ಹಾಗೂ ಸೊಲ್ಲಾಪುರಗಳ ನಡುವೆ ಶೇ. 78ರಷ್ಟುಮಾರ್ಗದಲ್ಲಿ ಅಂದರೆ ಒಟ್ಟು 826 ಕೀ ಮೀಗಳ ಪ್ರಯಾಣದಲ್ಲಿ 652 ಕಿಲೋಮೀಟರ್ ಗಳ ಮಾರ್ಗ ಎಲೆಕ್ಟ್ರಿಕ್ ಎಂಜಿನ್ ನೊಂದಿಗೆ ಸಂಚರಿಸುತ್ತದೆ.
ಈ ನಾಲ್ಕು ರೈಲುಗಳನ್ನು ಅವುಗಳ ಸೇವೆಯ ಹೆಚ್ಚಿನ ಮಾರ್ಗದಲ್ಲಿ ಎಲೆಕ್ಟ್ರಿಕಲ್ ಎಂಜಿನ್ ನೊಂದಿಗೆ ಸಂಚರಿಸುವುದರಿಂದ ಪ್ರತಿದಿನ ಸುಮಾರು 10,000 ಲೀಟರ್ ಡೀಸೆಲ್ ನ ಉಳಿತಾಯವಾಗುವುದು.
ವಿಶೇಷವಾಗಿ ಈಗಾಗಲೇ ವಿದ್ಯುದೀಕರಣ ಕಾರ್ಯ ಪೂರ್ಣವಾಗಿರುವ ಭಾಗಗಳನ್ನೊಳಗೊಂಡಂತೆ, ಕನಿಷ್ಠ ಪಕ್ಷ ಇನ್ನೂ 10 ರೈಲುಗಳನ್ನು ಮುಂಬರುವ ಎರಡು ತಿಂಗಳುಗಳಲ್ಲಿ ಎಲೆಕ್ಟ್ರಿಕ್ ಎಂಜಿನ್ ನೊಂದಿಗೆ ಸಂಚರಿಸಲು ನೈಋತ್ಯ ರೈಲ್ವೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.
ಈ ಹಣಕಾಸು ವರ್ಷದಲ್ಲಿ ಏಪ್ರಿಲ್ 2021 ರಿಂದ ಇಲ್ಲಿಯವರೆಗೆ ತನ್ನ ಸಂಪರ್ಕ ಜಾಲದ 232 ರೂಟ್ ಕೀ.ಮೀಗಳನ್ನು ನೈಋತ್ಯ ರೈಲ್ವೆ ವಿದ್ಯುದೀಕರಿಸಿದ್ದು ಇನ್ನೆರಡು ತಿಂಗಳುಗಳಲ್ಲಿ ಇನ್ನೂ 200 ರೂಟ್ ಕೀ.ಮೀ. ಗಳ ವಿದ್ಯುದೀಕರಣ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. 2016 ರಲ್ಲಿ ಪೂರ್ಣಗೊಂಡ 200 ರೂಟ್ ಕಿಮೀಗಳಿಂದ ಇಲ್ಲಿಯವರೆಗೂ 1452 ರೂಟ್ ಕೀ.ಮೀ. ಗಳ ವಿದ್ಯುದೀಕರಣವಾಗಿದ್ದು ಇದು ನೈಋತ್ಯ ರೈಲ್ವೆ ಯ ಒಟ್ಟು ರೂಟ್ ಕಿಮೀ. ಗಳ ಶೇ. 40 ಭಾಗವಾಗಿದೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಇ.ವಿಜಯಾ ತಿಳಿಸಿದ್ದಾರೆ.