24.3 C
Hubli
ಮೇ 26, 2024
eNews Land
ಸಣ್ಣ ಸುದ್ದಿ ಸುದ್ದಿ

ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮ ವೀಕ್ಷಿಸಿದ ಗೃಹಲಕ್ಷ್ಮೀಯರು

ಇಎನ್‌ಎಲ್‌ ಅಣ್ಣಿಗೇರಿ: ಪಟ್ಟಣದ ಪಂಪ ಸ್ಮಾರಕ ಭವನ, ಶಾದಿಮಹಲ್, ಜನತಾ ಸಿನಿಮಾ ಮಂದಿರ, ಅಂಬೇಡ್ಕರ ಭವನ, ರಾಯಲ್ ಹಾಲ್ ಕೇಂದ್ರಗಳಲ್ಲಿ ಕಿಕ್ಕಿರಿದು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಭಾಗವಹಿಸಿದ್ದರು. ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮ ವಿಕ್ಷಣೆ ಮಾಡಿ ಯಶಸ್ವಿಗೊಳಿಸಿದರು. 

ಪ್ರತಿ ಕೇಂದ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಂಡ ಮಹಿಳೆಯರಿಗೆ ನೊಡಲ್ ಅಧಿಕಾರಿಗಳು ಸ್ವಾಗತಕೋರಿದರು. ಗೃಹಲಕ್ಷ್ಮೀ ಮಹಿಳೆಯರು ನಾಡಗೀತೆ ಹಾಡಿದರು.ನಂತರ ಪ್ರತಿಜ್ಞಾವಿಧಿ  ಭೋದಿಸಿದರು. ನೋಡಲ್ ಅಧಿಕಾರಿಗಳಾದ ಸಿ.ಎನ್.ಬಾರಕೇರ, ಐ.ಎಂ ಪಠಾಣ, ಅಶೋಕ ದೊಡ್ಡಮನಿ, ಕೆ.ಎಸ್.ಬಾಳೋಜಿ, ಶ್ರೀಮತಿ ಎ.ಕೆ.ಭೂಸನೂರಮಠ  ಉಪಸ್ಥಿತರಿದ್ದು ಕೇಂದ್ರಗಳಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದ್ದರು. ಪುರಸಭೆ ಪ್ರತಿ  ಕೇಂದ್ರಗಳಲ್ಲಿ ಮಹಿಳೆಯರಿಗೆ ಉಪಹಾರ, ನೀರು ವ್ಯವಸ್ಥೆ ಕಲ್ಪಸಿತ್ತು.
ಈ ಸಂದರ್ಭದಲ್ಲಿ ಶಾಸಕ ಎನ್.ಎಚ್.ಕೋನರಡ್ಡಿ, ತಹಶೀಲ್ದಾರ ಶಿವಾನಂದ ಹೆಬ್ಬಳ್ಳಿ, ಪುರಸಭೆ ಮುಖ್ಯಾಧಿಕಾರಿ ವಾಯ್.ಜಿ.ಗದ್ದಿಗೌಡರ, ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಎಸ್.ಎಚ್.ನಾಶಿಪುಡಿ.  ಪುರಸಭೆ  ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಚೇರಮನ್‌ರು, ಆಡಳಿತ ಮಂಡಳಿ ಸರ್ವಸದಸ್ಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. 

Related posts

ಶಿಕ್ಷಕರ ಮತಕ್ಷೇತ್ರ : ಮತದಾರರ ಹೆಸರು ಸೇರಿಸಲು ಅವಕಾಶ

eNewsLand Team

ಗೋವಾದಲ್ಲಿ ದೇಶದ ಯಾವುದೇ ರಾಜಕೀಯ ಪಕ್ಷವು ಚುನಾವಣೆಯಲ್ಲಿ ಸ್ಫರ್ಧಿಸಬಹುದು

eNEWS LAND Team

ಅಣ್ಣಿಗೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ

eNEWS LAND Team