34 C
Hubli
ಮೇ 3, 2024
eNews Land
ಸುದ್ದಿ

ಕೆನರಾ ಬ್ಯಾಂಕ ಸಂಯೋಗದಲ್ಲಿ ಅಣ್ಣಿಗೇರಿ ಕ್ಲಸ್ಟರ್-2 ಕ್ರೀಡಾಕೂಟ

ಇಎನ್‌ಎಲ್‌ ಅಣ್ಣಿಗೇರಿ: ಗ್ರಾಮೀಣ ಮಕ್ಕಳು ಕ್ರೀಡೆಗಳಿಂದ ವಂಚಿತರಾಗಬಾರದು. ಮಕ್ಕಳಲ್ಲಿರುವ ಪ್ರತಿಭೆ,ಶಕ್ತಿ, ಸಾಮರ್ಥ್ಯ ಗುರ್ತಿಸಿ, ಸೂಕ್ತ ತರಬೇತಿ ನೀಡಿ, ಕ್ರೀಡಾ ಪಂದ್ಯಾವಳಿಯಲ್ಲಿ ಭಾಗವಹಿಸಿ, ತಮ್ಮ ಕ್ರೀಡಾ ಶಕ್ತಿ ಪ್ರದರ್ಶನದಿಂದ ಮುನ್ನಗ್ಗಬೇಕಾದರೇ, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ,ಗೌರವಿಸುವ ಕ್ರೀಡಾಕೂಟ ಹೆಚ್ಚು ಪರಿಣಾಮಕಾರಿಯಾಗಬೇಕಿದೆ. ತಾಲೂಕ, ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕ್ರೀಡಾ ಸಾಧನೆಯಿಂದ ಮಕ್ಕಳು ಶಾಲೆ, ಗ್ರಾಮ, ನಾಡು, ದೇಶದ ಕೀರ್ತಿ ಹೆಚ್ಚಿಸಿ, ಬೆಳೆಯಬೇಕಿದೆ. ಆ ಹಿನ್ನಲೆಯಲ್ಲಿ ಗ್ರಾಮೀಣ ಮಕ್ಕಳ ಕ್ರೀಡಾಕೂಟಕ್ಕೆ ಕೆನರಾ ಬ್ಯಾಂಕ ಸಿಬ್ಬಂದಿ ತನು-ಮನ-ಧನ ಸಹಕಾರ ಸಂಯೋಗದಲ್ಲಿ ಕ್ರೀಡಾಪಟುಗಳಿಗೆ ಪ್ರಶಸ್ತಿ ಫಲಕ, ಉಡುಪು, ಸೌಲಭ್ಯ ಕಲ್ಪಸಿ.ಪ್ರೇರಣೆ ನೀಡಿ, ಕ್ರೀಡಾ ಪಂದ್ಯಾವಳಿ ಆಯೋಜಿಸಿದ್ದು ಸಂತಸ ತಂದಿದೆ  ಎಂದು ಕೆನರಾ ಬ್ಯಾಂಕ್ ಮ್ಯಾನೇಜರ್ ಗಿರೀಶ ವಿ. ಬಾಳಗಿ ಹೇಳಿದರು.

ತಾಲೂಕಿನ ಸಾಸ್ವಿಹಳ್ಳಿ ಗ್ರಾಮದಲ್ಲಿ ಅಣ್ಣಿಗೇರಿ ಕ್ಲಸ್ಟರ್-೨ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳ  ಕ್ರೀಡಾಕೂಟ  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ, ವಿಜೇತ ಕ್ರೀಡಾಪಟುಗಳಿಗೆ ಕೆನರಾ ಬ್ಯಾಂಕ್ ಮ್ಯಾನೇಜರ ಗಿರೀಶ ವಿ. ಬಾಳಗಿ ಬಹುಮಾನ ವಿತರಣೆ ಮಾಡಿದರು. ಶಾಲಾ ಅಭಿವೃದ್ಧಿ ಸಮಿತಿ ಮಂಡಳಿ ಸದಸ್ಯರು, ಪ್ರಧಾನ ಗುರುಗಳು, ಶಿಕ್ಷಕರ ವೃಂದ ಕೆನರಾ ಬ್ಯಾಂಕ್ ಮ್ಯಾನೇಜರ ಹಾಗೂ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಅಣ್ಣಿಗೇರಿ ಕ್ಲಸ್ಟರ್-2 ವಿಭಾಗದ ಮುಖ್ಯಸ್ಥರು, ದೊಡ್ಡಫಕ್ಕೀರಪ್ಪ ಗಾಣಗೇರ, ವಿ.ಡಿ.ಅಂದಾನಗೌಡ್ರ, ಗ್ರಾ.ಪ0 ಸದಸ್ಯರು, ವಿನೋದ ಬೋಸ್ಲೆ, ಗ್ರಾಮದ ಮುಖಂಡರು,  ಕ್ರೀಡಾಪಟುಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಪಾಲಕರು, ಶಾಲಾ ಅಭಿವೃದ್ಧಿ ಆಡಳಿತ ಮಂಡಳಿ ಅಧ್ಯಕ್ಷರು, ಸರ್ವಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.  
 

Related posts

CANCELLATION / PARTIAL CANCELLATION / DIVERSION OF TRAINS

eNewsLand Team

ವಿದ್ಯಾರ್ಥಿನಿಯರಲ್ಲಿ ದೈರ್ಯ ತುಂಬಲು ಓಬವ್ವ ಆತ್ಮರಕ್ಷಣಾ ಕಲೆ ತರಬೇತಿ- ಜಿಲ್ಲಾಧಿಕಾರಿ 

eNewsLand Team

ಭಜರಂಗದಳ ಮತ್ತು ಪಿಎಫ್ಆಯ್ ಒಂದೇ ತಕ್ಕಡಿಯಲ್ಲಿ ತೂಗಿದ ಕಾಂಗ್ರೆಸ್ ಮುಖಂಡ ಯಾರು?

eNEWS LAND Team