24.3 C
Hubli
ಮೇ 26, 2024
eNews Land
ಸುದ್ದಿ

ಅಣ್ಣಿಗೇರಿ ತಾಲೂಕಿನ  ಸ್ವೀಪ್ ಸಮಿತಿ ಸಭೆ

ಇಎನ್ಎಲ್ಅಣ್ಣಿಗೇರಿ: 2023ನೇ ಸಾಲಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಅಣ್ಣಿಗೇರಿ ತಾಲೂಕ ಕ್ಷೇತ್ರ ವ್ಯಾಪ್ತಿಯಲ್ಲಿ  ಸ್ವೀಪ್ ಸಮಿತಿ ಚಟುವಟಿಕೆ ಕೈಗೊಂಡ ಬಗ್ಗೆ ಕರ್ನಾಟಕ ರಾಜ್ಯ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ ಚರ್ಚಿಸಿದರು.

ಪಟ್ಟಣದ  ಪಂಪ ಸ್ಮಾರಕಭವನದಲ್ಲಿ ಕರ್ನಾಟಕ ವಿಧಾನಸಭಾ ಕ್ಷೇತ್ರ ಸಾರ್ವತ್ರಿಕ ಚುನಾವಣೆ-2023 ಸಾಲಿನ ಸ್ವೀಪ್ ಚಟುವಟಿಕೆ ಕುರಿತು ಆಯೋಜಿಸಿದ ಅಣ್ಣಿಗೇರಿ ತಾಲೂಕಿನ  ಸ್ವೀಪ್ ಸಮಿತಿ ಸಭೆಯಲ್ಲಿ ಮಾತನಾಡಿದರು.

ನಂತರ ಮಾತನಾಡಿ, ಕಳೆದ 2018ನೇ ಸಾಲಿನ ವಿಧಾಸಭಾ ಕ್ಷೇತ್ರ ಚುನಾವಣೆಗಿಂತ 2023ನೇ ಸಾಲಿನಲ್ಲಿ ಶೇ.3% ರಷ್ಟು ಹೆಚ್ಚಿದೆ. ತಾಲೂಕ ಸ್ವೀಪ್ ಸಮಿತಿ ಕೈಗೊಂಡ ಪರಿಣಾಮಕಾರಿ ಚಟುವಟಿಕೆಯನ್ನು ಅಭಿನಂದಿಸಿದರು. ಮತಗಟ್ಟೆಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು. 2024ನೇ ಸಾಲಿನ ಲೋಕಸಭಾ ಚುನಾವಣೆ  ಪ್ರಮಾಣ ಶೇ.  85% ರಷ್ಟು ಹೆಚ್ಚಿಸಲು ಅಗತ್ಯಕ್ಕೆ ಪೂರಕವಾದ ಸೌಲಭ್ಯಗಳನ್ನು ಒದಗಿಸಿ ಕ್ರಮಕೈಗೊಳ್ಳಬೇಕೆಂದರು.

ತಾಲೂಕಿನ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಪಂ ಮತಗಟ್ಟೆ ಕೇಂದ್ರಗಳಿಗೆ ಅವಶ್ಯಕ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳಬೇಕೆಂದು ಹೇಳಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕುರ್ತಕೋಟಿ ಮಾತನಾಡಿ, ಮತಗಟ್ಟೆ ಕೇಂದ್ರಗಳ ಕಟ್ಟಡದ ಸ್ಥಿತಿಗತಿ, ಕುಡಿಯುವ ನೀರು, ವಿದ್ಯುತ್ ಸೌಲಭ್ಯ, ರಾಂಪ್, ವೀಲ್ ಚೇರ್, ನಿರೀಕ್ಷಣಾ ಕೊಠಡಿ, ನೆರಳಿನ ಶಾಮಿಯಾನ, ವ್ಯವಸ್ಥೆಗೆ ಕ್ರಮವಹಿಸಲು ತಹಶೀಲ್ದಾರ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಡಿ.ಬಿ.ಶಿರೂರ ಸರಕಾರಿ ಪ್ರೌಢಶಾಲೆಗೆ ತೆರಳಿ ಚುನಾವಣೆ ಸಂದರ್ಭದಲ್ಲಿ ಶಾಲಾ ಶಿಕ್ಷಕರ ವೃಂದ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ಮತ್ತು ಮತದಾನ ಕುರಿತು ಕೈಗೊಂಡ ಭಾಷಣ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಗೋಡಿನ ಮೇಲಿನ ಭಿತ್ತಿ ಚಿತ್ರಗಳನ್ನು ವಿಕ್ಷಿಸಿದರು.

ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕುರ್ತಕೋಟಿ, ತಹಶೀಲ್ದಾರ ಮಹಾಂತೇಶ ಮಠದ, ಪುರಸಭೆ ಮುಖ್ಯಾಧಿಕಾರಿ ವಾಯ್.ಜಿ.ಗದ್ದಿಗೌಡರ, ಕೃಷಿ ಅಧಿಕಾರಿ ಕೆ.ಎಸ್.ಪಾಟೀಲ, ತೋಟಗಾರಿಕೆ ಅಧಿಕಾರಿ ಸಂಜೀವ ಗುಡಿಮನಿ, ಶಿಕ್ಷಣಾಧಿಕಾರಿಗಳು ಎಸ್,ಮಲ್ಲಾಡ,  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಬಿಎಲ್.ಓ. ಮೇಲ್ವಿಚಾರಕರು. ಉಪಸ್ಥಿತರಿದ್ದರು.

Related posts

ಅಣ್ಣಿಗೇರಿಯಲ್ಲಿ ಸಂಭ್ರಮದ ಹೋಳಿ ಹಬ್ಬ

eNEWS LAND Team

ರಸ್ತೆ ಮಧ್ಯ ಹೋಮ ಮಾಡಿ ಬಿಜೆಪಿ ಮಾನ ಹರಾಜು ಹಾಕಿದ ಕಾಂಗ್ರೆಸ್!!

eNewsLand Team

ಧಮ್ ಮಾರೋ ಧಮ್!! ಗಾಂಜಾ ಸಾಗಿಸುತ್ತಿದ್ದವ ಮುದುಕ ಅಂದರ್!!

eNewsLand Team