27 C
Hubli
ಡಿಸೆಂಬರ್ 7, 2023
eNews Land
ಸುದ್ದಿ

ಹೂಗಾರ ಸಮಾಜ ಸೇವಾ ಸಂಘದ ಸಭೆ

ಇಎನ್ಎಲ್ ಅಣ್ಣಿಗೇರಿ: ಪಟ್ಟಣದ ವಿದ್ಯಾನಗರದ ಜಯರಾಜ ಹೂಗಾರ ನಿವಾಸದಲ್ಲಿ ನವಲಗುಂದ ಅಣ್ಣಿಗೇರಿ ತಾಲೂಕ ಹೂಗಾರ ಸಮಾಜ ಸೇವಾ ಸಂಘದ ಸಭೆಯನ್ನು ಆಯೋಜಿಸಲಾಗಿತ್ತು. ಸಂಘದ ಅಧ್ಯಕ್ಷ ಸೋಮು ಹೂಗಾರ ಹೂಗಾರ ಸಮಾಜ ಸಂಘಟನೆ ನಿಮಿತ್ಯ ಯುವ ಸಂಘಟನೆ ವೇದಿಕೆ ಅವಶ್ಯವಾಗಿದ್ದು, ರಾಜ್ಯ ಹೂಗಾರ ಸಮಾಜ ಸೇವಾ ಸಂಘದ ಯುವ ಘಟಕ ರಚಿಸುವ ಕುರಿತು ಚರ್ಚಿಸಿದರು.
ಹೂಗಾರ ಸಮಾಜ ಸಭೆ ಅಧ್ಯಕ್ಷತೆವಹಿಸಿದ್ದ ಜಯರಾಜ ಹೂಗಾರ ರಾಜ್ಯ ಮಟ್ಟದಲ್ಲಿ ರಾಜ್ಯ ಸಂಘಕ್ಕೆ ಸಂಘಟನಾತ್ಮಕ ಶಕ್ತಿ ದೊರಕಬೇಕಾದರೆ ಯುವ ಸಂಘಟನೆ ಅವಶ್ಯವಿದ್ದು, ಯುವ ಶಕ್ತಿ ಸಮಾಜದ ಶಕ್ತಿ ಅನೇಕ ಸಮಾಜ ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ಅವರ ಕರ್ತವ್ಯ ಪ್ರಾಮುಖ್ಯವಾಗಿದೆ. ಆ ಹಿನ್ನಲೆಯಲ್ಲಿ ಸಮಾಜ ಹಿತದೃಷ್ಟಿಯಿಂದ ರಾಜ್ಯ ಹೂಗಾರ ಸಮಾಜ ಸೇವಾ ಯುವ ವೇದಿಕೆ ರಚಿಸುವುದು ಪ್ರಸ್ತುತ ಸೂಕ್ತವಾಗಿದ್ದು, ಆ ಹಿನ್ನಲೆಯಲ್ಲಿ ಚಿಂತನೆ ಚರ್ಚೆ ಸಭೆ ಮುಖ್ಯವಾಗಿದ್ದು, ಸಮಾಜದಲ್ಲಿ ಯುವ ಶಕ್ತಿ ತೊಡಗುವಲ್ಲಿ ತಾವೆಲ್ಲಾ ಮುನ್ನಗ್ಗಬೇಕಿದೆ ಎಂದರು. ಸಭೆಯಲ್ಲಿ ಪಾಲ್ಗೊಂಡ ಹೂಗಾರ ಸಮಾಜ ಭಾಂದವರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸೋಮು ಹೂಗಾರ, ಬಸಪ್ಪ ರಬರವಿ, ರಾಜಶೇಖರ ರಬರವಿ, ರೇಣುಕಾ ಹೂಗಾರ, ರಶ್ಮಿ ಹೂಗಾರ, ಶಕುಂತಲಾ ಹೂಗಾರ, ಪ್ರಸಾದ ಹೂಗಾರ, ಶ್ವೇತಾ ಹೂಗಾರ ಮೈತ್ರಾ ಹೂಗಾರ, ಶೈಲಾ ಹೂಗಾರ ಶಾಂತಮ್ಮ ಹೂಗಾರ, ಮಲ್ಲಮ್ಮ ಹೂಗಾರ, ಸಮಾಜ ಬಾಂಧವರು ಉಪಸ್ಥಿತರಿದ್ದರು.

Related posts

ಸಂತ ಶಿಶುನಾಳ ಶರೀಫರ ಪುರಾಣ ಪ್ರವಚನ

eNEWS LAND Team

ಭಾರತದ ಹರ್ನಾಜ್ ಕೌರ್ ಈಗ ಜಗದೇಕ ಸುಂದರಿ!!

eNewsLand Team

ಹಿರಿಯರ ಸಮಸ್ಯೆ ಪರಿಹಾರಕ್ಕೆ “ಅನ್ವಯಾ” ಚಾಯ್ ಪೇ ಚರ್ಚಾ

eNEWS LAND Team