24 C
Hubli
ಏಪ್ರಿಲ್ 26, 2024
eNews Land
ಆರೋಗ್ಯ

ಬಾದಾಮ್.. ಬಾದಾಮ್.. ಕಚ್ಚಾ ಬಾದಾಮ್…

ಬಾದಾಮ್ ಹಾಗೇ ತಿನ್ನಬೇಡಿ? ನೀರಿನಲ್ಲಿ ನೆನೆಸಿ ತಿನ್ನಿ ಯಾಕೆಂದರೆ?

ಇಎನ್ಎಲ್ ಡೆಸ್ಕ್: ಬಹಳಷ್ಟು ಆಹಾರ ಪದಾರ್ಥಗಳನ್ನು ಹಸಿಯಾಗಿ ತಿನ್ನದೆ ಅವುಗಳನ್ನು ಸಿಪ್ಪೆ ಸಮೇತ ತಿನ್ನಿ ಎಂದು ವೈದ್ಯರು ಹೇಳುತ್ತಿರುತ್ತಾರೆ. ಏಕೆಂದರೆ ಸಿಪ್ಪೆಯಲ್ಲಿ ಬೇಕಾದ ಪ್ರಮುಖ ಪೋಷಕಾಂಶಗಳು ಲಭ್ಯವಾಗುತ್ತವೆ. ಆದರೆ… ಬಾದಾಮ್ ಮಾತ್ರ ಸಿಪ್ಪೆ ಇಲ್ಲದಂತೆ ತಿನ್ನಬೇಕಂತೆ..! ಹೌದು ನೀವು ಕೇಳುತ್ತಿರುವುದು ಕರೆಕ್ಟ್..! ಇದರ ಜತೆಗೆ ಅದನ್ನು ನೆನೆಸಿ ತಿಂದರೆ ಇನ್ನೂ ಉತ್ತಮ ಎನ್ನುತ್ತಿದ್ದಾರೆ ವೈದ್ಯರು. ಹೀಗೇಕೆ ತಿನ್ನಬೇಕು, ಇದರ ಹಿಂದೆ ಅಡಗಿರುವ ರಹಸ್ಯ ಏನು ಎಂಬುದನ್ನು ಈಗ ತಿಳಿದುಕೊಳ್ಳೋಣ..!
ಬಾದಾಮ್ ಸಿಪ್ಪೆಯಲ್ಲಿ ಕೆಲವು ರೀತಿಯ ಎಂಜೈಮ್‌ಗಳು ಇರುತ್ತವೆ. ಹಾಗಾಗಿ ಬಾದಾಮ್ ಹಾಗೇ ತಿಂದರೆ ಅದರೊಂದಿಗೆ ಸಿಪ್ಪೆ ಸಹ ನಮ್ಮ ಜೀರ್ಣಕೋಶ ಸೇರುತ್ತದೆ. ಆಗ ಹೊಟ್ಟು ಬಾದಾಮ್ ಆಕ್ರಮಿಸುತ್ತದೆ. ಆಗ ಬಾದಾಮ್ ಸರಿಯಾಗಿ ಜೀರ್ಣವಾಗುವುದಿಲ್ಲ. ಬಾದಿಯಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ಸೇರಲ್ಲ. ಜೀರ್ಣ ಸರಿಯಾಗಿ ಆಗದಿದ್ದ ಕಾರಣ ಗ್ಯಾಸ್, ಮಲಬದ್ಧತೆಯಂತಹ ಸಮಸ್ಯೆಗಳು ಎದುರಾಗುತ್ತವೆ.
ಆ ರೀತಿ ಅಲ್ಲದೆ ಬಾದಾಮ್ ಕನಿಷ್ಠ 8 ಗಂಟೆಗಳ ಕಾಲ ನೆನೆಸಿದರೆ ಆಗ ಅದರ ಸಿಪ್ಪೆ ಸುಲಭವಾಗಿ ಬೇರ್ಪಡುತ್ತದೆ. ಆಗ ಸೇವಿಸಬಹುದು. ನೀರಿನಲ್ಲಿ ಬಾದಾಮ್ ನೆನೆಸುವುದರಿಂದ ಮೃದುವಾಗುತ್ತದೆ. ಸುಲಭವಾಗಿ ಜೀರ್ಣವಾಗುವುದಷ್ಟೇ ಅಲ್ಲ, ಪೋಷಕಾಂಶಗಳು ದೇಹಕ್ಕೆ ಧಾರಾಳವಾಗಿ ಸಿಗುತ್ತವೆ. ಈ ವಿಷಯವನ್ನು ಕೆಲವು ಸಂಶೋಧಕರು ಖಚಿತಪಡಿಸಿದ್ದಾರೆ. ಇನ್ನು ಮುಂದೆ ನೀವು ಬಾದಮ್ ತಿನ್ನಬೇಕಾದರೆ ಅವುಗಳನ್ನು ಕನಿಷ್ಠ 8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ತಿನ್ನುವುದು ಒಳಿತು. ಈ ರೀತಿ ತಿನ್ನುವುದರಿಂದ ಮಕ್ಕಳು, ವೃದ್ಧರಿಗೆ ಸಹ ಬಾದಾಮ್ ಸುಲಭವಾಗಿ ಜೀರ್ಣವಾಗುತ್ತದೆ.

ಕೃಪೆ:ಸಾಮಾಜಿಕ ಜಾಲತಾಣ

Related posts

ಸಕ್ಕರೆ ಖಾಯಿಲೆಗೆ ಬದನೆಕಾಯಿ ಉಪಯುಕ್ತ

eNEWS LAND Team

ಕೋವಿಡ್: ಧಾರವಾಡದಾಗ ನಿನ್ನೆ ಎಷ್ಟ ಮಂದಿ ಪಾಸಿಟಿವ್? ಡಿಸಿ ಏನ್ ಹೇಳ್ಯಾರ?

eNewsLand Team

ಧಾರವಾಡಕ್ಕೂ ಒಕ್ಕರಿಸಿದ ಒಮಿಕ್ರಾನ್ ! ಡಿಸಿಯೇನೋ ಯಾರೂ ಹೆದ್ರಬೇಡಿ ಅಂತಿದಾರೆ..! ಆದ್ರೆ??

eNewsLand Team