27 C
Hubli
ಡಿಸೆಂಬರ್ 7, 2023
eNews Land
ಆರೋಗ್ಯ

ಕೋವಿಡ್: ಧಾರವಾಡದಾಗ ನಿನ್ನೆ ಎಷ್ಟ ಮಂದಿ ಪಾಸಿಟಿವ್? ಡಿಸಿ ಏನ್ ಹೇಳ್ಯಾರ?

ಇಎನ್ಎಲ್ ಧಾರವಾಡ: ಎಸ್ ಡಿಎಂ ಕಾಲೇಜಿನಲ್ಲಿ ಸೊಂಕು ಹೆಚ್ಚಳ ಹಿನ್ನಲೆ ಜಿನ್ಯೂಂ ಸಿಕ್ವೇನ್ಸ್ ಟೆಸ್ಟ್ ಮಾಡಲು ಸ್ಯಾಂಪಲ್ ಕಳುಹಿಸಿ ಕೊಡಲಾಗಿತ್ತು

ಟೆಸ್ಟ್ ವರದಿ ಕಳೆದ ರಾತ್ರಿ ಬಂದಿದೆ. ಯಾರಗೂ ಪಾಸಿಟಿವ್ ಬಂದಿಲ್ಲ ಜನರು ಆತಂಕ ಪಡಬಾರದು ಎಂದು ಹುಬ್ಬಳ್ಳಿಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಫಸ್ಟ್ ಡೋಸ್ ಶೇಕಡಾ 90% ಜನರಿಗೆ ಆಗಿದೆ.
ಮನೆ ಮನೆಗೆ ಹೋಗಿ ಲಸಿಕೆ ವಿತರಣೆ ಮಾಡುತ್ತಿದ್ದೇವೆ

ಎರಡೂವರೆ ಲಕ್ಷ ಲಸಿಕೆ ನಮ್ಮ ಬಳಿ ಲಭ್ಯವಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿನ್ನೆ ೪ ಜನರಿಗೆ ಪಾಸಿಟಿವ್ ಬಂದಿದೆ. ಧಾರವಾಡದಲ್ಲಿ ಹೊಸದಾಗಿ ಇಬ್ಬರಿಗೆ ಪಾಸಿಟಿವ್ ಬಂದಿದೆ ಎಂದರು.

ಧಾರವಾಡದ ಎಸ್ ಡಿಎಂ ಆಸ್ಪತ್ರೆಯ ಸುತ್ತಲಿನ
ಶಾಲಾ ಕಾಲೇಜುಗಳು ಮತ್ತೆ ನಾಳೆಯಿಂದ ಆರಂಭ ಮಾಡುತ್ತೇವೆ.

ಜಿಲ್ಲೆಯಲ್ಲಿ ವಾಣಿಜ್ಯ ವ್ಯವಹಾರಗಳಿಗೆ ನಿರ್ಬಂಧ ಹೇರಲ್ಲ. ನಿರ್ಬಂಧ ಹೇರಲು ಅವಕಾಶ ಇಲ್ಲ..
ಧಾರವಾಡ ಜಿಲ್ಲೆಯಲ್ಲಿ ಪ್ರತಿನಿತ್ಯ 5ಸಾವಿರ ಜನರಿಗೆ ಟೆಸ್ಟ್ ಮಾಡುತ್ತಿದ್ದೇವೆ ಎಂದರು.

Related posts

ಗೋಡಂಬಿ ರುಚಿ ಮತ್ತು ಉತ್ತಮ ಪೌಷ್ಟಿಕ ಆಹಾರವೂ ಹೌದು…!

eNEWS LAND Team

ಕರ್ನಾಟಕದ ಮೂಲಕ ದೇಶಕ್ಕೆ ಒಮಿಕ್ರಾನ್ ಎಂಟ್ರಿ! ಇನ್ಮೇಲಾದ್ರೂ ಹುಷಾರಾಗಿರಿ

eNewsLand Team

ಎಸ್ಡಿಎಂ: ಕೋವಿಡ್ 204 ಕ್ಕೆ ಏರಿಕೆ, ಮತ್ತೂ ಹೆಚ್ಚಾಗೋ ಸಾಧ್ಯತೆ

eNewsLand Team