27 C
Hubli
ಮಾರ್ಚ್ 28, 2023
eNews Land
ಆರ್ಥಿಕತೆ

ಬಿಟ್ ಕಾಯಿನ್: ಕಾಂಗ್ರೆಸ್ ಇಲ್ಲದ ವಿವಾದವನ್ನು ಜೀವಂತವಾಗಿಡಲು ಪ್ರಯತ್ನಿಸಿದೆ

Listen to this article

ಬೆಂಗಳೂರು ನ.15: ಪ್ರತಿಪಕ್ಷದ ಬಳಿ ದಾಖಲೆಗಳಿದ್ದರೆ ತನಿಖಾ ಸಂಸ್ಥೆಗಳಿಗೆ ಸಲ್ಲಿಸುವಂತೆ ತಾವು ಹಾಕಿದ್ದ ಸವಾಲನ್ನು ಇಂದು ಪುನರುಚ್ಚರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು,

ಬಿಟ್ ಕಾಯಿನ್ ಬಗ್ಗೆ ಇಲ್ಲದ ವಿವಾದವನ್ನು ಪದೇ ಪದೇ ಪ್ರಸ್ತಾಪಿಸಿ ಅದನ್ನು ಜೀವಂತವಾಗಿಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು.

ತಿರುಪತಿಯಲ್ಲಿ ದಕ್ಷಿಣ ವಲಯ ಪರಿಷತ್ತಿನ 29 ನೇ ಸಭೆಯಲ್ಲಿ ಭಾಗವಹಿಸಿ ಹಿಂತಿರುಗಿದ ಸಂದರ್ಭದಲ್ಲಿ, ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, “ಈ ಪ್ರಶ್ನೆಗಳನ್ನು ಅವರಿಗೇ ಕೇಳಿ. ದಾಖಲೆಗಳಿದ್ದರೆ ಇ.ಡಿ. ಅಥವಾ ಇತರ ತನಿಖಾ ಸಂಸ್ಥೆಗಳಿಗೆ ನೀಡಲಿ. ನಾವು ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸಲಾಗುವುದು ಎಂದರು”

“ಕಾಂಗ್ರೆಸ್ ಮಾಡಿರುವ ಆರೋಪಗಳು ಇಲ್ಲದ ವಿವಾದವನ್ನು ಜೀವಂತವಾಗಿಡುವ ಪ್ರಯತ್ನ. ಇದು ರಾಜಕೀಯ ಬಿಟ್ಟರೆ ಬೇರೇನೂ ಅಲ್ಲ” ಎಂದು ನುಡಿದರು.

ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿಗಳ ವಿರುದ್ಧ ಕಥೆ ಕಟ್ಟುತ್ತಿದ್ದಾರೆಯೇ ಪ್ರಶ್ನೆಗೆ ಉತ್ತರಿಸುತ್ತಾ, ” ಕಥೆಯೇ ಇಲ್ಲದ್ದಿದ್ದಾಗ ಅದನ್ನು ನಿರೂಪಿಸುವುದು ಹೇಗೆ ಸಾಧ್ಯ” ಎಂದರು.

Related posts

Market Opening Bell

eNEWS LAND Team

Market Opening Bell

eNEWS LAND Team

Market Opening Bell

eNEWS LAND Team