27 C
Hubli
ಡಿಸೆಂಬರ್ 7, 2023
eNews Land
ಸಣ್ಣ ಸುದ್ದಿ

ಗುರುವಂದನಾ ಕಾರ್ಯಕ್ರಮ

ಮುನವಳ್ಳಿ : ಪಟ್ಟಣದ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಮುನವಳ್ಳಿ ಜೆ.ಎಸ್.ಪಿ. ಸಂಘದ ಕಾನ್ವೆಂಟ್ ಮಾದರಿಯ ಪ್ರಾಥಮಿಕ ಶಾಲೆ 1999-2000 ಹಾಗೂ 2000-2001 ನೇ ಸಾಲಿನ 7ನೇ ತರಗತಿಯ ಬ್ಯಾಚಿನ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದರು.
ಶಿಕ್ಷಕರ ವೃಂದವನ್ನು ಪುಷ್ಟ ಸಿಂಚನ ಮಾಡುವ ಮೂಲಕ ವಿದ್ಯಾರ್ಥಿಗಳು ಸ್ವಾಗತಕೋರಿ ಬರಮಾಡಿಕೊಂಡರು.
ಸಾನಿಧ್ಯ ಮುನವಳ್ಳಿ ಸೋಮಶೇಖರ ಮಠದ ಮುರಘರಾಜೇಂದ್ರ ಶ್ರೀಗಳು ಮಾತನಾಡಿ ಕಲಿಸಿದ ಗುರುಗಳಿಗೆ ಭಕ್ತಿಪೂರ್ವಕವಾಗಿ ಗುರುವಂದನಾ ಕಾರ್ಯಕ್ರಮ ಮಾಡಿದ್ದು ಶ್ಲಾಘನೀಯ. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಶಿಕ್ಷಕ ವೃಂದವನ್ನು ಗೌರವಿಸುವದರ ಜೊತೆಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸುತ್ತಿರೋದು ಸಂತಸ ತಂದಿದೆ. ವಿದ್ಯಾರ್ಥಿಗಳಿ ಎಷ್ಟೇ ಎತ್ತರ ಮಟ್ಟಕ್ಕೆ ಸಮಾಜದಲ್ಲಿ ಬೆಳೆದರೂ ಕಲಿಸಿದ ಗುರುಸ್ಮರಣೆ ಮಾಡುತ್ತಿರೋದು ಭಾರತೀಯ ಸಂಸ್ಕೃತಿ ಮೌಲ್ಯಗಳಿಗೆ ಹಿಡಿದ ಕೈಗನಡಿ ಎಂದು ನುಡಿದರು.
ಸನ್ಮಾನಿತರಾದ ಶಿಕ್ಷಕಿ ಲಲಿತಾ ಸಾಲಿಮಠ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಶ್ರಮವಹಿಸಿ, ಕಷ್ಟಪಟ್ಟು ಅಧ್ಯಾಯನ ಮಾಡಿ, ಸಮಾಜದ ಸವಾಂಗೀಣಿ ಕ್ಷೇತ್ರದಲ್ಲಿ,ಹಾಗೂ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಗುರುಸ್ಮರಣೆ ಮೂಲಕ ಗುರುವಂದನೆ ಸಲ್ಲಿಸುತ್ತಿರುವ ಶಿಷ್ಯಬಳಗದ ಕಾರ್ಯ ಶ್ಲಾಘನೀಯವೆಂದು ಹೇಳಿದರು. ನಾನು ಕಲಿಸಿದ ವಿದ್ಯಾರ್ಥಿ ಬೆಳಗಾವಿ ಜಿಲ್ಲೆ ಪೋಲಿಸ್ ವರಿಷ್ಠಾಧಿಕಾರಿ ಲಕ್ಷಣ ನಿಂಬರ್ಗಿ ಸಾಧನೆ ವೈಖರಿ ಬಗ್ಗೆ ಹರ್ಷವ್ಯಕ್ತಪಡಿಸಿದರು.
ವಿದ್ಯಾರ್ಥಿ ಬಳಗದ ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿ ಮಾತನಾಡಿ, ನನಗೆ ಹಾಗೂ ನನ್ನ ಸ್ನೇಹಿತರ ಬಳಗಕ್ಕೆ ಉಜ್ವಲ ಭವಿಷ್ಯ ರೂಪಿಸಿದ ಶಿಕ್ಷಕರ ವೃಂದ, ಪಾಲಕರು, ಹೆಚ್ಚಿನ ಆಸಕ್ತಿವಹಿಸಿ, ಮಾರ್ಗದರ್ಶನ ಮಾಡಿ ಕಲಿಸಿದ ಪ್ರಯುಕ್ತ ಇಂದು ಉನ್ನತ ಹುದ್ದೆಯಲ್ಲಿ ಸೇವೆ ಮಾಡುವ ಸೌಭಾಗ್ಯ ಲಭಿಸಿದೆ.ಗುರುವಂದನೆ ಮೂಲಕ ಗುರುಸ್ಮರಣೆ ಮಾಡುವ ಈ ಸಮಾರಂಭ ಅವಿಸ್ಮರಣೀಯವೆಂದು ಹೇಳಿದರು.
ವಿದ್ಯಾರ್ಥಿ ಬಳಗದ ಪಾಲಿಟೆಕ್ನಿಕಲ್ ಕಾಲೇಜನ ಪ್ರಾಚಾರ್ಯರು.

Related posts

ಸಿಎ ಪಾಸಾದ ತುಮರಿಕೊಪ್ಪ ಪ್ರತಿಭೆ: ಕ್ಲೇವನ್ ಡಯಾಸ್

eNEWS LAND Team

ಬಮ್ಮಿಗಟ್ಟಿಯಲ್ಲಿ ಅಂಕಲಗಿ ಅಡವಿ ಸಿದ್ದೇಶ್ವರ ಜಾತ್ರೆ

eNEWS LAND Team

ನನ್ನ ಗುರಿ ಗೊತ್ತಿದೆ ಆದರೆ ನನ್ನ ವಿಧಿ ಗೊತ್ತಿಲ್ಲ :ಫಾದರ್ ರಾಯಪ್ಪ ಇನ್ನಿಲ್ಲ

eNEWS LAND Team