32 C
Hubli
ಮೇ 6, 2024
eNews Land
ಜಿಲ್ಲೆ ರಾಜಕೀಯ ರಾಜ್ಯ

ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆ ಘೋಷಣೆ; ಮೇ 19ಕ್ಕೆ ಅಧಿಸೂಚನೆ  -ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಇಎನ್ಎಲ್ ಧಾರವಾಡ: ಕರ್ನಾಟಕ ವಿಧಾನಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣಾ ಘೋಷಣೆಯಾಗಿದ್ದು ಇಂದಿನಿಂದಲೇ ಜಿಲ್ಲೆಯಾದ್ಯಂತ ಚುನಾವಣೆ ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು(ಗುರುವಾರ) ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,ಚುನಾವಣಾ ಸಂಹಿತೆಯು ಇಂದಿನಿಂದಲೇ ಜಾರಿಯಲ್ಲಿದ್ದು, ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ನೀತಿ ಸಂಹಿತೆಯು ಅನ್ವಯಿಸುವದಿಲ್ಲ ಆದರೆ ಹೊಸ ಕಾಮಗಾರಿಗಳು ಅಥವಾ ಯೋಜನೆಗಳನ್ನು ಘೋಷಿಸಲು ಅವಕಾಶ ಇರುವದಿಲ್ಲ.
ಚುನಾವಣಾ ಅಧಿಸುಚನೆಯನ್ನು ಮೇ 19 ಗುರುವಾರದಂದು ಹೊರಡಿಸಲಾಗುವದು.ಮೇ 26 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುತ್ತವೆ. ಮೇ.27 ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುವದು.ಮೇ.30 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಜೂನ್ 13 ಸೋಮವಾರದಂದು ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ ಹಾಗೂ ಜೂನ್ 15 ರಂದು ಮತ ಎಣಿಕೆ ನೆಡಸಲಾಗುವದು ಎಂದರು.
ಕರ್ನಾಟಕ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರವು ಬೆಳಗಾವಿ, ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡಿರುತ್ತದೆ. ಜಿಲ್ಲೆಯಲ್ಲಿ 3162 ಪುರುಷ ಹಾಗೂ 2727 ಮಹಿಳಾ ಶಿಕ್ಷಕರು ಸೇರಿದಂತೆ ಒಟ್ಟು 5889 ಶಿಕ್ಷಕ ಮತದಾರರು ಇದ್ದಾರೆ. ಜಿಲ್ಲೆಯಲ್ಲಿ 21 ಮತಗಟ್ಟೆಗಳನ್ನು ಗುರುತಿಸಲಾಗಿದೆ.ಪ್ರತಿ 16 ಕಿ.ಮೀ.ಸುತ್ತಲಿನ ವ್ಯಾಪ್ತಿಗೆ ಒಂದರಂತೆ ಮತಗಟ್ಟೆ ಸ್ಥಾಪಿಸಲು ನಿರ್ದೇಶನವಿದೆ.

ಇದನ್ನೂ ಓದಿ

ಮೇ 28 ಹುಧಾ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ

ಆಯೋಗದ ನಿರ್ದೇಶನದಂತೆ ಮತಗಟ್ಟೆಗಳು ಇರಲಿವೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯನ್ನು ಇಂದು ನಡೆಸಿ ಮಾಹಿತಿ ನೀಡಲಾಗಿದೆ.ಧಾರವಾಡದಲ್ಲಿಯೇ ಮತ ಎಣಿಕೆ ಕೇಂದ್ರ ಸ್ಥಾಪಿಸಲು ಪಕ್ಷಗಳ ಪ್ರತಿನಿಧಿಗಳು ಮನವಿ ಮಾಡಿದ್ದಾರೆ.ಈ ಕುರಿತು ಚುನಾವಣಾಧಿಕಾರಿಗಳಾಗಿರುವ ,ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮಾಹಿತಿ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಉಪಸ್ಥಿತರಿದ್ದರು.

 

Related posts

ಡಾ.ಕ್ರಾಂತಿ ಕಿರಣ ಪರ ಮತಯಾಚಿಸಿದ ಹುಬ್ಬಳ್ಳಿ,-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು

eNEWS LAND Team

ಬಿಜೆಪಿ ಸರ್ಕಾರದಲ್ಲೇ ಅಭಿವೃದ್ಧಿ ಹೆಚ್ಚು ವೇಗ ! : ಸಿಎಂ ಬೊಮ್ಮಾಯಿ

eNEWS LAND Team

ಜನರ ಅಭೂತಪೂರ್ವ ಬೆಂಬಲ ಸಿಕ್ಕಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

eNEWS LAND Team