27 C
Hubli
ಮಾರ್ಚ್ 28, 2023
eNews Land
ರಾಜ್ಯ

ಬಿಜೆಪಿ ಸರ್ಕಾರದಲ್ಲೇ ಅಭಿವೃದ್ಧಿ ಹೆಚ್ಚು ವೇಗ ! : ಸಿಎಂ ಬೊಮ್ಮಾಯಿ

Listen to this article

ಸಿಂದಗಿ-( ಕಕ್ಕಳಮೇಲಿ):

     ಬಿಜೆಪಿ ಸರ್ಕಾರದ ಅವಧಿಯಲ್ಲೇ ಅಭಿವೃದ್ಧಿ ಕಾರ್ಯಗಳು ಹೆಚ್ಚು ವೇಗ ಪಡೆಯುತ್ತವೆ. ನೀರಾವರಿ ಯೋಜನೆಗಳು ನಮ್ಮ ಸರ್ಕಾರದ ಅವಧಿಯಲ್ಲೆ ಹೆಚ್ಚು ಕಾರ್ಯರೂಪಕ್ಕೆ ಬಂದಿವೆ ಎಂದು‌ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು

          ಗುತ್ತಿ ಬಸವಣ್ಣ ಏತನೀರಾವರಿ, ಚಿಮ್ಮಲಗಿ ಏತನೀರಾವರಿಗಳೇ ಇದಕ್ಕೆ ಸಾಕ್ಷಿ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಯೋಜನೆಗಳನ್ನು ನಿರ್ಲಕ್ಷ ಮಾಡಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಂಧಗಿ ಮತಕ್ಷೇತ್ರದ ಕಕ್ಕಳಮೇಲಿ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಭಾಷಣದಲ್ಲಿ ವಾಗ್ದಾಳಿ ನಡೆಸಿದರು.

      ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಯಾರ ಬಗ್ಗೆಯೂ ಆಲೋಚಿಸುವುದಿಲ್ಲ. ಅಧಿಕಾರ ಕಳೆದುಕೊಂಡು ನಂತರ ಚುನಾವಣೆ ಸಂದರ್ಭದಲ್ಲಿ ಮಾತ್ರ ಮನೆ ಬಾಗಿಲಿಗೆ ಬರುತ್ತದೆ ಎಂದು ನುಡಿದರು.

ಸಿಂಧಗಿಯಲ್ಲಿ ಒಂದು ಲಕ್ಷ ಎಕರೆಗಿಂತ ಹೆಚ್ಚು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವಂತಹ ಸೌಭಾಗ್ಯ ನಮ್ಮ ಸರ್ಕಾರಕ್ಕೆ ದೊರೆತಿದೆ. ನಾವು ಆರಂಭ ಮಾಡಿದ ಯೋಜನೆಗಳನ್ನು ನಾವೇ ಉದ್ಘಾಟನೆ ಮಾಡುವುದು ಸಂತಸದ ವಿಷಯ ಎಂದು ಬೊಮ್ಮಾಯಿ ಹರ್ಷ ವ್ಯಕ್ತ ಪಡಿಸಿದರು.

      ಬಿಜೆಪಿ ಸರ್ಕಾರ ಕರ್ನಾಟಕದ ಅಭಿವೃದ್ಧಿ, ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ಸೌಲಭ್ಯ, ರೈತರ ಜೀವನ ಜೀವನ ಸುಧಾರಿಸುವ ಕುರಿತು ನಾವು ಮಾತನಾಡುತ್ತಿದ್ದೇವೆ. ಆದರೆ ಕಾಂಗ್ರೆಸ್ ಸುಳ್ಳಿನ ಸರಮಾಲೆಯನ್ನು ಹೆಣೆದು ಚುನಾವಣೆ ಗೆಲ್ಲುವ ಹುನ್ನಾರದಲ್ಲಿದ್ದಾರೆ. ಎರಡು ಕ್ಷೇತ್ರದಲ್ಲಿ ಅವರ ಆಸೇ ಇಡೇರುವುದಿಲ್ಲ ಎಂದು ಬೊಮ್ಮಾಯಿ ಅವರು ವಿಶ್ವಾಸ ವ್ಯಕ್ತ ಪಡಿಸಿದರು.

    ಕಾಂಗ್ರೆಸ್ ನವರು ಬಿಜೆಪಿ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸುತ್ತಾರೆ. ಇವರ ಒಳ ಒಪ್ಪಂದದಿಂದಲೇ ಸರ್ಕಾರ ಸಮ್ಮೀಶ್ರ ಸರ್ಕಾರ ರಚನೆ ಯಾಗಿ ಪತನಗೊಂಡಿದೆ. ಮೊದಲು ನಿಮ್ಮ ನಿಮ್ಮ ವ್ಯವಾಹಾರದ ಒಪ್ಪಂದಗಳನ್ನು ಮುಗಿಸಿಕೊಳ್ಳಿ ಎಂದು ಎರಡು ಪಕ್ಷದವರನ್ನು ಬೊಮ್ಮಾಯಿ ಕಾಲೆಳೆದರು.

ನಮ್ಮ ಒಪ್ಪಂದ ಏನಿದ್ದರು ಸಿಂಧಗಿಯ ಜನತೆಯೊಂದಿಗೆ ಇದೆ, ಇಲ್ಲಿನ ರೈತರ ಜೊತೆ, ಅಭಿವೃದ್ಧಿಯ ಜೊತೆ, ಯುವಕರ ಜೊತೆ, ನಮ್ಮ ತಾಂದಿರ ಜೊತೆ, ಇಲ್ಲಿನ ಹಿಂದುಳಿದ ವರ್ಗದವರ ಜೊತೆ ನಮ್ಮ ಒಪ್ಪಂದವಾಗಿದೆ ಎಂದು ಅವರು ಹೇಳಿದರು.

 

Related posts

ಜ.21 ದಾಸೋಹ ದಿನಾಚರಣೆ

eNEWS LAND Team

ಬಿಟ್ ಕಾಯಿನ್ ಹಗರಣದ ಬಗ್ಗೆ ದಾಖಲೆಗಳಿದ್ದರೆ ತನಿಖಾ ಸಂಸ್ಥೆಗಳಿಗೆ ನೀಡಿ- ಸಿಎಂ ಬೊಮ್ಮಾಯಿ

eNEWS LAND Team

ಬೆಂಗಳೂರು ಮಿಷನ್ 2022 ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಬೊಮ್ಮಾಯಿ

eNEWS LAND Team