29 C
Hubli
ಮೇ 3, 2024
eNews Land
ಸುದ್ದಿ

ಕಾಮಸಮುದ್ರ ಗ್ರಾಮದಲ್ಲಿ ಅದ್ಧೂರಿ ಅಂಬೇಡ್ಕರ ಜಯಂತಿ

ಇಎನ್ಎಲ್ ಬಂಗಾರಪೇಟೆ: ತಾಲೂಕಿನ ಕಾಮಸಮುದ್ರ ಗ್ರಾಮದಲ್ಲಿ ಜೈ ಭೀಮ್ ಸೇನೆಯ ವತಿಯಿಂದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ 131 ನೇ ಜನ್ಮ ದಿನಾಚರಣೆ ಆಚರಿಸಲಾಯಿತು, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಾಮಸಮುದ್ರ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ವಿಠ್ಠಲ ತಳವಾರ ಮತ್ತು ಡಿಎಸ್ಎಸ್ ಜಿಲ್ಲಾ ಅಧ್ಯಕ್ಷ ಕೆ ಪಿ ಕೃಷ್ಣ ಆಗಮಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಹೂ ಮಾಲೆಯನ್ನು ಹಾಕಿ ಕೇಕನ್ನು ಕತ್ತರಿಸುವ ಮೂಲಕ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜೈಭೀಮ್ ಸೇನೆಯ ಅಧ್ಯಕ್ಷ ಎಮ್.ನಾರಾಯಣಕುಮಾರ ಮತ್ತು ಉಪಾಧ್ಯಕ್ಷ ಎಸ್.ಶ್ರೀನಿವಾಸ್ ಹಾಗೂ ಡಿಎಸ್ಎಸ್ ಎಮ್.ಮುನಿವೆಂಕಟಪ್ಪ, ಶಿವಕುಮಾರ್, ಪತ್ತಾವುಲ್ಲ ಖಾನ್, ಕೆ.ಜೆ.ಜಗನ್, ಅಭಿರಾಮ್, ಅನಿಲ್ ಕೆ, ಸೇರಿದಂತೆ ಗ್ರಾಮಸ್ಥರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕಾಮಸಮುದ್ರ ಗ್ರಾಮದಲ್ಲಿ ಮೈರಾಡ ಸಂಸ್ಥೆಯ ವೃಷಭಾವತಿ ಕೃಷಿ ರೈತ ಉತ್ಪಾದಕರ ಕಂಪನಿ ವತಿಯಿಂದ ಸಂವಿಧಾನ ಶಿಲ್ಪಿ   ಅಂಬೇಡ್ಕರ 131 ನೇ ಜಯಂತಿಯನ್ನು ಆಚರಿಸಲಾಯಿತು, ಈ ಕಾರ್ಯಕ್ರಮಕ್ಕೆ ಡಾ.ಬಾಬಾ ಸಾಹೇಬ್.ಅಂಬೇಡ್ಕರ ಭಾವಚಿತ್ರವನ್ನು ಮೆರವಣಿಗೆ ಮೂಲಕ  ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

 

ಗ್ರಾಮ ಪಂಚಾಯತಿ ವತಿಯಿಂದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ. ಆರ್.ಬಾಬಾ ಸಾಹೇಬ್  ಅಂಬೇಡ್ಕರ್ ರವರ 131 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು, ಈ ಕಾರ್ಯಕ್ರಮಕ್ಕೆ ಗ್ರಾಪಂ.ಅಧ್ಯಕ್ಷೆ ಕಾವೇರಿ ಆದಿನಾರಾಯಣ ಕಾಮಸಮುದ್ರ ಆಗಮಿಸಿ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಹೂ ಮಾಲೆಯನ್ನು ಹಾಕಿನoತರ ಅಂಬೇಡ್ಕರ್ ಭಾವಚಿತ್ರವನ್ನು ಇಟ್ಟಕೊಂಡು ಮೆರವಣಿಗೆ ಮೂಲಕ ಬಂಗಾರಪೇಟೆಗೆ ಹೊರಡಿತು ಹಾಗೂ 22  ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಮತ್ತು ಗ್ರಾಮಸ್ಥರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related posts

ಅಣ್ಣಿಗೇರಿ ಬರಗಾಲ ಪ್ರದೇಶ  ಘೋಷನೆ ಆಗಿಲ್ಲ ಯಾಕೆ? ಇಲ್ಲಿನ ಶಾಸಕರು, ತಾಲೂಕ ಆಡಳಿತಾಧಿಕಾರಿಗಳು, ರೈತ ಮುಖಂಡರು ಅಸಮರ್ಥರಾ???

eNEWS LAND Team

ಸಾಲಬಾಧೆ; ಹುಬ್ಬಳ್ಳಿ ರೈತ ಆತ್ಮಹತ್ಯೆ

eNewsLand Team

ದೀಪಾವಳಿ ಹೀಗೂ ಆಚರಿಬಹುದು ಎಂದು ತೋರಿಸಿದ ಹಾವೇರಿ ಡಿಸಿ

eNEWS LAND Team