27 C
Hubli
ಏಪ್ರಿಲ್ 20, 2024
eNews Land
ಸುದ್ದಿ

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಾಗ ತಹಸೀಲ್ದಾರ ಯಲ್ಲಪ್ಪ ಗೊಣ್ಣೆನ್ನವರ  ಏನ..ಹೇಳ್ಯಾರ್ ನೋಡ್ರಿ!

ನೀರು-ವಿದ್ಯುತ್ ರಕ್ಷಣೆ ನಮ್ಮೆಲ್ಲರ ಹೊಣೆ: ತಹಸೀಲ್ದಾರ ಯಲ್ಲಪ್ಪ ಗೊಣ್ಣೆನ್ನವರ

ಇಎನ್ಎಲ್ ಕಲಘಟಗಿ: ತಾಲೂಕಿನ ಎಮ್ಮೆಟ್ಟಿ ಗ್ರಾಮದ ಕಡೆ ”ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ” ಕಾರ್ಯಕ್ರಮಕ್ಕೆ ಆಗಮಿಸಿದ ಕಂದಾಯ ಇಲಾಖೆ ದಂಡು. ವಿದ್ಯುತ್-ನೀರು ನಮ್ಮ ನಿತ್ಯ ಜೀವನದ ಪ್ರಮುಖ ವಸ್ತುಗಳು, ಇವುಗಳ ಬಳಕೆ ಮತ್ತು ರಕ್ಷಣೆ ನಮ್ಮೆಲ್ಲರ ಹೊಣೆ ಇವು ಸರ್ಕಾರದ ವಸ್ತುಗಳಲ್ಲ, ನಿಮ್ಮದೆಂದೇ ಭಾವಿಸಿ ರಕ್ಷಿಸಿ ಎಂದ ತಹಸೀಲ್ದಾರ ಯಲ್ಲಪ್ಪ ಗೊಣ್ಣೆನ್ನವರ.

ಇದನ್ನೂ ಓದಿ:ಕಲಘಟಗಿಯಲ್ಲಿ ಬಾಬಾ ಸಾಹೇಬ ಅಂಬೇಡ್ಕರ್ ಪ್ರತಿಮೆ ಇಲ್ಲ : ಶಾಸಕ ನಿಂಬಣ್ಣವರ

ಜಿಲ್ಲಾಡಳಿತ ಹಾಗೂ ತಾಲೂಕಾ ಆಡಳಿತ ಕಲಘಟಗಿ ಇವರ ಸಂಯುಕ್ತಾಶ್ರಯದಲ್ಲಿ ಎಮ್ಮೆಟ್ಟಿ ಗ್ರಾಮದಲ್ಲಿ ಏರ್ಪಡಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯುತ್ ಹಾಗೂ ನೀರೀನ ಕುರಿತು ತುಂಬಾ ದೂರುಗಳು ಬಂದಿವೆ. ಒಂದು ವಾರದೊಳಗೆ ಸರಿಪಡಿಸಿರಿ ಎಂದು ಅಧಿಕಾರಿ ಸಾಲಿಮಠ ಅವರಿಗೆ ಖಡಕ್ ಆಗಿ ಸೂಚಿಸಿದರು. ನಮ್ಮ ಗ್ರಾಮ ಲೆಕ್ಕಾಧಿಕಾರಿಗಳು ಗಂಬ್ಯಾಪುರ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡುವ ಎಲ್ಲ ಗ್ರಾಮಗಳಿಗೂ ತೆರಳಿ 84 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 61 ಸಮಸ್ಯೆಗಳನ್ನು ಆಯಾ ಇಲಾಖೆ ಗಮನಕ್ಕೆ ತಂದು ಸಾಧ್ಯವಾದಷ್ಟು ಬಗೆಹರಿಸಿದ್ದಾರೆ. ಇಂದು 59 ಅರ್ಜಿಗಳು ಬಂದಿವೆ. ಇದು ಸರ್ಕಾರಿ ಕಾರ್ಯಕ್ರಮ, ತಾವು ನಿರಂತರವಾಗಿ ಇಲಾಖೆಗಳ ಸಂಪರ್ಕಗಳಲ್ಲಿದ್ದು, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿರಿ, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೀರಿ, ಹಾಗೂ ಎಲ್ಲರಿಗೂ ಹನುಮ ಜಯಂತಿಯ ಶುಭಾಶಯಗಳನ್ನು ಕೋರಿದರು.

ಇದನ್ನೂ ಓದಿ:ಕಾಮಸಮುದ್ರ ಗ್ರಾಮದಲ್ಲಿ ಅದ್ಧೂರಿ ಅಂಬೇಡ್ಕರ ಜಯಂತಿ

           ಕೃಷಿ ವಿಸ್ತರಣಾ ಅಧಿಕಾರಿ ಎನ್.ಎಫ್.ಕಟ್ಟೇಗೌಡರ ಮಾತನಾಡಿ ಸರಿಯಾದ ಸಮಯಕ್ಕೆ ಮುಂಗಾರು ಉತ್ತಮ ಮಳೆಯಾಗಿದೆ, ಇಲಾಖೆಯಲ್ಲಿ ಹಂಗಾಮಿಗೆ ಸಂಬಂಧಪಟ್ಟಂತೆ ಯೋಜನೆಗಳು ಇರುತ್ತವೆ, ಸೋಯಾ ಅವರೆ ರೈತನಿಗೆ ಅನುಕೂಲಕರ ಬೆಳೆ ಇದ್ದು, ಮೇ 28ರ ಒಳಗೆ ಬಿತ್ತನೆ ಮುಗಿಸಿರಿ ಎಂದರು.

ಇದನ್ನೂ ಓದಿ:ಹುದ್ದೆ ಮುಖ್ಯ ಅಲ್ಲ, ಸಂಘಟನೆ ಮುಖ್ಯ: ಎಮ್.ಅರವಿಂದ
        ಗ್ರಾಮ ಸಂಚಾರದಲ್ಲಿ 2 ವರ್ಸ ಆತ್ರಿ ಮನಿ ಬಿಲ್ಲ ಆಗಿಲ್ರಿ, ಸ್ಮಶಾನದಾಗ್ ಕರೆಂಟಿಲ್ರಿ, ಮೂರ ಕಂಬ ಸಾಕ್ರಿ, ಮೊದಲ ಚಿಮಣಿ ಎಣ್ಣಿ ಸಿಗತಿತ್ತ್ರಿ ಹಿಲಾಲ ಮಾಡ್ಕೊಂಡ್ ಹೊಕ್ಕಿದ್ದೀವ್ರಿ, ಆದಷ್ಟ ದೌಡ್ ಕರೆಂಟ ಕೊಡಸ್ರಿ, ಎಂದು ಊರ ಹಿರಿಯರಾದ ಬಸಪ್ಪ ತಡಸದ ಕೇಳಿಕೊಂಡರು. ಅಂಗವಿಕಲರ, ವಿಧವೆಯರ,ಹಿರಿಯ ನಾಗರಿಕರ ಮಾಶಾಸನಗಳು ಬಾಳ್ ಬಾಕಿ ಅದಾವ್ರಿ ಎಂದು ರವೀಂದ್ರ ಹುಬ್ಬಳ್ಳಿ ದೂರಿದರು. ಹರಿಜನ ಕೇರಿಯಲ್ಲಿ ಚರಂಡಿಯ ಅವ್ಯವಸ್ಥೆ, ರಸ್ತೆ ಮಧ್ಯದಲ್ಲಿ ವಾಲಿದ ವಿದ್ಯುತ್ ಕಂಬ, ಮುಂತಾದ ದೂರುಗಳು ಕೇಳಿ ಬಂದವು. ಗಂಬ್ಯಾಪುರ ಗ್ರಾಮ ಮಧ್ಯದಲ್ಲಿ ಟಿ.ಸಿ.ಯಿಂದ ನಿರಂತರ ಕಿಡಿಗಳು ಹಾರುತ್ತಿದ್ದು, ಅನಾಹುತ ಸಂಭವಿಸಿದರೇ  ಅಧಿಕಾರಿಗಳೇ ಹೊಣೆ ಎಂದು ಗ್ರಾಪಂ. ಉಪಾಧ್ಯಕ್ಷ ರುದ್ರಯ್ಯ ಚಿಕ್ಕಮಠ ಹೇಳಿದರು.

ಇದನ್ನೂ ಓದಿ:ಮನಕುಲ ಕಲ್ಯಾಣವೇ  ರೇಣುಕಾಚಾರ್ಯರ ಸಂದೇಶ: ಅಭಿನವ ಪಂಚಾಕ್ಷರಿ ಶಿವಾಚಾರ್ಯ ಶ್ರೀಗಳು
          ಕಾರ್ಯಕ್ರಮದಲ್ಲಿ ನಿಂಗಪ್ಪ ಜಮ್ಮಿಹಾಳ್ ಅವರಿಗೆ ಕೃಷಿ ಇಲಾಖೆ ವತಿಯಿಂದ 50 ಸಾವಿರ ರೂ. ಧನ ಸಹಾಯದ ರೋಟಾವೇಟರ ಹಸ್ತಾಂತರಿಸಿದರು. ಉಚಿತ ಆರೋಗ್ಯ ತಪಾಸಣೆ, ಜಾನುವಾರು ತಪಾಸಣೆ ಏರ್ಪಡಿಸಲಾಗಿತ್ತು. ಮಕ್ಕಳಿಂದ ಭಾವಗೀತೆ, ನೃತ್ಯಗಳು ನಡೆದವು. ಗ್ರೇಡ್ 2 ತಹಶಿಲ್ದಾರ ರವೀಂದ್ರ ಹಾದಿಮನಿ, ಅರಣ್ಯ ಇಲಾಖೆ ಅಧಿಕಾರಿ ಶ್ರೀಕಾಂತ ಪಾಟೀಲ, ಪ್ರಾಥಮಿಕ ಆರೋಗ್ಯ ಕೇಂದ್ರ ಅಧಿಕಾರಿ ಡಾ.ಬಾಸೂರ, ಪೋಲಿಸ್ ಇನ್ಸ್ಪೆಕ್ಟರ್ ಪ್ರಭು ಸೂರಿನ, ತೋಟಗಾರಿಕೆ ಅಧಿಕಾರಿ ಮಹಾಂತೇಶ ಪಟ್ಟಣಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ, ಗ್ರಾಮ ಲೆಕ್ಕಾಧಿಕಾರಿ ಧ್ರುವಕುಮಾರ ಹೊಸಳ್ಳಿ.  ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಗ್ರಾಮ ಪಂಚಾಯತಿಯ ಎಲ್ಲ ಸದಸ್ಯರುಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಇದನ್ನೂ ಓದಿ:ದಿವಾಳಿ ಆಗಿಲ್ಲ: ಕಲಘಟಗಿ ಅರ್ಬನ್ ಬ್ಯಾಂಕ್ ಸ್ಪಷ್ಟಣೆ

Related posts

EXTENSION OF PERIODICITY OF TRAINS

eNEWS LAND Team

ಹುಬ್ಬಳ್ಳಿಯ ಐತಿಹಾಸಿಕ ಚಂದ್ರಮೌಳೇಶ್ವರ‌ ದೇವಸ್ಥಾನ ಇನ್ನಾದ್ರೂ ಅಭಿವೃದ್ಧಿ ಆಗತ್ತಾ?

eNewsLand Team

ಧಾರವಾಡ ಚುನಾವಣಾ ಅಖಾಡ ಫೈನಲ್; ಕಣದಿಂದ ಓಡಿಹೋದವರ್ಯಾರು ಗೊತ್ತಾ?

eNEWS LAND Team