24.3 C
Hubli
ಮೇ 26, 2024
eNews Land
ಕೃಷಿ ಸುದ್ದಿ

ಅಣ್ಣಿಗೇರಿ ಬರಗಾಲ ಪ್ರದೇಶ  ಘೋಷನೆ ಆಗಿಲ್ಲ ಯಾಕೆ? ಇಲ್ಲಿನ ಶಾಸಕರು, ತಾಲೂಕ ಆಡಳಿತಾಧಿಕಾರಿಗಳು, ರೈತ ಮುಖಂಡರು ಅಸಮರ್ಥರಾ???

ಅಣ್ಣಿಗೇರಿ ತಾಲೂಕ ಬರಗಾಲ ಪ್ರದೇಶವೆಂದು ಘೋಷಿಸಲು ಆಗ್ರಹ!!!
ಬರಗಾಲ ಪ್ರದೇಶ ಎಂದು ಘೋಷಣೆ ಆಗುವರೆಗೆ ಇದನ್ನು ಶೇರ್ ಮಾಡಿ…….

ಇಎನ್‌ಎಲ್ ಅಣ್ಣಿಗೇರಿ: ಸರ್ಕಾರ ಘೋಷಿಸಿದ ಬರಗಾಲ ತಾಲೂಕ ಪ್ರದೇಶ ಪಟ್ಟಿಯಲ್ಲಿ ಅಣ್ಣಿಗೇರಿ ತಾಲೂಕ ಸೇರ್ಪಡೆ ಆಗಿಲ್ಲದಿರೋದು ತಾಲೂಕಿನ ರೈತ ಮುಖಂಡರಲ್ಲಿ ಆತಂಕ ಹೆಚ್ಚಿಸಿದೆ. ಇನ್ನುಳಿದ ತಾಲೂಕ ಪಟ್ಟಿಯಲ್ಲಿ ಸರ್ಕಾರ ಬರಗಾಲದ ಮಾನದಂಡಗಳನ್ನು ಅವಲೋಕಿಸಿ, ಪರಿಶೀಲಿಸಿ, ಬರಗಾಲ ಪ್ರದೇಶವೆಂದು ಘೋಷಿಸಲು ಒತ್ತಾಯಿಸಿದ್ದಾರೆ.

ತಾಲೂಕಿನ 35,969 ಹೆಕ್ಟರ್ ಸಾಗುವಳಿ ಭೂಮಿಯಲ್ಲಿ 15,967 ಹೆಕ್ಟರ್ ಭೂಮಿ ಮಾತ್ರ ಬಿತ್ತನೆಯಾಗಿದೆ. ಹವಾಮಾನ ವೈಪರಿತ್ಯದಿಂದ ಸಕಾಲಕ್ಕೆ ಮಳೆ ಬಾರದೇ, ಮುಂಗಾರಿನ ಹೆಸರು, ಉದ್ದು, ಗೋವಿನಜೋಳ, ಹೈಬ್ರೀಡ್ ಹತ್ತಿ, ಶೇಂಗಾ, ಬೆಳೆಗಳು ಮುಂಗಾರಿನ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಬಿತ್ತನೆ ಕಾರ್ಯ ಕುಂಠಿತಗೊ೦ಡಿದೆ. 4445 ಹೆಕ್ಟರ್ ಭೂಮಿಯಲ್ಲಿ ಹೆಸರು, 24 ಹೆಕ್ಟರ್ ಭೂಮಿಯಲ್ಲಿ ಉದ್ದು, 9852 ಹೆಕ್ಟರ್ ಭೂಮಿಯಲ್ಲಿ ಗೋವಿನಜೋಳ, 1158 ಹೆಕ್ಟರ್ ಭೂಮಿಯಲ್ಲಿ ಹೈಬ್ರೀಡ್ ಹತ್ತಿ, 488 ಹೆಕ್ಟರ್ ಭೂಮಿಯಲ್ಲಿ ಶೇಂಗಾ ಒಟ್ಟು 15,967 ಹೆಕ್ಟರ್ ಭೂಮಿಯಲ್ಲಿ ಬಿತ್ತನೆಯಾಗಿದೆ.

ಈ ಭಾಗದ ಜನರಿಗೆ ಮುಂಗಾರು ಬೆಳೆಗಳು ವರ್ಷಗಟ್ಟಲೇ ಬದುಕು ಕಟ್ಟುಕೊಳ್ಳುವಲ್ಲಿ ಸಹಕಾರಿ ಆಗುತ್ತಿದ್ದವು ಆದರೆ ಮುಂಗಾರಿನ ಹೆಸರು ಹಾಗೂ ಹಿಂಗಾರಿನ ಕಡಲೆ ಬೆಳೆಗಳು ಹೆಚ್ಚು ಬಿತ್ತನೆ ಮಾಡುತ್ತಿದ್ದ ರೈತರು ಈ ವರ್ಷ ಮಳೆ ಪ್ರಮಾಣದಲ್ಲಿ ಎರಿಳಿತದಿಂದ ಬಿತ್ತನೆ ಕಾರ್ಯ ಕುಂಠಿತಗೊ೦ಡಿವೆ.

ಹೆಸರು ಬೆಳೆಗಳಿಗೆ ಎಲೆ ತಿನ್ನುವ ಕೀಟಭಾದೆ ಹಾಗೂ ರಸಹೀರುವ ಕೀಟಗಳ ಭಾದೆಯಿಂದ ಭಿತ್ತನೆ ಬೆಳೆಗಳು ನಶಿಸಿವೆ. ಬೆಳೆಗಳು ಇಳುವರಿ ಪ್ರಮಾಣ ಕಡಿಮೆಯಾಗಿದೆ. ಖರ್ಚು ಮಾಡಿದಷ್ಟು ಆದಾಯ ಬರದೇ ಹತಾಶರಾಗುವ ಪರಿಸ್ಥಿತಿ ರೈತರದಾಗಿದೆ. ರೈತರು ಬ್ಯಾಂಕ್ ಸಾಲ, ಕೈಗಡ ಸಾಲ,ಮಾಡಿ ಲಾವಣಿ, ಕೋರು, ಮಾಡಿ ಹೊಲಗದ್ದೆಗಳಲ್ಲಿ ಬೀಜ, ಗೊಬ್ಬರ, ಕ್ರೀಮಿನಾಶಕ, ಆಳುಕಾಳು ಬಿತ್ತನೆಯಿಂದ ಖರ್ಚಿನ ವೆಚ್ಚದಷ್ಟು ಆದಾಯ ಬರುವುದಿಲ್ಲ. ಸಕಾಲಕ್ಕೆ ಕೈಕೊಟ್ಟ ಮುಂಗಾರು ಮಳೆಯಿಂದ ಅಲ್ಪ ಬಿತ್ತನೆಯಿಂದ ರೈತರು ಸಂಕಷ್ಟ ಪರಿಸ್ಥಿತಿ ಎದುರಿಸಬೇಕಿದೆ.

ಅಣ್ಣಿಗೇರಿ ತಾಲೂಕ ಬರಗಾಲ ಪ್ರದೇಶವೆಂದು ತಾಲೂಕ ಆಡಳಿತ ಅಧಿಕಾರಿಗಳು ಸರ್ಕಾರಕ್ಕೆ ನೈಜ ಸಂಗತಿಯ ವರಿದಿ ಅಂಕಿ ಸಂಖ್ಯೆಗಳನ್ನು ತಿಳಿಸಲು ವಿಫಲರಾಗಿದ್ದಾರೆ. ಹಲವಾರು ಬಾರಿ ರೈತ ಮುಖಂಡರು ಪ್ರತಿಭಟನೆ ಮಾಡಿ ಸರ್ಕಾರಕ್ಕೆ ವರ್ತಮಾನದ ರೈತರ ಸಂಕಷ್ಟ ಸ್ಥಿತಿಗತಿ ಬಗ್ಗೆ ತಿಳಿಸಿ ಬರಗಾಲ ತಾಲೂಕೆಂದು ಘೋಷಿಸಲು ಮನವಿ ಸಲ್ಲಿಸಿದೆ. ಅದರೂ ಸರ್ಕಾರ ಅಣ್ಣಿಗೇರಿ ತಾಲೂಕ ಬರಗಾಲ ಪ್ರದೇಶವೆಂದು ಘೋಷಿಸಿದ ಕಾರಣ ಶಾಸಕರು ಇಚ್ಛಾಶಕ್ತಿ ತೋರಿ ತಾಲೂಕನ್ನು ಬರಗಾರ ಪ್ರದೇಶ ಪಟ್ಟಿಯಲ್ಲಿ ಸೇರ್ಪಡಿಸಿ ರೈತರಿಗೆ ಆಶ್ರಯದ ನೆರವು ದೊರಕಿಸಬೇಕು. ಬಿಜೆಪಿ ರಾಜ್ಯ ರೈತಮೋರ್ಚಾ ಉಪಾಧ್ಯಕ್ಷ ಷಣ್ಮುಖ ಗುರಿಕಾರ

ಸರ್ಕಾರ ಬರಗಾಲ ಪ್ರದೇಶವೆಂದು ಘೋಷಿಸಲು ನೀಡಿರುವ ಮಾನದಂಡಗಳನ್ನು ಪರೀಶೀಲಿಸಿ ಇನ್ನು 15 ದಿನದೊಳಗೆ ಸರ್ಕಾರ ಬರಗಾಲ ಪ್ರದೇಶವೆಂದು ಘೋಷಿಸಲು ನಿರ್ಣಯ ಕೈಗೊಂಡು ಘೋಷಿತ ತಾಲೂಕಗಳನ್ನು ಹೊರತುಪಡಿಸಿ ಇನ್ನುಳಿದ ತಾಲೂಕಗಳನ್ನು ಬರಗಾಲ ಪಟ್ಟಿಯಲ್ಲಿ ಸೇರ್ಪಡೆ ಮಾಡಬಹುದು. ತಹಶೀಲ್ದಾರ ಶಿವಾನಂದ ಹೆಬ್ಬಳ್ಳಿ

Related posts

ಹುಬ್ಬಳ್ಳಿ ಸಿದ್ಧಾರೂಢಮಠ ಮೂರಸಾವಿರ ಮಠದ ದರ್ಶನ ಪಡೆದ ಜೆ.ಪಿ.ನಡ್ಡಾ

eNEWS LAND Team

ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮ ವೀಕ್ಷಿಸಿದ ಗೃಹಲಕ್ಷ್ಮೀಯರು

eNEWS LAND Team

ಧಾರವಾಡ ಜಿಲ್ಲೆಯ ಅಭ್ಯರ್ಥಿಗಳು ಹಾಗೂ ಕುಟುಂಬಸ್ಥರ ಮತದಾನ ಚಿತ್ರಾವಳಿ

eNewsLand Team